ಮಂಡ್ಯ: ಹಳೇ ದ್ವೇಷ ಹಿನ್ನೆಲೆ ಗಣೇಶ ವಿಸರ್ಜನೆ ಮೆರವಣಿಗೆ (Ganesh Idol Procession) ವೇಳೆ ಡ್ಯಾನ್ಸ್ ಮಾಡುತ್ತಿದ್ದ ಯುವಕನಿಗೆ ಚಾಕು ಇರಿತವಾಗಿರುವ ಘಟನೆ ಮಂಡ್ಯದ (Mandya) ಮಾಚಹಳ್ಳಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಜರುಗಿದೆ.
ಮಾಚಹಳ್ಳಿ ಗ್ರಾಮದ ಸಚ್ಚಿನ್ (24) ಎಂಬಾತನ ಕೈ ಹಾಗೂ ಹೊಟ್ಟೆ ಭಾಗಕ್ಕೆ ಚಾಕು ಇರಿತವಾಗಿದ್ದು, ನಂಜುಂಡಸ್ವಾಮಿ (26) ಎಂಬಾತನಿಗೆ ತಲೆ ಹಾಗೂ ಕಣ್ಣಿ ಭಾಗಕ್ಕೆ ಕಲ್ಲಿನಿಂದ ಹಲ್ಲೆ ಮಾಡಲಾಗಿದೆ. ಇದನ್ನೂ ಓದಿ: ಕಂಟೇನರ್ ಡಿಕ್ಕಿ ಹೊಡೆದು ಈರುಳ್ಳಿ ಟೆಂಪೋ ಪಲ್ಟಿ – ಓರ್ವ ಸಾವು
ದರ್ಶನ್, ಲೋಕೇಶ್, ಪ್ರಜ್ವಲ್ ಸೇರಿದಂತೆ ಹಲವರಿಂದ ಈ ಕೃತ್ಯ ನಡೆದಿದೆ. ನಿನ್ನೆ ರಾತ್ರಿ ಗ್ರಾಮದಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಸ್ನೇಹಿತರೊಂದಿಗೆ ಸಚ್ಚಿನ್ ಹಾಗೂ ನಂಜುಂಡಸ್ವಾಮಿ ಡ್ಯಾನ್ಸ್ ಮಾಡುತ್ತಿದ್ದರು. ಈ ವೇಳೆ ದರ್ಶನ್ & ಗ್ಯಾಂಗ್‌ನಿಂದ ಏಕಾಏಕಿ ಹಳೇ ದ್ವೇಷದಿಂದ ಗಲಾಟೆ ಆಗಿದೆ. ಬಳಿಕ ಇವರು ಚಾಕು ಇರಿದಿದ್ದು, ಕಲ್ಲಿನಿಂದಲೂ ಹಲ್ಲೆ ಮಾಡಿದ್ದಾರೆ.
ಕಳೆದ 3 ವರ್ಷದಿಂದ ಗಾಯಾಳು ಸಚ್ಚಿನ್ ಹಾಗೂ ಆರೋಪಿ ದರ್ಶನ್ ನಡುವೆ ಸಣ್ಣಪುಟ್ಟ ವಿಚಾರಗಳಿಗೆ ಆಗಾಗ್ಗೆ ಕಿರಿಕ್ ಆಗುತ್ತಿತ್ತು. 5 ಇಬ್ಬರ ನಡುವೆ ದೊಡ್ಡ ಗಲಾಟೆ ನಡೆದು ಪೊಲೀಸ್ ಠಾಣೆಯಲ್ಲಿ ರಾಜಿಯಾಗಿತ್ತು. ನಿನ್ನೆ ಮತ್ತೆ ಗಲಾಟೆ ನಡೆದು ಮಾರಣಾಂತಿಕ ಹಲ್ಲೆ ಮಾಡಲಾಗಿದೆ. ಗಾಯಾಳುಗಳಿಗೆ ಮಂಡ್ಯ ಮಿಮ್ಸ್‌ನಲ್ಲಿ ಚಿಕಿತ್ಸೆ ನೀಡುತ್ತಿದ್ದು, ಈ ಬಗ್ಗೆ ಶಿವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮಕ್ಕಳಲ್ಲಿ ಹೆಚ್ಚುತ್ತಿರುವ ಹೃದಯಾಘಾತ – 4 ದಿನಗಳಲ್ಲಿ 4 ಸಾವು