Bengaluru | ಬಿಎಂಟಿಸಿ ಬಸ್‌ ಅಪಘಾತ – ದ್ವಿಚಕ್ರವಾಹನ ಸವಾರನಿಗೆ ಪೆಟ್ಟು!

Public TV
2 Min Read
BMTC Bus Accident

ಬೆಂಗಳೂರು: ನಗರದಲ್ಲಿ ಮತ್ತೊಂದು ಬಿಎಂಟಿಸಿ (BMTC) ಬಸ್‍ (Bus) ಅಪಘಾತಕ್ಕೀಡಾಗಿದೆ. ಬಿಎಂಟಿಸಿ ಬಸ್‌ ಹಾಗೂ ದ್ವಿಚಕ್ರ ವಾಹನಗಳ ನಡುವಿನ ಅಪಘಾತದಲ್ಲಿ ಬೈಕ್‌ ಸವಾರನಿಗೆ ಪೆಟ್ಟಾಗಿರುವ ಘಟನೆ ನಡೆದಿದೆ.

BMTC 2

ಮೈಸೂರು ರಸ್ತೆ ಹಳೇ ಗುಡ್ಡದಹಳ್ಳಿ ಬಳಿ ಘಟನೆ ನಡೆದಿದೆ. ಬಿಎಂಟಿಸಿ ಬಸ್‌ ಹಿಂಬದಿಯಿಂದ ಬಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರನ ತಲೆಗೆ ತೀವ್ರ ಪೆಟ್ಟಾಗಿದೆ. ಬಳಿಕ ಆತನನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಸಿಎಂ ವಿರುದ್ಧ ದೂರು ದಾಖಲಿಸಿದ್ದ ಸ್ನೇಹಮಯಿ ಕೃಷ್ಣ ವಿರುದ್ಧ ವಂಚನೆ ಕೇಸ್‌ – RTI ಕಾರ್ಯಕರ್ತ ಸ್ಪಷ್ಟನೆ

ಕಳೆದ ಒಂದು ವಾರದ ಹಿಂದೆಯಷ್ಟೇ ಬಿಎಂಟಿಸಿ ಬಸ್‌ ಅಪಘಾತಕ್ಕೆ (BMTC Bus Accident) ವಿಶೇಷ ಚೇತನ ಬಲಿಯಾದ ಘಟನೆ ಮೆಜೆಸ್ಟಿಕ್‌ ಬಸ್‌ ನಿಲ್ದಾಣದಲ್ಲಿ ನಡೆದಿತ್ತು. ಇದನ್ನೂ ಓದಿ: ವಿಶ್ವಮಟ್ಟದಲ್ಲಿ ಮುಜುಗರ – ಮುಳುಗಿತು Made In China ಪರಮಾಣು ಚಾಲಿತ ಜಲಾಂತರ್ಗಾಮಿ ನೌಕೆ

ಏನಿದು ಅಡಾಸ್ ಸಿಸ್ಟಮ್‌ ಎಲ್ಲಿ ಹೋಯ್ತು?
ಸಿಲಿಕಾನ್ ಸಿಟಿಯಲ್ಲಿ ಬಿಎಂಟಿಸಿ (BMTC) ಬಸ್ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ಬಗ್ಗೆ ಎಚ್ಚೆತ್ತುಕೊಂಡ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿದ್ದರು. ಅಪಘಾತ (Bus Accident) ತಡೆಯಲು ಕೆಲ ಬಸ್‌ಗಳಲ್ಲಿ ಅಡಾಸ್ (ADAS) ಸಿಸ್ಟಮ್‌, ಅಂದ್ರೆ ಅಡ್ವಾನ್ಸ್ ಡ್ರೈವರ್‌ ಅಸಿಸ್ಟೆನ್ಸ್ ಸಿಸ್ಟಮ್ ಅಳವಡಿಕೆ ಮಾಡಿತ್ತು. ಇದನ್ನೂ ಓದಿ: ಹತ್ರಾಸ್‌ನಲ್ಲಿ ಘನಘೋರ ಕೃತ್ಯ – ಶಾಲೆ ಏಳಿಗೆಗಾಗಿ ಶಿಕ್ಷಕರಿಂದಲೇ 11ರ ಬಾಲಕನ ನರಬಲಿ

ಏನಿದು ಅಡಾಸ್‌ ಸಿಸ್ಟಮ್‌?
ಅತ್ಯಾಧುನಿಕ ಟೆಕ್ನಾಲಜಿ ಒಳಗೊಂಡಿರುವ ಈ ಡಿವೈಸ್ ಮುಂಭಾಗದಲ್ಲಿ ಬರುವ ವಾಹನಗಳ ಅಲರ್ಟ್ ಮಾಡುವ ಜೊತೆಗೆ, ಡ್ರೈವರ್ ಅನ್ನು ಸಹ ಮಾನಿಟರ್ ಮಾಡುತ್ತೆ. ಡ್ರೈವರ್ ವಿಭಾಗದಲ್ಲಿ ಅಳವಡಿಸಲಾಗಿರುವ ಐ ವಾಚ್ ಇತರೇ ವಾಹನಗಳ ನಡುವೆ ಅಂತರ ಎಷ್ಟಿದೆ ಎಂಬುದನ್ನ ರೆಡ್ ಸಿಗ್ನಲ್ ಮೂಲಕ ಅಳವಡಿಕೆ ಮಾಡಿದ್ರೆ, ಡ್ರೈವರ್ ಮಾನಿಟರಿಂಗ್ ಸಿಸ್ಟಮ್ ಚಾಲಕ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದರೆ ಅಥವಾ ನಿದ್ರೆಗೆ ಜಾರಿದರೆ ತಕ್ಷಣವೇ ಸಿಗ್ನಲ್‌ ಮೂಲಕ ಎಚ್ಚರಿಕೆ ನೀಡುತ್ತದೆ. ಇದೀಗ ಮತ್ತೆ ಬಿಎಂಟಿಸಿ ಬಸ್‌ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಆಧುನಿಕ ತಂತ್ರಾಜ್ಞಾನ ಎಲ್ಲಿ ಹೋಯ್ತು ಎಂದು ಪ್ರಶ್ನೆ ಮಾಡಿದ್ದಾರೆ.

Share This Article