ಪಾಟ್ನಾ: ಬಿಹಾರದ (Bihar) ಹಲವೆಡೆ `ಜಿತಿಯಾ’ ಅಥವಾ `ಜೀವಿತಪುತ್ರಿಕಾ’ ಹಬ್ಬದ ಆಚರಣೆ ವೇಳೆ ನದಿಗಳಿಗೆ ಪವಿತ್ರ ಸ್ನಾನಕ್ಕೆ ತೆರಳಿದ್ದ 37 ಮಕ್ಕಳು, 7 ಮಹಿಳೆಯರು ಸೇರಿದಂತೆ 46 ಜನರು ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
24 ಗಂಟೆಗಳ ಅವಧಿಯಲ್ಲಿ ಪೂರ್ವ ಮತ್ತು ಪಶ್ಚಿಮ ಚಂಪಾರಣ್, ಔರಂಗಾಬಾದ್, ಕೈಮೂರ್, ಬಕ್ಸರ್, ಸಿವಾನ್, ರೋಹ್ತಾಸ್, ಸರನ್, ಪಾಟ್ನಾ, ವೈಶಾಲಿ, ಮುಜಾಫರ್‍ಪುರ, ಸಮಸ್ತಿಪುರ್, ಗೋಪಾಲ್‍ಗಂಜ್ ಮತ್ತು ಅರ್ವಾಲ್ ಜಿಲ್ಲೆಗಳಲ್ಲಿ ಜನ ನೀರಲ್ಲಿ ಮುಳುಗಿ ಸಾವಿಗೀಡಾದ ಘಟನೆಗಳು ನಡೆದಿವೆ. ಇದನ್ನೂ ಓದಿ: ಜಮೀರ್ ರೀತಿಯ ಹೊಗಳುಭಟ್ಟರ ಮಾತು ಕೇಳಬೇಡಿ: ಸಿದ್ದರಾಮಯ್ಯಗೆ ಸಿ.ಟಿ.ರವಿ ಸಲಹೆ
`ಜಿತಿಯಾ’ ಹಬ್ಬವನ್ನು (Jitiya Festival) ತಾಯಂದಿರು ತಮ್ಮ ಮಕ್ಕಳ ಯೋಗಕ್ಷೇಮ ಮತ್ತು ಸಮೃದ್ಧಿಗಾಗಿ ಆಚರಿಸುತ್ತಾರೆ. ಮಕ್ಕಳು, ತಮ್ಮ ತಾಯಂದಿರೊಂದಿಗೆ ವಿವಿಧ ಜಲಮೂಲಗಳಲ್ಲಿ ಸ್ನಾನಕ್ಕೆ ತೆರಳಿದ್ದಾಗ ಈ ಅವಘಡಗಳು ಸಂಭವಿಸಿವೆ.
ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಅವರು ಜನರ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಅಲ್ಲದೇ ಮೃತರ ಕುಟುಂಬಸ್ಥರಿಗೆ ತಲಾ 4 ಲಕ್ಷ ರೂ. ಪರಿಹಾರವನ್ನು ಘೋಷಿಸಿದ್ದಾರೆ.
ಇಲ್ಲಿಯವರೆಗೆ 43 ಮೃತದೇಹಗಳನ್ನು ಹೊರ ತೆಗೆಯಲಾಗಿದೆ. ಸಂತ್ರಸ್ತರ ಕುಟುಂಬಕ್ಕೆ ತಲಾ 4 ಲಕ್ಷ ರೂ. ಪರಿಹಾರ ನೀಡಲಾಗುವುದು. ಅವುಗಳಲ್ಲಿ 8 ಕುಟುಂಬಕ್ಕೆ ಈಗಾಗಲೇ ವಿತರಿಸಲಾಗಿದೆ ಎಂದು ವಿಪತ್ತು ನಿರ್ವಹಣಾ ಇಲಾಖೆ (ಡಿಎಂಡಿ) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಔರಂಗಾಬಾದ್ ಜಿಲ್ಲೆಯಲ್ಲಿ ಎಂಟು ಮಕ್ಕಳು ಮುಳುಗಿ ಸಾವನ್ನಪ್ಪಿದ್ದಾರೆ. ನಾಲ್ವರು ಬರುನಾ ಪೊಲೀಸ್ ಠಾಣೆ ವ್ಯಾಪ್ತಿಯ ಇಟಾಹತ್ ಗ್ರಾಮ ಮತ್ತು ಮದನ್‍ಪುರ ಪೊಲೀಸ್ ಠಾಣೆಯ ಕುಶಾಹ ಗ್ರಾಮದಲ್ಲಿ ನಾಲ್ವರು ಇದರಲ್ಲಿ ಸೇರಿದ್ದಾರೆ.
ಕೈಮೂರ್‌ನಲ್ಲಿ ಏಳು ಅಪ್ರಾಪ್ತ ವಯಸ್ಕರು ಕ್ರಮವಾಗಿ ದುರ್ಗಾವತಿ ನದಿ ಮತ್ತು ಕೊಳದಲ್ಲಿ ಸ್ನಾನ ಮಾಡುವಾಗ ಭಭುವಾ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಗ್ರಾಮೀಣ ಪಾಟ್ನಾದ ಬಿಹ್ತಾ ಪೊಲೀಸ್ ಠಾಣೆ ವ್ಯಾಪ್ತಿಯ ಅಮ್ನಾಬಾದ್ ಗ್ರಾಮದಲ್ಲಿ ಬುಧವಾರ ಸಂಜೆ ನಾಲ್ಕು ಘಟನೆಗಳು ವರದಿಯಾಗಿದ್ದು, ಸರನ್ ಜಿಲ್ಲೆಯ ದೌದ್‍ಪುರ, ಮಾಂಝಿ, ತಾರೈಯಾ ಮತ್ತು ಮರ್ಹೌರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಬ್ಬರು ಬಾಲಕರು ಸೇರಿದಂತೆ ಐವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ನಿರುದ್ಯೋಗ ಸಮಸ್ಯೆ, ಯುಜನರ ವಲಸೆಗೆ ಬಿಜೆಪಿ ಆಡಳಿತವೇ ಕಾರಣ – ರಾಹುಲ್ ಗಾಂಧಿ ಕಿಡಿ