ಫೆ.10ರಂದು ‘ಗರುಡ’ ಚಿತ್ರದ ನಟ ಸಿದ್ಧಾರ್ಥ್ ಮಹೇಶ್ ಮದುವೆ

Public TV
1 Min Read
siddarth mahesh

‘ಸಿಪಾಯಿ’, ‘ಗರುಡ’ ಚಿತ್ರಗಳ ನಟ ಸಿದ್ಧಾರ್ಥ್ ಮಹೇಶ್ (Siddarth Mahesh) ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಮುಂದಿನ ವರ್ಷ ಫೆಬ್ರವರಿಯಲ್ಲಿ ದಾಂಪತ್ಯ (Wedding) ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಇದನ್ನೂ ಓದಿ:ಮುದ್ದಾದ ಮಗಳ ಮುಖ ರಿವೀಲ್ ಮಾಡಿದ ಮಿಲನಾ ದಂಪತಿ

ನಟ ಕಮ್ ನಿರ್ಮಾಪಕನಾಗಿ ಗುರುತಿಸಿಕೊಂಡಿರುವ ಸಿದ್ಧಾರ್ಥ್ ಮಹೇಶ್ ಇದೇ ಫೆ.10ರಂದು ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್‌ನಲ್ಲಿ ವೈಷ್ಣವಿ ಜೊತೆ ಹೊಸ ಬಾಳಿಗೆ ಕಾಲಿಡಲು ರೆಡಿಯಾಗಿದ್ದಾರೆ. ಮೂಲತಃ ವೈಷ್ಣವಿ (Vaishnavi) ಅವರು ಆಂಧ್ರಪ್ರದೇಶದವರಾಗಿದ್ದು, ಇಂಜಿನಿಯರಿಂಗ್ ಓದಿದ್ದಾರೆ.

ಸಿದ್ಧಾರ್ಥ್ ಮತ್ತು ವೈಷ್ಣವಿ ಅವರದ್ದು, ಗುರುಹಿರಿಯರು ನಿಶ್ಚಯಿಸಿದ ಅರೆಂಜ್ ಮ್ಯಾರೇಜ್ ಆಗಿದೆ. ಈ ಮದುವೆಗೆ ಸ್ಯಾಂಡಲ್‌ವುಡ್‌ನ ಕಲಾವಿದರು ಮತ್ತು ರಾಜಕೀಯ ಗಣ್ಯರು ಭಾಗಿಯಾಗಿದ್ದಾರೆ. ದಾಂಪತ್ಯ ಜೀವನಕ್ಕೆ ಕಾಲಿಡಲು ರೆಡಿಯಾಗಿರುವ ನಟನಿಗೆ ಫ್ಯಾನ್ಸ್ ಶುಭಹಾರೈಸಿದ್ದಾರೆ.

Share This Article