ಶಿರೂರು ಗುಡ್ಡ ಕುಸಿತ ದುರಂತ; ಮಗನಿಗಾಗಿ ಆಟಿಕೆ ಖರೀದಿಸಿದ್ದ ಮೃತ ಅರ್ಜುನ್

Public TV
1 Min Read
shiruru landslide kerala man arjun

ಕಾರವಾರ: ಜು.16 ರಂದು ಉತ್ತರ ಕನ್ನಡ ಜಿಲ್ಲೆಯ ಅಂಕೋಲದ ಶಿರೂರಿನಲ್ಲಿ ಭೂ ಕುಸಿತವಾಗಿ 11 ಜನ ಮೃತಪಟ್ಟಿದ್ದಾರೆ. ಮೂರನೇ ಹಂತದ ಸುದೀರ್ಘ ಕಾರ್ಯಾಚರಣೆಯಲ್ಲಿ ಕೇರಳ ಮೂಲದ ಅರ್ಜುನ್ ಮೃತದೇಹ ಭಾರತ್ ಬೇಂಜ್ ಲಾರಿಯಲ್ಲೇ ಸಿಕ್ಕಿದ್ದು, ಇದೀಗ ಲಾರಿ ಅವಶೇಷದಡಿ ಅರ್ಜುನ್ ತನ್ನ ಮಗುವಿಗಾಗಿ ಖರೀದಿಸಿದ್ದ ಲಾರಿಯ ಅಟಿಕೆ, ಮೊಬೈಲ್‌ಗಳು ದೊರೆತಿವೆ.

ಸದ್ಯ ಅರ್ಜುನ್ ಕೊಳತ ಸ್ಥಿತಿಯ ದೇಹವನ್ನು ಅಂಕೋಲದ ಶವಾಗಾರದಲ್ಲಿ ಇರಿಸಲಾಗಿದೆ. ಜೊತೆಗೆ ಡಿಎನ್‌ಎ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ನಂತರ ಶವವನ್ನು ಕುಟುಂಬದವರಿಗೆ ಹಸ್ತಾಂತರಿಸಲಿದ್ದಾರೆ‌.

IndianNavy UttaraKannada ShiruruLandslide

ಮೃತ ಅರ್ಜುನ್ ವಸ್ತುಗಳು ಕುಟುಂಬಸ್ತರಿಗೆ ಹಸ್ತಾಂತರ:
ಗಂಗಾವಳಿ ನದಿಯಲ್ಲಿ ತೆಗೆದ ನಜ್ಜುಗುಜ್ಜಾದ ಲಾರಿಯಲ್ಲಿ ಅರ್ಜುನ್‌ಗೆ ಸೇರಿದ ಎರಡು ಮೊಬೈಲ್, ಪಾತ್ರೆಗಳು, ಲಾರಿ ಮಾದರಿಯ ಆಟಿಕೆ ದೊರೆತಿದೆ. ಅವುಗಳನ್ನು ಅರ್ಜುನ್ ಸಹೋದರ ಅಭಿಜಿತ್‌ಗೆ ನೀಡಲಾಗಿದೆ.

ಸದ್ಯ ಕಾರ್ಯಾಚರಣೆಯಲ್ಲಿ ಶಿರೂರಿನ ಜಗನ್ನಾಥ್, ಗಂಗೆಕೊಳ್ಳದ ಲೋಕೇಶ್ ಮೃತದೇಹ ದೊರೆಯಬೇಕಿದ್ದು, ಇಂದು ಕೂಡ ಎಂದಿನಂತೆ ಡ್ರಜ್ಜಿಂಗ್ ಬಾರ್ಜನಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ.

Share This Article