ಲಕ್ಷುರಿ ಎಂಜಿ ವಿಂಡ್ಸರ್ ಕಾರಿನ ಬೆಲೆ ರಿವೀಲ್!

Public TV
2 Min Read
MG Windsor EV 1

MG ಮೋಟಾರ್ ಇಂಡಿಯಾ (MG Motor India) ತನ್ನ ಹೊಸ ವಿಂಡ್ಸರ್ EV ಕಾರನ್ನು ಕೆಲವು ದಿನಗಳ ಹಿಂದೆ ಬಿಡುಗಡೆ ಮಾಡಿತ್ತು. ಈ ಸಂದರ್ಭದಲ್ಲಿ ಪರಿಚಯಾತ್ಮಕ ಬೆಲೆಯನ್ನು ಮಾತ್ರ ಬಹಿರಂಗಪಡಿಸಿತ್ತು. ಇದೀಗ ತನ್ನ ವೇರಿಯಂಟ್​ಗಳ ಬೆಲೆಗಳನ್ನು ಘೋಷಿಸಿದೆ. MG ವಿಂಡ್ಸರ್ (MG Windsor) EV ಬೆಲೆ 13.50 ಲಕ್ಷ ರೂ (ಎಕ್ಸ್ ಶೋರೂಂ) ದಿಂದ ಆರಂಭಗೊಳ್ಳುತ್ತದೆ.

MG Windsor EV 7

ಎಂಜಿ ವಿಂಡ್ಸರ್ ಇವಿ ಎಕ್ಸೈಟ್, ಎಕ್ಸ್‌ಕ್ಲೂಸಿವ್ ಮತ್ತು ಎಸೆನ್ಸ್ ಎಂಬ ಮೂರು ರೂಪಾಂತರಗಳಲ್ಲಿ ಲಭ್ಯವಿದೆ. ಇವುಗಳ ಬೆಲೆ ಕ್ರಮವಾಗಿ 13.50 ಲಕ್ಷ, 14.50 ಲಕ್ಷ ಮತ್ತು 15.50 ಲಕ್ಷ ರೂ (ಎಕ್ಸ್ ಶೋರೂಂ). ಸ್ಟಾರ್‌ಬರ್ಸ್ಟ್ ಬ್ಲ್ಯಾಕ್, ಪರ್ಲ್ ವೈಟ್, ಕ್ಲೇ ಬೀಜ್ ಮತ್ತು ಟರ್ಕೋಯಿಸ್ ಗ್ರೀನ್ ಬಣ್ಣಗಳಲ್ಲಿ ಈ ಕಾರು ಲಭ್ಯವಿದ್ದು, ಬುಕ್ಕಿಂಗ್‌ ಅಕ್ಟೋಬರ್ 3ರಿಂದ ಪ್ರಾರಂಭವಾಗಲಿದ್ದು, ಕಾರಿನ ವಿತರಣೆಯು ಅಕ್ಟೋಬರ್ 12 ರಿಂದ ಪ್ರಾರಂಭವಾಗಲಿದೆ. ಇದನ್ನೂ ಓದಿ: ಭಾರತಕ್ಕೆ ಮತ್ತೆ ವಾಪಸ್ ಬರಲಿದೆ ಫೋರ್ಡ್

MG Windsor EV 6

MG ವಿಂಡ್ಸರ್ EV ಕಾರಿನಲ್ಲಿ 38kWh ಬ್ಯಾಟರಿಯನ್ನು ಒಂದೇ ಎಲೆಕ್ಟ್ರಿಕ್ ಮೋಟಾರ್‌ನೊಂದಿಗೆ ಜೋಡಿಸಲಾಗಿದೆ. ಇದು 134bhp ಪವರ್ ಮತ್ತು 200Nm ಟಾರ್ಕ್ ಉತ್ಪಾದಿಸುತ್ತದೆ. ಒಂದು ಸಂಪೂರ್ಣ ಚಾರ್ಜ್‌ನಲ್ಲಿ 332 ಕಿ.ಮೀ ಚಲಿಸಬಹುದು ಎಂದು ARAI ಪ್ರಮಾಣೀಕರಿಸಿದೆ. ಇಕೋ, ಇಕೋ+, ನಾರ್ಮಲ್ ಮತ್ತು ಸ್ಪೋರ್ಟ್ ಎಂಬ ನಾಲ್ಕು ಡ್ರೈವ್ ಮೋಡ್‌ಗಳನ್ನು ವಿಂಡ್ಸರ್ ಹೊಂದಿದೆ. ಈ ಕಾರು, 4,295 ಎಂಎಂ ಉದ್ದ, 1,850 ಎಂಎಂ ಅಗಲ ಮತ್ತು 1,652 ಎಂಎಂ ಎತ್ತರವಿದೆ. 2,700 ಎಂಎಂ ವೀಲ್‌ಬೇಸ್‌ನ್ನು ಹೊಂದಿದೆ. ಇದರಲ್ಲಿ 5 ಮಂದಿ ಆರಾಮದಾಯಕವಾಗಿ ಕುಳಿತುಕೊಂಡು ಪ್ರಯಾಣಿಸಬಹುದು.

MG Windsor EV 4

15.6-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ವಿಥ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ, 9-ಸ್ಪೀಕರ್ ಇನ್ಫಿನಿಟಿ ಆಡಿಯೊ ಸಿಸ್ಟಮ್, 256-ಬಣ್ಣದ ಆಂಬಿಯೆಂಟ್ ಲೈಟಿಂಗ್, ಆಟೋಮೆಟಿಕ್ ಕ್ಲೈಮೇಟ್ ಕಂಟ್ರೋಲ್. 8.8-ಇಂಚಿನ ಫುಲ್-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ಕೀಲೆಸ್ ಎಂಟ್ರಿ ಮತ್ತು ಪುಶ್-ಬಟನ್ ಸ್ಟಾರ್ಟ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ವಿಂಡ್ಸರ್ EV ಒಳಗೊಂಡಿದೆ. ಇದನ್ನೂ ಓದಿ: ಟಾಟಾ ನೆಕ್ಸಾನ್ EV ಬೆಲೆ 3 ಲಕ್ಷ ರೂಪಾಯಿ ಕಡಿತ

MG Windsor EV 3

 

ಈ ಕಾರಿನಲ್ಲಿ ಹಿಂಬದಿಯ ಆಸನಗಳು 135 ಡಿಗ್ರಿಗಳವರೆಗೆ ಅಡ್ಜಸ್ಟ್ ಮಾಡಿಕೊಳ್ಳಬಹುದಾಗಿದ್ದು, ಆರಾಮದಾಯಕ ಪ್ರಯಾಣಕ್ಕೆ ಹೇಳಿ ಮಾಡಿಸಿದಂತಿದೆ. ಎಲೆಕ್ಟ್ರಿಕಲಿ ಅಡ್ಜಸ್ಟ್ ಮಾಡಬಹುದಾದ ಡ್ರೈವರ್ ಸೀಟ್, ಹಿಂಬದಿ ಪ್ರಯಾಣಿಕರಿಗೆ ಎಸಿ ವೆಂಟ್‌ಗಳು, 360-ಡಿಗ್ರಿ ಕ್ಯಾಮೆರಾ ಸಿಸ್ಟಮ್ ಮತ್ತು ಪ್ಯಾನರೋಮಿಕ್ ಸನ್ ರೂಫ್ ಕೂಡ ಇದರಲ್ಲಿ ಇದೆ.

MG Windsor EV 2

ವಿಂಡ್ಸರ್ ಚಾರ್ಜ್ ಮಾಡಲು, MG ಮೂರು ಆಯ್ಕೆಗಳನ್ನು ನೀಡುತ್ತದೆ: 3.3 kW CCS2 ಚಾರ್ಜರ್ ಕಾರನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು 13.8 ಗಂಟೆಗಳನ್ನು ತೆಗೆದುಕೊಳ್ಳುತ್ತದೆ, 7.4 kW ಚಾರ್ಜರ್ 6.5 ಗಂಟೆಗಳನ್ನು ತೆಗೆದುಕೊಳ್ಳುತ್ತದೆ ಮತ್ತು 50 kW ಚಾರ್ಜರ್ ಕೇವಲ 55 ನಿಮಿಷಗಳಲ್ಲಿ ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್ ಮಾಡುತ್ತದೆ.

Share This Article