ವೈಯಾಲಿಕಾವಲ್ ಮಹಿಳೆ ಹತ್ಯೆ ಪ್ರಕರಣ – ಪೊಲೀಸರ ಮುಂದೆ ಸಲೂನ್ ಬಾಯ್ ಅಶ್ರಫ್ ಹೇಳಿದ್ದೇನು?

Public TV
1 Min Read
Bengaluru Vyalikaval Lady Murder

-6 ತಿಂಗಳಿನಿಂದ ಮಹಾಲಕ್ಷ್ಮಿ ಸಂಪರ್ಕದಲ್ಲಿ ಇಲ್ಲ: ಅಶ್ರಫ್‌ 

ಬೆಂಗಳೂರು: ಸಿಲಿಕಾನ್ ಸಿಟಿ ಜನತೆಯನ್ನು ಬೆಚ್ಚಿಬೀಳಿಸಿದ ಮಹಾಲಕ್ಷ್ಮಿ ಭೀಕರ ಹತ್ಯೆ ಪ್ರಕರಣದ ತನಿಖೆಯನ್ನು ವೈಯಾಲಿಕಾವಲ್ (Vyalikaval) ಪೊಲೀಸರು ಮಾಡುತ್ತಿದ್ದು, ಶಂಕಿತರನ್ನು ಕರೆತಂದು ವಿಚಾರಣೆ ಮಾಡುತ್ತಿದ್ದಾರೆ. ಅದರಲ್ಲೂ ಭೀಕರವಾಗಿ ಕೊಲೆಯಾಗಿರುವ ಮಹಾಲಕ್ಷ್ಮಿ ಪೋಷಕರು ಅನುಮಾನ ವ್ಯಕ್ತಪಡಿಸಿದ್ದವರನ್ನು ಕರೆತಂದು ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.

ಪೋಷಕರು ಹಾಗೂ ಗಂಡ ಹೇಮಂತ್ ದಾಸ್ ಪ್ರಸ್ತಾಪಿಸಿದ್ದ ಸಲೂನ್ ಬಾಯ್ ಅಶ್ರಫ್ ಸೇರಿದಂತೆ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮಾಡಿ ಹೇಳಿಕೆ ದಾಖಲಿಸಿಕೊಂಡಿದ್ದಾರೆಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಇದನ್ನೂ ಓದಿ: ಮೈಸೂರು| ಕಾರು-ಬೈಕ್ ನಡುವೆ ಭೀಕರ ಅಪಘಾತ – 5 ವರ್ಷದ ಕಂದಮ್ಮ ಸಾವು

ಅಶ್ರಫ್‌ನನ್ನು ಪೊಲೀಸರು ಒಂದು ಗಂಟೆಗಳ ಕಾಲ ತೀವ್ರ ವಿಚಾರಣೆ ಮಾಡಿದ್ದಾರೆ. ಅಲ್ಲದೇ ಆತನ ಕಾಲ್ ಡಿಟೈಲ್ಸ್ ಹಾಗೂ ಇತ್ತೀಚಿನ ಚಲನವಲಗಳ ಬಗ್ಗೆ ಮಾಹಿತಿಪಡೆದುಕೊಂಡಿದ್ದಾರೆ. ನನಗೆ ಪರಿಚಯ ಇದ್ದಿದ್ದು ನಿಜ. ಆದರೆ ನಾನು ಕಳೆದ ಆರು ತಿಂಗಳಿನಿಂದ ಅವರ ಸಂಪರ್ಕದಲ್ಲಿ ಇಲ್ಲ ಎಂದು ಅಶ್ರಫ್ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಮೈದಾನದ ಗೇಟ್‌ ಮುರಿದು ಬಿದ್ದು ಬಾಲಕ ಸಾವು – ಪೋಷಕರಿಂದ ಪುತ್ರನ ನೇತ್ರದಾನ

ಅಶ್ರಫ್‌ ಎಂಬಾತನ ಮೇಲೆ ಅನುಮಾನ ಇದೆ. ಅವನ ವಿರುದ್ಧ ನಾನು ನೆಲಮಂಗಲದಲ್ಲಿ ದೂರು ಕೊಟ್ಟಿದ್ದೇನೆ. ಆತನೊಂದಿಗೆ ಮಹಾಲಕ್ಷ್ಮಿ ಸ್ನೇಹ ಹೊಂದಿದ್ದಳು. ನಾನು ಎಲ್ಲವನ್ನೂ ಪತ್ತೆಹಚ್ಚಿದ್ದೆ. ಅಶ್ರಫ್‌ ವಿಚಾರವಾಗಿ ಈಗ ನನಗೆ ಹೆಚ್ಚಿನ ಮಾಹಿತಿ ಗೊತ್ತಿಲ್ಲ ಎಂದು ಮಹಾಲಕ್ಷ್ಮಿ ಪತಿ ಹೇಳಿಕೆ ನೀಡಿದ್ದರು. ಇದನ್ನೂ ಓದಿ: ಮೋದಿ ಭೇಟಿ ಬೆನ್ನಲ್ಲೇ 297 ಪುರಾತನ ವಸ್ತುಗಳನ್ನು ಭಾರತಕ್ಕೆ ಹಸ್ತಾಂತರಿಸಿದ ಅಮೆರಿಕ

Share This Article