ಕನ್ನಡದ ಬಿಗ್ ಬಾಸ್ 11ರ ಆರಂಭಕ್ಕೆ ಕೌಂಟ್‌ಡೌನ್ ಶುರುವಾದ ಬೆನ್ನಲ್ಲೇ ‘ಹಿಂದಿ ಬಿಗ್ ಬಾಸ್ 18’ಕ್ಕೂ(Bigg Boss Hindi 18) ದಿನಗಣನೆ ಶುರುವಾಗಿದೆ. ಸಾಕಷ್ಟು ಸ್ಪರ್ಧಿಗಳ ಹೆಸರು ಮುನ್ನೆಲೆಗೆ ಬಂದಿದೆ. ಅದರಲ್ಲಿ ಮಹೇಶ್ ಬಾಬು ಸಂಬಂಧಿಯೊಬ್ಬರು ಹಿಂದಿ ಬಿಗ್ ಬಾಸ್ ಬರುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಇದೇ ಅಕ್ಟೋಬರ್ 6ರಂದು ಸಲ್ಮಾನ್ ಖಾನ್ (Salman Khan) ನಿರೂಪಣೆಯಲ್ಲಿ ಹಿಂದಿ ಬಿಗ್ ಬಾಸ್ ಅದ್ಧೂರಿಯಾಗಿ ಲಾಂಚ್ ಆಗುತ್ತಿದೆ. ಪ್ರೋಮೋ ಕೂಡ ರಿಲೀಸ್ ಆಗಿ ಶೋ ಕುರಿತು ನಿರೀಕ್ಷೆ ಹುಟ್ಟಿಸಿದೆ. ಹೀಗಿರುವಾಗ ದೊಡ್ಮನೆಗೆ ಬರಲಿರುವ ಸ್ಪರ್ಧಿಗಳ ಹೆಸರಲ್ಲಿ ತೆಲುಗು ನಟ ಮಹೇಶ್ ಬಾಬು ಸಂಬಂಧಿ ಶಿಲ್ಪಾ ಶಿರೋಡ್ಕರ್ (Shilpa Shirodkar) ಕೇಳಿ ಬಂದಿದೆ. ಅವರು ಹಿಂದಿ ಬಿಗ್ ಬಾಸ್‌ಗೆ ಬರಲಿದ್ದಾರೆ ಎಂದು ಗುಸು ಗುಸು ಶುರುವಾಗಿದೆ.
ಶಿಲ್ಪಾ ಅವರು ನಮ್ರತಾ ಶಿರೋಡ್ಕರ್ (Namrata Shirodkar) ಸಹೋದರಿಯಾಗಿದ್ದು, ಮಹೇಶ್ ಬಾಬುಗೆ (Mahesh Babu) ಅತ್ತಿಗೆ ಆಗಿದ್ದಾರೆ. 80-90ರ ದಶಕದಲ್ಲಿ ಶಿಲ್ಪಾ ನಟಿಯಾಗಿ ಮಿಂಚಿದವರು. 1989ರಲ್ಲಿ ತೆರೆಕಂಡ ‘ಭ್ರಷ್ಟಾಚಾರ್’ ಚಿತ್ರದಲ್ಲಿ ಮಿಥುನ್ ಚಿತ್ರವರ್ತಿ, ರೇಖಾ ಜೊತೆ ಅಂಧ ಹುಡುಗಿಯ ಪಾತ್ರದಲ್ಲಿ ಶಿಲ್ಪಾ ನಟಿಸಿದ್ದರು. ನಂತರ ಹಲವು ಸೀರಿಯಲ್‌ಗಳಲ್ಲಿ ನಟಿಸಿ ಅವರು ಸೈ ಎನಿಸಿಕೊಂಡಿದ್ದಾರೆ.
ಹಾಗಾಗಿಯೇ ಶಿಲ್ಪಾರನ್ನು ‘ಬಿಗ್ ಬಾಸ್’ ತಂಡ ಅಪ್ರೋಚ್ ಮಾಡಿದ್ದಾರೆ ಎನ್ನಲಾದ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ನಟಿ ಒಪ್ಪಿಕೊಂಡಿದ್ದಾರಾ? ಅಸಲಿಗೆ ಈ ಸುದ್ದಿ ನಿಜನಾ? ಎಂಬುದು ಶೋ ಆರಂಭವಾದ್ಮೇಲೆ ಕುತೂಹಲಕ್ಕೆ ಉತ್ತರ ಸಿಗಲಿದೆ.