ತಿರುಪತಿ ಲಡ್ಡು ವಿವಾದದ ಬೆನ್ನಲ್ಲೇ ಪ್ರಸಾದದಲ್ಲಿ ಗುಟ್ಕಾ ಪತ್ತೆ – ಭಕ್ತೆಯಿಂದ ಆರೋಪ!

Public TV
1 Min Read
Tirupati Laddu 1

ಹೈದರಾಬಾದ್: ತೆಲಂಗಾಣದ (Telangana) ಖಮ್ಮಂ (Khammam) ಜಿಲ್ಲೆಯ ಭಕ್ತೆಯೊಬ್ಬರು ಪವಿತ್ರ ತಿರುಪತಿ ಲಡ್ಡು (Tirupati Laddu) ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ತಮ್ಮ ಮನೆಗೆ ತಂದ ಪ್ರಸಾದದಲ್ಲಿ, ಕಾಗದದಲ್ಲಿ ಸುತ್ತಿಟ್ಟಿರುವ ತಂಬಾಕು (Tobacco) ತುಂಡುಗಳು ಪತ್ತೆಯಾಗಿವೆ ಎಂದು ಆರೋಪಿಸಿದ್ದಾರೆ.

ತಿರುಪತಿ ಲಡ್ಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸುತ್ತಿರುವ ವಿವಾದದ ನಡುವೆಯೇ ಈ ಘಟನೆ ನಡೆದಿದೆ. ಇದನ್ನೂ ಓದಿ: ನನ್ನ ಮಗ ಪಟಾಕಿ ಹಾರಿಸಲು ಹೆದರುತ್ತಿದ್ದ, ಗುಂಡು ಹಾರಿಸಲು ಸಾಧ್ಯವೇ – ಮೃತ ರೇಪ್ ಆರೋಪಿಯ ತಾಯಿ ಕಣ್ಣೀರು

ಗೊಲ್ಲಗುಡೆಂ (Gollagudem) ಪಂಚಾಯತ್‌ನ ಕಾರ್ತಿಕೇಯ ಟೌನ್‌ಶಿಪ್‌ನ ನಿವಾಸಿ ದೊಂತು ಪದ್ಮಾವತಿ ಅವರು ಸೆಪ್ಟೆಂಬರ್ 19ರಂದು ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಬಳಿಕ ನೆರೆಮನೆಯವರಿಗೆ ಹಂಚಲೆಂದು ಲಡ್ಡು ತೆಗೆದುಕೊಂಡು ಮನೆಗೆ ತೆರಳಿದ್ದರು. ಪ್ರಸಾದ ರೂಪದಲ್ಲಿ ತಂದಿದ್ದ ಲಡ್ಡುವಿನಲ್ಲಿ ಸಣ್ಣ ಪೇಪರ್‌ನಲ್ಲಿ ಕಟ್ಟಿದ್ದ ಗುಟ್ಕಾ ಪತ್ತೆಯಾಗಿದೆ ಎಂದು ಮಹಿಳೆ ಆರೋಪಿಸಿದ್ದಾರೆ. ಇದನ್ನೂ ಓದಿ: ತಿರುಪತಿ ಲಡ್ಡು ವಿವಾದದ ಬೆನ್ನಲ್ಲೇ ಪ್ರಸಾದದಲ್ಲಿ ಗುಟ್ಕಾ ಪತ್ತೆ – ಭಕ್ತೆಯಿಂದ ಆರೋಪ!

ತಿರುಪತಿ ಲಡ್ಡುವಿನಲ್ಲಿ ಗುಟ್ಕಾ ಪ್ಯಾಕೆಟ್ ಪತ್ತೆಯಾಗಿರುವುದು ಇದೇ ಮೊದಲಲ್ಲ. 2012ರಲ್ಲೂ ಲಡ್ಡು ಪ್ರಸಾದದಲ್ಲಿ ಗುಟ್ಕಾ ಪ್ಯಾಕೆಟ್ ಸಿಕ್ಕಿರುವುದು ಗಮನಾರ್ಹ. ಈಗಾಗಲೇ ತುಪ್ಪದಲ್ಲಿ ಕಲಬೆರಕೆ ವಿಷಯ ವಿವಾದವಾಗಿದ್ದು, ಈ ಬೆನ್ನಲ್ಲೇ ಗುಟ್ಕಾ ಪತ್ತೆಯಾಗಿದೆ ಎಂಬ ಆರೋಪವೂ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ: ನ್ಯೂಯಾರ್ಕ್‌ನಲ್ಲಿ ಝೆಲೆನ್ಸ್ಕಿ ಭೇಟಿಯಾದ ಮೋದಿ – ಶಾಂತಿಮಂತ್ರ ಪಠಿಸಿದ ಪ್ರಧಾನಿ

ಆಂಧ್ರಪ್ರದೇಶದ ತಿರುಪತಿ ದೇಗುಲದಲ್ಲಿ ಪ್ರಸಾದ ರೂಪದಲ್ಲಿ ನೀಡುತ್ತಿದ್ದ ಲಡ್ಡು ಈಗ ಮಹಾ ವಿವಾದಕ್ಕೆ ಕಾರಣವಾಗಿದೆ. ಲಡ್ಡುವಿನಲ್ಲಿಗೋವು, ಹಂದಿಯ ಕೊಬ್ಬು ಮಿಶ್ರಣ ಮಾಡಲಾಗಿದೆ, ಕಲಬೆರಕೆ ತುಪ್ಪವನ್ನು ಬಳಸಲಾಗಿದೆ ಎಂದು ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಹೇಳಿಕೆ ನೀಡಿದ ಬಳಿಕ ವಿವಾದ ಭುಗಿಲೆದ್ದಿದೆ. ಇದನ್ನೂ ಓದಿ: ರಾತ್ರೋ ರಾತ್ರಿ ಫೀಲ್ಡಿಗಿಳಿದು ರಸ್ತೆ ಗುಂಡಿ ಪರಿಶೀಲಿಸಿದ ಡಿಸಿಎಂ – 14,307 ರಸ್ತೆಗುಂಡಿಗಳಿಗೆ ಮುಕ್ತಿ

Share This Article