– 24 ಗಂಟೆಗಳಲ್ಲಿ 2ನೇ ಪ್ರಕರಣ
ಲಕ್ನೋ: ಉತ್ತರ ಪ್ರದೇಶದ ಬಂದಾ-ಮಹೋಬಾ ರೈಲು ಹಳಿ ಮೇಲೆ ಬೇಲಿಗೆ ಬಳಸುವ ಕಾಂಕ್ರೀಟ್ ಕಂಬವನ್ನು ಇರಿಸಿದ್ದ ಆರೋಪದ ಮೇಲೆ 16 ವರ್ಷದ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂದಾ-ಮಹೋಬಾ ಮಾರ್ಗವಾಗಿ ಸಂಚರಿಸುತ್ತಿದ್ದ ಪ್ಯಾಸೆಂಜರ್ ರೈಲಿನ ಚಾಲಕ ಹಳಿಗಳ ಮೇಲೆ ಕಾಂಕ್ರೀಟ್ ಕಂಬ ಇರುವುದನ್ನು ಗಮನಿಸಿ ರೈಲನ್ನು ನಿಲ್ಲಿಸಲು ತುರ್ತು ಬ್ರೇಕ್ ಹಾಕಿದ್ದಾರೆ. ಬಳಿಕ ರೈಲ್ವೆ ರಕ್ಷಣಾ ಪಡೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಡಿವೈಡರ್‌ಗೆ ಬಸ್ ಡಿಕ್ಕಿಯಾಗಿ ಸರಣಿ ಅಪಘಾತ – ನಾಲ್ವರು ಮಕ್ಕಳು ಸೇರಿ 7 ಮಂದಿ ದುರ್ಮರಣ
ಆರ್‌ಪಿಎಫ್ ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ ಬಳಿಕ ಅಪ್ರಾಪ್ತನನ್ನು ವಶಕ್ಕೆ ಪಡೆದಿದೆ. ಕಂಬವನ್ನು ರೈಲು ಹಳಿ ಮೇಲೆ ಇರಿಸಿದ್ದನ್ನು ಅಪ್ರಾಪ್ತ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಶನಿವಾರ ಮುಂಜಾನೆ ಬೈರಿಯಾ ಪ್ರದೇಶದಲ್ಲಿ ರೈಲ್ವೇ ಹಳಿಯ ಮೇಲೆ ಹಾಕಲಾಗಿದ್ದ ಕಲ್ಲಿಗೆ ರೈಲು ಇಂಜಿನ್ ಡಿಕ್ಕಿಯಾಗಿತ್ತು. ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಇಸ್ರೇಲಿ ದಾಳಿ; ಒಂದೇ ದಿನ 33 ಮಂದಿ ಸಾವು, 195 ಮಂದಿಗೆ ಗಾಯ