ಬೈರುತ್ ವೈಮಾನಿಕ ದಾಳಿಯಲ್ಲಿ ಹಿಜ್ಬುಲ್ಲಾ ಕಮಾಂಡರ್ ಹತ್ಯೆ

Public TV
1 Min Read
Hezbollah commander killed in Beirut airstrike 1

ಬೈರುತ್: ಇಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ ಹಿಜ್ಬುಲ್ಲಾದ ಕ್ಷಿಪಣಿ ಮತ್ತು ರಾಕೆಟ್ ಫೋರ್ಸ್‌ನ ಕಮಾಂಡರ್ ಇಬ್ರಾಹಿಂ ಮುಹಮ್ಮದ್ ಕಬಿಸಿಯನ್ನು ಹತ್ಯೆ ಮಾಡಿರುವುದಾಗಿ ಇಸ್ರೇಲ್ ಸೇನೆ ತಿಳಿಸಿದೆ.

ಹೆಜ್ಬುಲ್ಲಾದ ಕ್ಷಿಪಣಿಗಳು ಮತ್ತು ರಾಕೆಟ್ ಫೋರ್ಸ್‌ನ ಹೆಚ್ಚುವರಿ ಕೇಂದ್ರ ಕಮಾಂಡರ್‌ಗಳ ಜೊತೆಯಲ್ಲಿ ಕಬಿಸಿಯನ್ನು ಹೊಡೆದುರುಳಿಸಲಾಗಿದೆ ಎಂದು ಮಿಲಿಟರಿ ಹೇಳಿಕೆಯಲ್ಲಿ ತಿಳಿಸಿದೆ.

ಇಬ್ರಾಹಿಂ 1980 ರ ದಶಕದಲ್ಲಿ ಹಿಜ್ಬುಲ್ಲಾಗೆ ಸೇರಿದ್ದ. ನಂತರ ಸಂಘಟನೆಯೊಳಗೆ ಹಲವಾರು ಮಹತ್ವದ ಮಿಲಿಟರಿ ಪಾತ್ರಗಳನ್ನು ನಿರ್ವಹಿಸಿದ್ದ. ಇಸ್ರೇಲಿ ನಾಗರಿಕರು ಮತ್ತು ಸೈನಿಕರ ವಿರುದ್ಧ ಹಲವಾರು ದಾಳಿಗಳನ್ನು ಯೋಜಿಸಲು ಮತ್ತು ಕಾರ್ಯಗತಗೊಳಿಸುವ ಕೆಲಸ ಮಾಡಿದ್ದ ಎಂದು ಮಿಲಿಟರಿ ಹೇಳಿದೆ.

ದಕ್ಷಿಣ ಗಡಿಯಲ್ಲಿರುವ ಗಾಜಾದಲ್ಲಿ ಪ್ಯಾಲೆಸ್ತೀನಿಯನ್ ಬಂಡುಕೋರರ ಗುಂಪು ಹಮಾಸ್ ವಿರುದ್ಧ ಸುಮಾರು 12 ತಿಂಗಳ ಯುದ್ಧದ ನಂತರ, ಇಸ್ರೇಲ್ ತನ್ನ ಗಮನವನ್ನು ಉತ್ತರದ ಗಡಿಯತ್ತ ಬದಲಿಸಿದೆ. ಹಿಜ್ಬುಲ್ಲಾ ಇಸ್ರೇಲ್‌ ವಿರುದ್ಧ ರಾಕೆಟ್‌ಗಳನ್ನು ಹಾರಿಸುತ್ತಾ ಹಮಾಸ್‌ಗೆ ಬೆಂಬಲ ನೀಡುತ್ತಿದೆ. ಇದಕ್ಕೆ ಇರಾನ್‌ ಬೆಂಬಲವೂ ಇದೆ ಎಂಬ ಆರೋಪ ಕೇಳಿಬಂದಿದೆ.

Share This Article