– ಕಾವೇರಿ ಆರತಿ ಒಮ್ಮೆ ಶುರು ಮಾಡಿದ್ರೆ ನಿಲ್ಲಿಸುವಂತಿಲ್ಲ
ಲಕ್ನೋ: ದಸರಾದಲ್ಲಿ (Mysuru Dasara) ಗಂಗಾರತಿಯಂತೆ (Gangarathi) ಕಾವೇರಿ ಆರತಿ ಮಾಡಬೇಕು ಎನ್ನುವುದು ಆಸೆ ಇದೆ. ಸಾಂಕೇತಿಕವಾಗಿ ಮಾಡುವ ಬಗ್ಗೆ ಚಿಂತಿಸಲಾಗುವುದು. ನಮ್ಮಲ್ಲಿ ಸರ್ಕಾರದಿಂದ ಮಾಡಬೇಕು ಅಂದುಕೊಂಡಿದ್ದೇವೆ. ಕಾವೇರಿ ಆರತಿ ಮಾಡುವ ಬಗ್ಗೆ ಚರ್ಚಿಸಿದಾಗ ಇಲ್ಲಿ ಗಂಗಾರತಿ ಆಯೋಜಕರು ಖುಷಿ ವ್ಯಕ್ತಪಡಿಸಿದ್ದಾರೆ. ಇನ್ನೆರಡು ದಿನಗಳಲ್ಲಿ ಅಧ್ಯಯನ ವರದಿ ನೀಡಲಾಗುವುದು ಎಂದು ವಾರಣಾಸಿಯಲ್ಲಿ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ (N Chaluvarayaswamy) ಹೇಳಿಕೆ ನೀಡಿದ್ದಾರೆ.
- Advertisement -
ವಾರಣಾಸಿಯಲ್ಲಿ (Varanasi) ಕಾವೇರಿ ಆರತಿ ಅಧ್ಯಯನ ತಂಡದೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹರಿದ್ವಾರ ಮತ್ತು ವಾರಣಾಸಿಯಲ್ಲಿ ಭಿನ್ನ ಅನುಭವವಾಗಿದೆ. ಗಂಗಾ ಮಹಾ ಸಭಾ ಸೊಸೈಟಿ ಅಡಿಯಲ್ಲಿ ಆರತಿ ಕಾರ್ಯಕ್ರಮ ನಡೆಯುತ್ತಿದೆ. ಹರಿದ್ವಾರದಲ್ಲಿ ನೂರಕ್ಕೂ ಅಧಿಕ ವರ್ಷದ ಅನುಭವ ಇದೆ. ವಾರಣಾಸಿಯಲ್ಲಿ 35 ವರ್ಷಕ್ಕೂ ಹೆಚ್ಚಿನ ಇತಿಹಾಸ ಇದೆ. ಗಂಗಾನದಿಯಂತೆ ಕಾವೇರಿ ಕೂಡಾ ಅತಿ ಮುಖ್ಯವಾದ ನದಿ. ಪ್ರವಾಹ ಬಂದು ಜನರು ಸಾವನ್ನಪ್ಪುತ್ತಿದ್ದ ಸಂದರ್ಭದಲ್ಲಿ ಅದು ನಿಯಂತ್ರಣಕ್ಕೆ ಬರಲಿ ಎಂದು ಆರತಿ ಶುರು ಮಾಡಿದ ಪ್ರತಿತಿ ಇದೆ. ರಾಜ್ಯದಲ್ಲಿ ಒಳ್ಳೆ ಮಳೆಯಾಗಲಿ, ನದಿ ಸಮಸ್ಯೆ ಇತ್ಯರ್ಥವಾಗಲಿ ಎಂದು ನಾವು ಮಾಡಲಿದ್ದೇವೆ ಎಂದರು. ಇದನ್ನೂ ಓದಿ: ದೇಹವನ್ನ ಪೀಸ್ ಪೀಸ್ ಮಾಡಿ ತರಕಾರಿ ಜೋಡಿಸಿದಂತೆ ಫ್ರಿಡ್ಜ್‌ನಲ್ಲಿ ತುಂಬಿಟ್ಟಿದ್ದ ಹಂತಕ; ಕ್ರೂರತೆಗೆ ಕೊನೆ ಇಲ್ವಾ?
- Advertisement -
- Advertisement -
ರಾಜ್ಯದಲ್ಲಿ ಒಳ್ಳೆ ಮಳೆಯಾದಲಿ, ನದಿ ಸಮಸ್ಯೆ ಇತ್ಯರ್ಥ ವಾಗಲಿ ಅಂತಾ ನಾವು ಮಾಡಲಿದ್ದೇವೆ. ಆರತಿ ಎಲ್ಲಿ ಮಾಡಬೇಕು, ಹೇಗೆ ಮಾಡಬೇಕು ಸಿಎಂ, ಡಿಸಿಎಂ ಜೊತೆಗೆ ಚರ್ಚಿಸಿ ನಿರ್ಧಾರ ಮಾಡ್ತೇವೆ. ಅಧಿಕಾರಿಗಳನ್ನು ಕಳುಹಿಸಿ ಇನ್ನು ಹೆಚ್ಚಿನ ಮಾಹಿತಿ ಪಡೆಯಲಿದ್ದೇವೆ. ಒಮ್ಮೆ ಶುರು ಮಾಡಿದ ಮೇಲೆ ನಿಲ್ಲಿಸಬಾರದು. ಯಾರೇ ಬಂದರು ಇದನ್ನ ಮುಂದುವರಿಸಿಕೊಂಡು ಹೋಗಬೇಕು. ಅದಕ್ಕಾಗಿ ಇನ್ನಷ್ಟು ಪರಿಶೀಲನೆ ಮಾಡಲಾಗುವುದು. ಬಳಿಕ ಸೂಕ್ತ ತಿರ್ಮಾನ ಬೆಂಗಳೂರಿನಲ್ಲಿ (Bengaluru) ತಿರ್ಮಾನ ಮಾಡುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಕೆಲಸದ ಒತ್ತಡದಿಂದ 26ರ ಉದ್ಯೋಗಿ ಸಾವು ಪ್ರಕರಣ; ಕಾರ್ಮಿಕ ಸಚಿವಾಲದಿಂದ ವರದಿ ಕೇಳಿದ ಮಾನವ ಹಕ್ಕುಗಳ ಆಯೋಗ
- Advertisement -
ಗಂಗಾರತಿ ಮಾದರಿಯಲ್ಲಿ ಕಾವೇರಿ ಆರತಿ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಚಲುವರಾಯಸ್ವಾಮಿ ನೇತೃತ್ವದ ಸುಮಾರು 25ಕ್ಕೂ ಹೆಚ್ಚು ಶಾಸಕರಿರುವ ನಿಯೋಗ ವಾರಣಾಸಿಗೆ ಭೇಟಿ ನೀಡಿದೆ. ಹರಿದ್ವಾರದಲ್ಲಿ ಗಂಗಾರತಿ ಬಗ್ಗೆ ಅಧ್ಯಯನ ಮಾಡಿದ ತಂಡ ವಾರಣಾಸಿಗೆ ತೆರಳಿ ವ್ಯವಸ್ಥೆಯನ್ನು ಅಧ್ಯಯನ ನಡೆಸಿದೆ. ಇದನ್ನೂ ಓದಿ: ತಿರುಪತಿ ಲಡ್ಡು ವಿವಾದ; ಸರ್ಕಾರದ ಸ್ವಾಧೀನದಿಂದ ದೇಗುಲ ಮುಕ್ತಗೊಳಿಸಿ – ಪೇಜಾವರ ಶ್ರೀ