Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಜನರ ಹಸಿವು ನೀಗಿಸಲು 200 ಆನೆಗಳ ಹತ್ಯೆಗೆ ಮುಂದಾದ ಜಿಂಬಾಬ್ವೆ!
Notification Show More
Font ResizerAa
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Latest

ಜನರ ಹಸಿವು ನೀಗಿಸಲು 200 ಆನೆಗಳ ಹತ್ಯೆಗೆ ಮುಂದಾದ ಜಿಂಬಾಬ್ವೆ!

Public TV
Last updated: September 18, 2024 9:13 am
Public TV
Share
3 Min Read
Zimbabwe Elephants
SHARE

ಹರಾರೆ: ಭಾರತದಂತಹ ದೇಶಗಳಲ್ಲಿ ಕಾಡು ಪ್ರಾಣಿಗಳನ್ನು ಕೊಲ್ಲಲು ನಿಷೇಧವಿದೆ. ಆದರೀಗ ನಮೀಬಿಯಾ ಸರ್ಕಾರದ ಬಳಿಕ ಜಿಂಬಾಬ್ವೆ ಸರ್ಕಾರ (Zimbabwe Government) ಕೂಡ ಅಲ್ಲಿನ ಕಾಡು ಪ್ರಾಣಿಗಳನ್ನು ಕೊಲ್ಲಲ್ಲು ಅನುಮತಿ ನೀಡಿದೆ.

ಹೌದು. ಭೀಕರ ಬರಗಾಲ ಎದುರಿಸುತ್ತಿರುವ ಜಿಂಬಾಬ್ವೆಯಲ್ಲಿ ಜನರಿಗೆ ಆಹಾರ ಒದಗಿಸುವ ಸಲುವಾಗಿ ಪರಿಣಮಿಸಿದೆ. ಆದ್ದರಿಂದ ಆನೆಗಳನ್ನು (Elephants) ಕೊಲ್ಲಲು ಅಲ್ಲಿನ ಅಧಿಕಾರಿಗಳೇ ನಿರ್ಧರಿಸಿದ್ದಾರೆ. 1.63 ಕೋಟಿಯಷ್ಟು ಜನಸಂಖ್ಯೆ ಹೊಂದಿರುವ ಜಿಂಬಾಬ್ವೆ ದೇಶದಲ್ಲಿ ಅರ್ಧದಷ್ಟು ಜನ ಹಸಿವಿನಿಂದ ಬಳಲುತ್ತಿದ್ದಾರೆ. ಅವರ ಹಸಿವನ್ನು ನೀಗಿಸುವ ಉದ್ದೇಶದಿಂದ 200 ಆನೆಗಳನ್ನು ಕೊಲ್ಲಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ವರದಿಯಾಗಿದೆ.

namibia elephants

ಜೊತೆಗೆ 55,000 ಆನೆಗಳಿಗೆ ಆಶ್ರಯ ಒದಗಿಸಬಲ್ಲ ನಮ್ಮ ದೇಶದಲ್ಲಿ ಪಸ್ತುತ 84,000 ಆನೆಗಳಿದ್ದು, ಆನೆಗಳ ಸಂಖ್ಯೆಯಲ್ಲಿ ಜಿಂಬಾಬ್ವೆ ವಿಶ್ವದಲ್ಲೇ 2ನೇ ಸ್ಥಾನದಲ್ಲಿದೆ ಎನ್ನುವ ಮೂಲಕ ಆನೆ ಹತ್ಯೆ ಸಮರ್ಥಿಸಿಕೊಂಡಿದ್ದಾರೆ. ಈ ನಡುವೆ ಆನೆಗಳನ್ನು ಕೊಂದು ಅವುಗಳ ಮಾಂಸವನ್ನು ಒಣಗಿಸಿ ಪ್ರೋಟೀನ್ ಅವಶ್ಯಕತೆ ಇರುವವರಿಗೆ ಕೊಡುವ ಬಗ್ಗೆ ಚರ್ಚಿಸಲಾಗುತ್ತಿದೆ ಎಂದು ಜಿಂಬಾಬ್ವೆ ಪರಿಸರ ಸಚಿವ ಸಿತೆಂಬಿಸೋ ನಿಯೋನಿ ಹೇಳಿದ್ದಾರೆ ಎಂದೂ ಸಹ ವರದಿಯಾಗಿತ್ತು. ಇದನ್ನೂ ಓದಿ: ಲೆಬನಾನ್‌ನಲ್ಲಿ ಹಿಜ್ಬುಲ್ಲಾ ಸದಸ್ಯರ ಮೇಲೆ ದಾಳಿ, ಸಾವಿರಾರು ಪೇಜರ್‌ ಸ್ಫೋಟ – 8 ಸಾವು, 2 ಸಾವಿರಕ್ಕೂ ಹೆಚ್ಚು ಮಂದಿ ಗಂಭೀರ ಗಾಯ

ಅತಿಹೆಚ್ಚು ಆನೆಗಳನ್ನು ಹೊಂದಿರುವ ಟಾಪ್‌-5 ದೇಶಗಳು:
ಪ್ರತಿ 5 ವರ್ಷಗಳಿಗೊಮ್ಮೆ ಆನೆ ಗಣತಿಯನ್ನು ನಡೆಸಲಾಗುತ್ತದೆ. 2021ರ ಆನೆ ಗಣತಿ ವರದಿ ಪ್ರಕಾರ ಜಿಂಬಾಬ್ವೆ 1 ಲಕ್ಷ ಆನೆಗಳನ್ನು ಹೊಂದಿದ್ದು, ವಿಶ್ವಕ್ಕೆ 2ನೇ ಸ್ಥಾನದಲ್ಲಿತ್ತು. ಆದರೀಗ 84 ಸಾವಿರ ಆನೆಗಳನ್ನಷ್ಟೇ ಹೊಂದಿದೆ ಎಂದು ವರದಿಗಳು ಉಲ್ಲೇಖಿಸಿವೆ. ಇದನ್ನೂ ಓದಿ: 83 ಆನೆ, 30 ಹಿಪ್ಪೋ ಸೇರಿದಂತೆ 723 ಕಾಡು ಪ್ರಾಣಿಗಳನ್ನು ಕೊಂದು ಮಾಂಸವನ್ನು ಜನರಿಗೆ ವಿತರಿಸಲು ಮುಂದಾದ ನಮೀಬಿಯಾ

MAN VS WILD RAJINIKANTH BANDIPURA

2021ರ ಆನೆ ಗಣತಿ ವರದಿ ಅನ್ವಯ ಬೋಟ್ಸ್ವಾನ 1.30 ಲಕ್ಷ ಆನೆಗಳನ್ನು ಹೊಂದಿದ್ದು, ವಿಶ್ವದಲ್ಲೇ ಅತಿಹೆಚ್ಚು ಆನೆಗಳನ್ನು ಹೊಂದಿರುವ ದೇಶವಾಗಿದೆ. ಇನ್ನೂ ಜಿಂಬಾಬ್ವೆ 1 ಲಕ್ಷ, ತಾಂಜಾನಿಯಾ 60 ಸಾವಿರ ಆನೆಗಳನ್ನು ಹೊಂದಿದೆ. 2022ರ ಗಣತಿ ಪ್ರಕಾರ 35 ಸಾವಿರ ಆನೆಗಳನ್ನು ಹೊಂದಿರುವ ಕೀನ್ಯಾ 4ನೇ ಸ್ಥಾನದಲ್ಲಿದ್ದು, 24 ಸಾವಿರ ಆನೆಗಳನ್ನು ಹೊಂದಿರುವ ದಕ್ಷಿಣ ಆಫ್ರಿಕಾ 5ನೇ ಸ್ಥಾನದಲ್ಲಿದೆ.

ನಮೀಬಿಯಾದಲ್ಲೂ ಬರ:
ಕೆಲ ದಿನಗಳ ಹಿಂದೆಯಷ್ಟೇ ನಮೀಬಿಯಾ ಸರ್ಕಾರವೂ ಪ್ರಾಣಿಗಳನ್ನು ಕೊಲ್ಲುವ ನಿರ್ಧಾರ ತೆಗೆದುಕೊಂಡಿದೆ. ಬರದಿಂದ (Drought) ತತ್ತರಿಸಿರುವ ನಮೀಬಿಯಾ ಜನರಿಗೆ ಆಹಾರ ಒದಗಿಸುವ ನಿಟ್ಟಿನಲ್ಲಿ 83 ಆನೆಗಳು (Elephants) ಸೇರಿದಂತೆ 723 ಕಾಡು ಪ್ರಾಣಿಗಳನ್ನು ಕೊಲ್ಲುವ ಯೋಜನೆಯನ್ನು ರೂಪಿಸಿದೆ. ತೀವ್ರ ಬರಗಾಲದಿಂದ ಆಹಾರಕ್ಕಾಗಿ ಹೆಣಗಾಡುತ್ತಿರುವವರಿಗೆ ಮಾಂಸವನ್ನು ವಿತರಿಸುವುದಾಗಿ ಸರ್ಕಾರ ಇತ್ತೀಚೆಗೆ ಹೇಳಿತ್ತು. ಇದನ್ನೂ ಓದಿ: ವಿಶ್ವದ ಮೊದಲ ಖಾಸಗಿ ಬಾಹ್ಯಕಾಶ ನಡಿಗೆ ಯಶಸ್ವಿ – ನಾಲ್ವರು ಗಗನಯಾತ್ರಿಗಳು ಭೂಮಿಗೆ ವಾಪಸ್

ಪ್ರಾಣಿಗಳ ಸಂಖ್ಯೆಯು ಲಭ್ಯವಿರುವ ಹುಲ್ಲುಗಾವಲು ಭೂಮಿ ಮತ್ತು ನೀರಿನ ಸಂಪನ್ಮೂಲಗಳನ್ನು ಮೀರಿದೆ. ಇದರಿಂದಾಗಿ ಜನವಸತಿ ಇರುವ ಸ್ಥಳಗಳಲ್ಲಿ ಕಾಡು ಪ್ರಾಣಿಗಳು ಮತ್ತು ಮಾನವರ ಸಂಘರ್ಷ ಹೆಚ್ಚಾಗಿದೆ. ಈ ಸಂಘರ್ಷವನ್ನು ನಿಯಂತ್ರಿಸಲು ಗುರುತಿಸಲಾದ ಪ್ರದೇಶಗಳಿಂದ 83 ಆನೆಗಳನ್ನು ಕೊಲ್ಲಲಾಗುತ್ತದೆ ಮತ್ತು ಮಾಂಸವನ್ನು ಬರ ಪರಿಹಾರ ಕಾರ್ಯಕ್ರಮಕ್ಕೆ ಬಳಸಲಾಗುತ್ತದೆ. ಆನೆಗಳ ಜೊತೆಗೆ, 30 ಹಿಪ್ಪೋಗಳು, 60 ಎಮ್ಮೆಗಳು, 50 ಇಂಪಾಲಾಗಳು, 100 ನೀಲಿ ಕಾಡುಕೋಣಗಳು, 300 ಜೀಬ್ರಾಗಳು ಮತ್ತು 100 ಎಲ್ಯಾಂಡ್‌ಗಳನ್ನು ಕೊಲ್ಲಲು ಯೋಜಿಸಿದೆ. ವೃತ್ತಿಪರ ಬೇಟೆಗಾರರು ಮತ್ತು ಸರ್ಕಾರದಿಂದ ಗುತ್ತಿಗೆ ಪಡೆದ ಕಂಪನಿಗಳು ಈಗಾಗಲೇ 157 ಪ್ರಾಣಿಗಳನ್ನು ಬೇಟೆಯಾಡಿ, 56,800 ಕೆಜಿ ಮಾಂಸವನ್ನು ಜನರಿಗೆ ನೀಡಲಾಗಿದೆ ಎಂದು ನಮೀಬಿಯಾ ಪರಿಸರ ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿತ್ತು.

Share This Article
Facebook Whatsapp Whatsapp Telegram
Previous Article Kangana Ranaut ಸಿಖ್ಖರ ಅವಹೇಳನ ಆರೋಪ – ಚಂಡೀಗಢ ಕೋರ್ಟ್‌ನಿಂದ ಕಂಗನಾಗೆ ʻಎಮರ್ಜೆನ್ಸಿʼ ನೋಟಿಸ್‌!
Next Article spurious liquor ಬಿಯರ್ ಪ್ರಿಯರಿಗೆ ಮತ್ತೆ ಶಾಕ್ – ಅಕ್ಟೋಬರ್ 1ರಿಂದಲೇ ಪರಿಷ್ಕೃತ ದರ ಜಾರಿಗೆ ಸಾಧ್ಯತೆ!

Latest Cinema News

karnataka High Court
ಕೇಂದ್ರದ ಅಧಿಕಾರವನ್ನು ರಾಜ್ಯ ಬಳಸುತ್ತಿದೆ, ಜಾತಿ ಸಮೀಕ್ಷೆಗೆ ತಡೆ ನೀಡಿ | ಲಿಂಗಾಯತ, ಒಕ್ಕಲಿಗ, ಕೇಂದ್ರ, ರಾಜ್ಯದ ವಾದ ಏನು?
Bengaluru City Court Latest Main Post Sandalwood
Dhruva Sarja
ಧ್ರುವ ಸರ್ಜಾ ಜೀವನದ ಜಂಬೂ ಸವಾರಿ – ಸೆ.27ಕ್ಕೆ ಉದಯ ಟಿವಿಯಲ್ಲಿ ಪ್ರಸಾರ
Bengaluru City Cinema Latest Sandalwood
Give Karnataka Ratna to Ambareesh Request from fans
ಅಂಬರೀಶ್‌ಗೆ ಕರ್ನಾಟಕ ರತ್ನ ನೀಡಿ- ಅಭಿಮಾನಿಗಳಿಂದ ಮನವಿ
Cinema Karnataka Latest Sandalwood
Kantara Chapter 1 Trailer released Rishab Shetty Hombale Films
ಕಾಂತಾರ ಚಾಪ್ಟರ್‌-1 ಟ್ರೈಲರ್ ರಿಲೀಸ್ – ದೃಶ್ಯ ವೈಭವಕ್ಕೆ ಮನಸೋತ ಫ್ಯಾನ್ಸ್
Bollywood Cinema Latest Main Post Sandalwood South cinema
Suhana syed
ನಿತಿನ್ ಶಿವಾಂಶ್ ಜೊತೆ ಪ್ರೀತಿ ಗುಟ್ಟು ರಟ್ಟು ಮಾಡಿದ ಖ್ಯಾತ ಗಾಯಕಿ ಸುಹಾನಾ ಸಯ್ಯದ್
Cinema Latest Sandalwood Top Stories

You Might Also Like

Mukleppa WIFE GAYATRI
Dharwad

ಮುಕಳೆಪ್ಪನ ಹೆಂಡತಿಯ ಮತ್ತೊಂದು ವೀಡಿಯೋ ವೈರಲ್ – ತಾಯಿ ಜೊತೆ ಗಾಯತ್ರಿ ಮಾತಾಡಿದ್ದೇನು?

12 minutes ago
Chalavadi Narayaswamy
Bengaluru City

ಕಾಂಗ್ರೆಸ್ ಸರ್ಕಾರದ ಬೂಟಾಟಿಕೆ, ಪುಂಡಾಟಿಕೆಯ ಸಮೀಕ್ಷೆ – ಜಾತಿಗಳ ಕ್ರಿಶ್ಚಿಯನ್ ಟ್ಯಾಗ್ ಕೈಬಿಡಿ: ಛಲವಾದಿ ಆಗ್ರಹ

15 minutes ago
Pradeep Eshwar
Bengaluru City

ಕುರುಬ ಸಮುದಾಯದ ಬಗ್ಗೆ ಅಧ್ಯಯನ ಮಾಡಿ ಛಲವಾದಿ ನಾರಾಯಣಸ್ವಾಮಿ ಮಾತಾಡಲಿ: ಪ್ರದೀಪ್ ಈಶ್ವರ್

44 minutes ago
KN Rajanna
Districts

ಜಾತಿ ಮುಂದೆ ಕ್ರಿಶ್ಚಿಯನ್ ಅಂತ ಬರೆದಿರೋದು ಸರ್ಕಾರವೇ ಮತಾಂತರಕ್ಕೆ ಪ್ರೋತ್ಸಾಹ ಕೊಟ್ಟಂತೆ: ಕೆ.ಎನ್‌ ರಾಜಣ್ಣ

45 minutes ago
Pradeep Eshwar
Bengaluru City

ನಮ್ಮದು ಜಾತ್ಯಾತೀತ ಸರ್ಕಾರ ಆಗಿರೋದಕ್ಕೆ ಬಾನು ಮುಷ್ತಾಕ್‌ರಿಂದ ದಸರಾ ಉದ್ಘಾಟನೆ ಮಾಡಿಸಿರೋದು: ಪ್ರದೀಪ್ ಈಶ್ವರ್

53 minutes ago
Previous Next
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?