ನವದೆಹಲಿ: ಕಂಪನಿಯ ಹಣವನ್ನು ದುರುಪಯೋಗಪಡಿಸಿಕೊಂಡ ಪ್ರಕರಣಕ್ಕೆ (BharatPe Fraud Case) ಸಂಬಂಧಿಸಿದಂತೆ ಭಾರತ್‍ಪೇ ಸಹ-ಸಂಸ್ಥಾಪಕ ಅಶ್ನೀರ್ ಗ್ರೋವರ್ (Ashneer Grover) ಅವರ ಕುಟುಂಬದ ಸದಸ್ಯ ದೀಪಕ್ ಗುಪ್ತಾ ಅವರನ್ನು ದೆಹಲಿ ಪೊಲೀಸರ ಆರ್ಥಿಕ ಅಪರಾಧ ವಿಭಾಗ (ಇಒಡಬ್ಲ್ಯು) ಬಂಧಿಸಿದೆ.
ಈ ಪ್ರಕರಣದಲ್ಲಿ ಆರೋಪಿ ದೀಪಕ್ ಗುಪ್ತಾನನ್ನು ವಿಚಾರಣೆಗೊಳಪಡಿಸಲಾಗಿದ್ದು, ಕಾನೂನಿನ ಪ್ರಕಾರ ಬಂಧಿಸಲಾಗಿದೆ. ಪ್ರಕರಣ ನಡೆಯುವ ವೇಳೆ ಅವರು ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಇಒಡಬ್ಲ್ಯೂ ಉಪ ಪೊಲೀಸ್ ಆಯುಕ್ತ ರಾಜಾ ಬಂಥಿಯಾ ಹೇಳಿದ್ದಾರೆ. ಇದನ್ನೂ ಓದಿ: ಶೆಡ್‌ಗೆ ಕರೆದೊಯ್ದು ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ – 6 ಮಂದಿಗೆ 20 ವರ್ಷ ಕಠಿಣ ಶಿಕ್ಷೆ
ಮೇ 2023 ರಲ್ಲಿ ಅಶ್ನೀರ್ ಗ್ರೋವರ್, ಅವರ ಪತ್ನಿ ಮಾಧುರಿ ಜೈನ್ ಮತ್ತು ಅವರ ಕುಟುಂಬದ ಸದಸ್ಯರ ವಿರುದ್ಧ ದಾಖಲಿಸಲಾದ ಎಫ್‍ಐಆರ್‍ನಲ್ಲಿ ಮಾಧುರಿಯವರ ಸಹೋದರಿಯ ಪತಿ ದೀಪಕ್ ಗುಪ್ತಾ ಅವರನ್ನು ಹೆಸರಿಸಲಾಗಿತ್ತು.
ಇದಕ್ಕೂ ಮುನ್ನ ಈ ಪ್ರಕರಣದ ಮತ್ತೊಬ್ಬ ಆರೋಪಿ ಅಮಿತ್ ಬನ್ಸಾಲ್ ಅವರನ್ನೂ ಇಒಡಬ್ಲ್ಯು ಬಂಧಿಸಿತ್ತು. ಈ ಪ್ರಕರಣದಲ್ಲಿ ಗುಪ್ತಾ ಭಾಗಿಯಾಗಿರುವುದು ಆರೋಪಿ ಅಮಿತ್ ಬನ್ಸಾಲ್ ವಿಚಾರಣೆಯಿಂದ ದೃಢವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಶ್ನೀರ್ ಗ್ರೋವರ್ (ಭಾರತ್‍ಪೇ ಸ್ಥಾಪಕ ಮತ್ತು ಮಾಜಿ ನಿರ್ದೇಶಕ), ಅವರ ಪತ್ನಿ ಮಾಧುರಿ ಜೈನ್ ಗ್ರೋವರ್ ಮತ್ತು ಇತರ ಅಧಿಕಾರಿಗಳು ಕಂಪನಿಯ ಹಣವನ್ನು ದುರುಪಯೋಗಪಡಿಸಿಕೊಳ್ಳುವಲ್ಲಿ ವಿವಿಧ ನಕಲಿ ದಾಖಲೆಗಳ ಬಳಸಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಕಂಪನಿಗೆ 81 ಕೋಟಿ ರೂ. (ಅಂದಾಜು) ನಷ್ಟವನ್ನು ಉಂಟುಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಭಾರತ್‍ಪೇ ಡಿಸೆಂಬರ್ 2022 ರಲ್ಲಿ ಅಶ್ನೀರ್ ಗ್ರೋವರ್, ಮಾಧುರಿ ಗ್ರೋವರ್, ಶ್ವೇತಾಂಕ್ ಜೈನ್, ಸುರೇಶ್ ಜೈನ್ ಮತ್ತು ದೀಪಕ್ ಗುಪ್ತಾ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿತ್ತು. ಇದನ್ನೂ ಓದಿ: Jammu & Kashmir | 40 ಅಡಿ ಆಳದ ಕಂದಕಕ್ಕೆ ಉರುಳಿದ ಸೇನೆಯ ಬಸ್ – ಮೂವರು ಯೋಧರು ದುರ್ಮರಣ