ಅಮೆರಿಕದ ಭಾರತೀಯ ರಾಯಭಾರ ಕಚೇರಿಯಲ್ಲಿ ಅಧಿಕಾರಿ ನಿಗೂಢ ಸಾವು

Public TV
1 Min Read
americ india

ವಾಷಿಂಗ್ಟನ್: ಭಾರತೀಯ ರಾಯಭಾರ ಕಚೇರಿಯ (Indian embassy) ಅಧಿಕಾರಿಯೊಬ್ಬರು ಶವವಾಗಿ ಪತ್ತೆಯಾಗಿದ್ದಾರೆ. ಬುಧವಾರ ಅಧಿಕಾರಿಯ ಶವ ಪತ್ತೆಯಾಗಿದ್ದು, ರಾಯಭಾರ ಕಚೇರಿಯು ಶುಕ್ರವಾರ ಅಧಿಕೃತ ಹೇಳಿಕೆಯಲ್ಲಿ ಸಾವನ್ನು ದೃಢಪಡಿಸಿದೆ.

ಆತ್ಮಹತ್ಯೆಯ ಸಾಧ್ಯತೆ ಸೇರಿದಂತೆ, ಪ್ರಕರಣವನ್ನು ನಾನಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿರುವುದಾಗಿ ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಹೆಚ್ಚಿನ ವಿವರಗಳನ್ನು ನೀಡಿಲ್ಲ. ಇದನ್ನೂ ಓದಿ: ಮಂಡ್ಯದಲ್ಲಿ ಗಣೇಶ ವಿಸರ್ಜನೆ ವೇಳೆ ಚಾಕು ಇರಿತ

ರಾಯಭಾರ ಕಚೇರಿ ನೀಡಿರುವ ಮಾಹಿತಿಯಲ್ಲಿ, ಸೆಪ್ಟೆಂಬರ್ 18ರಂದು ಕಚೇರಿಯ ಸದಸ್ಯರೊಬ್ಬರು ನಿಧನರಾಗಿದ್ದಾರೆ. ಅವರ ಮೃತದೇಹವನ್ನು ಭಾರತಕ್ಕೆ ಕಳುಹಿಸಲು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಮೃತರ ಕುಟುಂಬಸ್ಥರೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ತಿಳಿಸಿದೆ.

ಕುಟುಂಬದ ಗೌಪ್ಯತೆಯ ಸಲುವಾಗಿ ಮೃತರ ಬಗ್ಗೆ ಹೆಚ್ಚುವರಿ ವಿವರಗಳನ್ನು ಬಿಡುಗಡೆ ಮಾಡುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ದರೋಡೆ ಗ್ಯಾಂಗ್ ಜೊತೆ ಕೈಜೋಡಿಸಿ 9 ಲಕ್ಷ ಪಡೆದಿದ್ದ ಪೊಲೀಸ್‌ – ಹೆಡ್ ಕಾನ್ಸ್‌ಟೇಬಲ್ ಸೇರಿ 7 ಮಂದಿ ಅರೆಸ್ಟ್‌

Share This Article