ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ (BJP) ಗುಪ್ತ್ ಗಪ್ತ್ ಚಟುವಟಿಕೆ ಮುಂದುವರೆದಿವೆ. ಬೆಂಗಳೂರಿನಲ್ಲಿ ಮಾಜಿ ಮಂತ್ರಿ ಕುಮಾರ್ ಬಂಗಾರಪ್ಪ (Kumar Bangarappa) ನಿವಾಸದಲ್ಲಿ ಅತೃಪ್ತರು ಗೌಪ್ಯ ಸಭೆ ನಡೆಸಿದ್ದಾರೆ.
ಈ ಸಭೆಯ ಬಗ್ಗೆ ಕೇಳಿದ್ದಕ್ಕೆ ಇದೇನು ಪ್ರತ್ಯೇಕ ಸಭೆಯಲ್ಲ. ಊಟಕ್ಕೆ ಸೇರಿದ್ದೆವು ಅಷ್ಟೇ ಎಂದು ಹೇಳಿಕೊಂಡಿದ್ದಾರೆ. ಇವತ್ತಿನ ಪ್ರತಿಭಟನೆಗೆ ವಿಜಯೇಂದ್ರ (BY Vijayendra) ಏಕೆ ಹೋಗಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿದೆ ಎನ್ನುವ ಮೂಲಕ ಯತ್ನಾಳ್ (Basangouda Patil Yatnal) ಕುತೂಹಲ ಮೂಡಿಸಿದ್ದಾರೆ. ಇದನ್ನೂ ಓದಿ: ಸರ್ಕಾರದ ಗ್ಯಾರಂಟಿ ಯೋಜನೆಗಳ ಸಮಾವೇಶದಲ್ಲಿ ಗೋಲ್ಮಾಲ್ ಆರೋಪ – ಲೋಕಾಯುಕ್ತಕ್ಕೆ ದೂರು
- Advertisement -
- Advertisement -
ಹಿಂದೂ ಸಮಾಜದ ಎಲ್ಲ ವರ್ಗದವರ ಸಂಘಟನೆ ಮಾಡುತ್ತೇವೆ. ಸಿದ್ದರಾಮಯ್ಯ ಸರ್ಕಾರ ಕೇವಲ ಮುಸ್ಲಿಮರ ಓಲೈಕೆ ಮಾಡುತ್ತಿದೆ. ನಾವು ಆರ್‌ಸಿಬಿ ಅಂತ ಏನೂ ಹೆಸರು ಇಟ್ಟಿಲ್ಲ. ರಾಣಿ ಚೆನ್ನಮ್ಮ ಸಂಗೊಳ್ಳಿರಾಯಣ್ಣ ಬ್ರಿಗೇಡ್ ಅಂತ ನಾವು ಸೀಮಿತಗೊಳಿಸಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಲ್ಯಾಪ್ರೋಸ್ಕೋಪಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ 22ರ ಯುವತಿ ಸಾವು
- Advertisement -
ಈಶ್ವರಪ್ಪ ಮನೆಗೆ ಹೋಗಿದ್ದ ವಿಚಾರಕ್ಕೆ ಕೇಳಿದ ಪ್ರಶ್ನೆಗೆ ಯತ್ನಾಳ್, ಈಶ್ವರಪ್ಪ ನಮ್ಮ ಹಿರಿಯ ನಾಯಕರು. ಅವರ ಮನೆಗೆ ಚಹಾ ಕುಡಿಯಲು ಹೋಗಿದ್ದೆವು. ಅವರನ್ನು ಉಚ್ಚಾಟನೆ ಮಾಡಿದ್ದು ಮುಂದೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ತಿಳಿಸಿದರು.
- Advertisement -
ಈ ಸಭೆಯಲ್ಲಿ ರಮೇಶ್ ಜಾರಕಿಹೊಳಿ, ಬಸನಗೌಡ ಪಾಟೀಲ್ ಯತ್ನಾಳ್, ಕುಮಾರ್ ಬಂಗಾರಪ್ಪ, ಚಂದ್ರಪ್ಪ, ಅರವಿಂದ ಲಿಂಬಾವಳಿ, ಬಿಪಿ ಹರೀಶ್, ಸಿದ್ದೇಶ್ವರ್ ಸೇರಿದಂತೆ ಹಲವರು ಭಾಗಿಯಾಗಿದ್ದರು.