ಸಿಖ್ಖರ ಅವಹೇಳನ ಆರೋಪ – ಚಂಡೀಗಢ ಕೋರ್ಟ್‌ನಿಂದ ಕಂಗನಾಗೆ ʻಎಮರ್ಜೆನ್ಸಿʼ ನೋಟಿಸ್‌!

Public TV
2 Min Read
Kangana Ranaut

ಚಂಡೀಗಢ: ಬಾಲಿವುಡ್ ನಟಿ ಹಾಗೂ ಸಂಸದೆ ಕಂಗನಾ ರಣಾವತ್ (Kangana Ranaut) ಅವರು ಸದ್ಯ ಟೆನ್ಶನ್‌ನಲ್ಲಿದ್ದಾರೆ. ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ಸಂಬಂಧಿಸಿದ ‘ಎಮರ್ಜೆನ್ಸಿ’ ಸಿನಿಮಾವನ್ನು (Emergency cinema) ನಟಿ ಕಂಗನಾ ಅವರು ನಿರ್ದೇಶಿಸಿ, ನಿರ್ಮಾಣ ಮಾಡಿದ್ದಾರೆ. ಜೊತೆಗೆ ಇದರಲ್ಲಿ ಇಂದಿರಾ ಗಾಂಧಿ  ಪಾತ್ರವನ್ನು ಕೂಡ ಅವರೇ ನಿಭಾಯಿಸಿದ್ದಾರೆ. ಆದರೆ ಅಂದುಕೊಂಡ ಸಮಯಕ್ಕೆ ಈ ಸಿನಿಮಾ ಬಿಡುಗಡೆ ಮಾಡಲು ಆಗಿಲ್ಲ. ಒಂದಿಲ್ಲೊಂದು ವಿವಾದಗಳ ಸುಳಿಗೆ ಸಿನಿಮಾ ಸಿಲುಕುತ್ತಲೇ ಇದೆ. ಈ ನಡುವೆ ಹೊಸದೊಂದಿ ಟೆನ್ಶನ್‌ ಶುರುವಾಗಿದೆ.

kangana ranaut

ವಿವಾದಾತ್ಮಕ ಚಿತ್ರ ʻಎಮರ್ಜೆನ್ಸಿʼಗೆ ಸಂಬಂಧಿಸಿದಂತೆ ಕಂಗನಾ ಅವರಿಗೆ ಚಂಡೀಗಢದ ಜಿಲ್ಲಾ ನ್ಯಾಯಾಲಯ (Chandigarh Court) ನೋಟಿಸ್ ಜಾರಿ ಮಾಡಿದೆ. ಜಿಲ್ಲಾ ವಕೀಲರ ಸಂಘದ ಮಾಜಿ ಅಧ್ಯಕ್ಷ ವಕೀಲ ರವೀಂದರ್ ಸಿಂಗ್ ಬಸ್ಸಿ ಅವರು, ಈ ಚಿತ್ರದಲ್ಲಿ ಸಿಖ್ಖರ ಪ್ರತಿಷ್ಠೆಯನ್ನು ಹಾಳು ಮಾಡಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಸಿಖ್ಖರ ಚಿತ್ರಣವನ್ನು ತಪ್ಪಾಗಿ ಪ್ರದರ್ಶಿಸಲಾಗಿದೆ. ಜೊತೆಗೆ ಸಿಖ್‌ ಸಮುದಾಯದ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಲಾಗಿದೆ. ಹಾಗಾಗಿ ಕಂಗನಾ ವಿರುದ್ಧ ಕೇಸ್‌ ದಾಖಲಿಸಬೇಕು ಎಂದು ಅರ್ಜಿಯಲ್ಲಿ ಕೋರಿದ್ದಾರೆ. ಇದನ್ನೂ ಓದಿ: Bigg Boss Kannada 11: ವೈರಲ್‌ ಆಗ್ತಿದೆ ದೊಡ್ಮನೆ ಸ್ಪರ್ಧಿಗಳ ಸಂಭಾವ್ಯ ಪಟ್ಟಿ

Kangana Ranaut 2

ಈ ಹಿನ್ನೆಲೆಯಲ್ಲಿ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡ ಕೋರ್ಟ್‌ ಕಂಗನಾ ಅವರಿಗೆ ನೋಟಿಸ್‌ ನೀಡಿದೆ. ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಡಿಸೆಂಬರ್‌ 5ಕ್ಕೆ ಮುಂದೂಡಿದೆ. ಇದನ್ನೂ ಓದಿ: ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿರುವ ಹಿನಾ ಖಾನ್ ರ‍್ಯಾಂಪ್ ವಾಕ್- ಮದುಮಗಳಂತೆ ಮಿಂಚಿದ ನಟಿ

ಸಿಖ್‌ ಸಂಘಟನೆಗಳಿಂದಲೂ ವ್ಯಾಪಕ ವಿರೋಧ:
ʻಎಮರ್ಜೆನ್ಸಿʼ ಸಿನಿಮಾ ಆರಂಭದಿಂದಲೂ ವಿವಾದದ ಸುಳಿಯಲ್ಲಿ ಸಿಲುಕಿದೆ. ಈ ನಡುವೆ ಶಿರೋಮಣಿ ಅಕಾಲಿ ದಳ ಸೇರಿದಂತೆ ಅನೇಕ ಸಿಖ್‌ ಸಂಘಟನೆಗಳು ವ್ಯಾಪಕ ವಿರೋಧ ವ್ಯಕ್ತಪಡಿಸಿವೆ. ಆರಂಭದಿಂದಲೂ ಸಿಖ್ ಸಮುದಾಯವನ್ನು (Sikh Community) ತಪ್ಪಾಗಿ ಬಿಂಬಿಸಲಾಗಿದೆ, ಸಿಖ್ಖರ ಸಮುದಾಯಗಳ ಬಗೆಗಿನ ನೈಜತೆಯನ್ನು ತಿರುಚಲಾಗಿದೆ ಎಂದು ಆರೋಪಿಸಿವೆ. ಇದನ್ನೂ ಓದಿ: ದರ್ಶನ್ & ಗ್ಯಾಂಗ್‌ಗೆ ನ್ಯಾಯಾಂಗ ಬಂಧನ ಅವಧಿ ಮತ್ತೆ ವಿಸ್ತರಣೆ – ಇನ್ನೂ 14 ದಿನ ಜೈಲೇ ಗತಿ

kangana ranaut emergency 3

‘ಎಮರ್ಜೆನ್ಸಿ’ ಸಿನಿಮಾ ಪೋಸ್ಟ್‌ಪೋನ್‌
‘ಎಮರ್ಜೆನ್ಸಿ’ ಚಿತ್ರವನ್ನು ಸೆ.6ರಂದು ರಿಲೀಸ್ ಮಾಡಬೇಕಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಬಿಡುಗಡೆಗೆ ಹಲವು ಅಡ್ಡಿ ಆತಂಕಗಳು ಎದುರಾಗಿವೆ. ಸೆನ್ಸಾರ್‌ಗೆ ಸಂಬಂಧಿಸಿದ ಸಮಸ್ಯೆಗಳಿಂದ ತೊಂದರೆ ಸಿಲುಕಿಕೊಂಡಿರುವ ಈ ಸಿನಿಮಾಗೆ ಇನ್ನೂ ಕೂಡ ಪ್ರಮಾಣ ಪತ್ರ ಸಿಕ್ಕಿಲ್ಲ. ಹಾಗಾಗಿ, ಕಂಗನಾ ಸಂಕಷ್ಟಕ್ಕೆ ಈಡಾಗಿದ್ದಾರೆ. ಅದೇ ಬೇಸರದಲ್ಲಿ ಅವರು ಒಂದಿಷ್ಟು ಹೇಳಿಕೆಗಳನ್ನು ನೀಡಿದ್ದಾರೆ. ಈ ಹಿಂದೆ ಸೆನ್ಸಾರ್ ಸಮಸ್ಯೆಗೆ ಸಿಲುಕಿದ್ದ ದೀಪಿಕಾ ಪಡುಕೋಣೆ ಅವರ ‘ಪದ್ಮಾವತ್’ ಮತ್ತು ಆಲಿಯಾ ಭಟ್ ಅವರ ‘ಉಡ್ತಾ ಪಂಜಾಬ್’ ಸಿನಿಮಾಗಳನ್ನು ಕಂಗನಾ ನೆನಪು ಮಾಡಿದ್ದಾರೆ.

ಇತ್ತೀಚೆಗೆ ನಟಿ ಕಂಗನಾ ಸಿನಿಮಾಗಾಗಿ ಬಾಂದ್ರಾದ ಪಾಲಿ ಹಿಲ್‌ನಲ್ಲಿರುವ ತಮ್ಮ ಬಂಗಲೆಯನ್ನೇ 32 ಕೋಟಿ ರೂ.ಗೆ ಮಾರಾಟ ಮಾಡಿರುವ ಬಗ್ಗೆ ವರದಿಯಾಗಿತ್ತು. ಇದನ್ನೂ ಓದಿ: ದರ್ಶನ್‌ಗೆ ರಾಜಾತಿಥ್ಯ – ಕಲಬುರಗಿ ಜೈಲಿಗೆ ವಿಲ್ಸನ್‌ ಗಾರ್ಡನ್‌ ನಾಗ ಶಿಫ್ಟ್‌

Share This Article