– ಮೃತ ರಂಜನ್ ಮೊಬೈಲ್, ಫಿಂಗರ್ ಪ್ರಿಂಟ್, ಬ್ಲಡ್ ಸ್ಯಾಂಪಲ್ ಸಂಗ್ರಹ
– ನ್ಯಾಯಾಲಯಕ್ಕೆ ಅಬಟೇಡ್ ಚಾರ್ಜ್‌ಶೀಟ್ ಸಲ್ಲಿಕೆಗೆ ಪೊಲೀಸರ ಸಿದ್ಧತೆ
ಬೆಂಗಳೂರು: ವೈಯಾಲಿಕಾವಲ್‌ನ ಮಹಾಲಕ್ಷ್ಮಿ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಬಂಧನಕ್ಕೆ ಒಡಿಶಾಗೆ ತೆರಳಿದ್ದ ರಾಜ್ಯದ ಪೊಲೀಸರ ತಂಡ ಬೆಂಗಳೂರಿಗೆ ಇಂದು ವಾಪಸ್ ಆಗಲಿದೆ. ಕೊಲೆ ಪ್ರಕರಣದಲ್ಲಿ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿರುವ ಪೊಲೀಸರು ಚಾರ್ಜ್‌ಶೀಟ್ ಸಿದ್ಧಪಡಿಸಲು ಮುಂದಾಗಿದೆ.
ಆರೋಪಿ ರಂಜನ್ ಬಗ್ಗೆ ಹಾಗೂ ಮರಣೋತ್ತರ ಪರೀಕ್ಷೆ ಬಗ್ಗೆ ಪ್ರಾಥಮಿಕವಾಗಿ ಪೊಲೀಸರು ಮಾಹಿತಿ ಪಡೆದುಕೊಂಡಿದ್ದಾರೆ. ನ್ಯಾಯಾಲಯದ ಅನುಮತಿ ಪಡೆದು ಆತನ ಮೊಬೈಲ್, ಫಿಂಗರ್ ಪ್ರಿಂಟ್, ಬ್ಲಡ್ ಸ್ಯಾಂಪಲ್ ಕೂಡ ಸಂಗ್ರಹ ಮಾಡಲಾಗಿದೆ. ಮೃತ ರಂಜನ್ ಫಿಂಗರ್ ಪ್ರಿಂಟ್, ಬ್ಲಡ್ ಸ್ಯಾಂಪಲ್ ಪ್ರಮುಖ ಸಾಕ್ಷ್ಯ ಆಗಲಿದೆ. ತನಿಖಾ ತಂಡ ಮನೆಯಲ್ಲಿ ಸಿಕ್ಕಿರುವ ಬ್ಲಡ್ ಸ್ಯಾಂಪಲ್, ಫಿಂಗರ್ ಪ್ರಿಂಟ್ ಸ್ಯಾಂಪಲ್ ಜೊತೆ ಇದನ್ನು ಹೋಲಿಕೆ ಮಾಡಲಿದ್ದಾರೆ. ಹೋಲಿಕೆ ಮಾಡಿ ಆತನೇ ಕೊಲೆಗಾರನಾ ಎಂದು ಸಾಕ್ಷ್ಯ ಸಂಗ್ರಹಿಸಲಿದ್ದಾರೆ.
ರಂಜನ್ ಮೊಬೈಲ್ ಈ ಕೊಲೆ ಕೇಸ್‌ನಲ್ಲಿ ಪ್ರಮುಖ ಸಾಕ್ಷ್ಯ. ರಂಜನ್ ಮತ್ತು ಮಹಾಲಕ್ಷ್ಮಿ ನಡುವಿನ ಸಂಬಂಧ ಬಯಲು ಮಾಡಲಿದೆ. ಕೊನೆಯದಾಗಿ ರಂಜನ್ ಕರೆ ಮಾಡಿದ್ದು ಕೂಡ ತನಿಖೆಗೆ ಸಹಕಾರಿಯಾಗಲಿದೆ. ಮತ್ತೊಂದು ಕಡೆ ಆರೋಪಿ ಸಾವನ್ನಪ್ಪಿದ ಹಿನ್ನೆಲೆ ಕೇಸ್ ಕ್ಲೋಸ್ ಆಗಲಿದೆ. ರಂಜನ್ ಕೊಲೆ ಮಾಡಿರೋದಕ್ಕೆ ಪೊಲೀಸರು ಸಾಕ್ಷ್ಯ ಕಲೆಹಾಕಲಿದ್ದಾರೆ.
ರಂಜನ್ ಕೃತ್ಯಕ್ಕೆ ಯಾರಾದ್ರೂ ಸಹಾಯ ಮಾಡಿದ್ದಾರಾ ಎಂದೂ ತನಿಖೆ ನಡೆಯಲಿದೆ. ಈಗಾಗಲೇ ರಂಜನ್ ಸಹೋದರನ ವಿಚಾರಣೆ ನಡೆಸಲಾಗಿದೆ. ಕೊಲೆಯ ಬಗ್ಗೆ ಆತನಿಗೆ ತಿಳಿದಿದ್ದ ವಿಚಾರಗಳ ಬಗ್ಗೆ ಹೇಳಿಕೆ ದಾಖಲಿಸಲಾಗಿದೆ. ನ್ಯಾಯಾಧೀಶರ ಮುಂದೆ ಆತನ ಸೆ.164 ಅಡಿ ಹೇಳಿಕೆ ಕೂಡ ದಾಖಲಿಸಲಾಗಿದೆ.
ಈ ಎಲ್ಲಾ ಅಂಶಗಳನ್ನು ಒಳಗೊಂಡ ಚಾರ್ಜ್‌ಶೀಟ್‌ನ್ನು ಪೊಲೀಸರು ತಯಾರಿಸಲಿದ್ದಾರೆ. ಬಳಿಕ ನ್ಯಾಯಾಲಯಕ್ಕೆ ಅಬೇಟೆಡ್ ಚಾರ್ಜ್ಶೀಟ್ ಸಲ್ಲಿಸಲಿದ್ದಾರೆ. ಅಬಟೇಡ್ ಚಾರ್ಜ್‌ಶೀಟ್ ಅಂದ್ರೆ ಆರೋಪಿ ಸಾವನ್ನಪ್ಪಿದ ನಂತರ ತನಿಖೆ ನಿಲ್ಲಿಸುವ ಬಗ್ಗೆ ವರದಿ. ನ್ಯಾಯಾಲಯಕ್ಕೆ ಆರೋಪಿ ಸಾವನ್ನಪ್ಪಿದ ಬಗ್ಗೆ ಕೋರ್ಟ್ ಗಮನಕ್ಕೆ ತಂದು ಅಬೇಟೆಡ್ ಚಾರ್ಜ್‌ಶೀಟ್ ಸಲ್ಲಿಕೆ