ಪಾಟ್ನಾ: ಇಬ್ಬರು ವ್ಯಕ್ತಿಗಳು ಗನ್ ತೋರಿಸಿ 14 ವರ್ಷದ ಬಾಲಕಿಯನ್ನು ಅತ್ಯಾಚಾರವೆಸಗಿರುವುದು ಪಾಟ್ನಾದಿಂದ ಸುಮಾರು 180 ಕಿಮೀ ದೂರದಲ್ಲಿರುವ ಸಹರ್ಸಾದಲ್ಲಿ ನಡೆದಿದೆ.
ಶನಿವಾರ ಮಧ್ಯಾಹ್ನ ಮೇಕೆಗಳನ್ನು ಮೇಯಿಸಲು ಬಾಲಕಿ ಹೋಗಿದ್ದಳು. ಬಳಿಕ ಅವಳು ಮನೆಗೆ ಹಿಂದಿರುಗುತ್ತಿದ್ದಾಗ ಕಾರಿನಲ್ಲಿ ಬಂದ ಮೂವರು ಆಕೆಯನ್ನು ಕರೆದಿದ್ದಾರೆ. ಬಳಿಕ ಅವರಲ್ಲಿ ಓರ್ವ ಆಕೆಯ ತಲೆಗೆ ಗನ್ ಹಿಡಿದು ಕಾರಿನೊಳಗೆ ಹತ್ತಿಸಿಕೊಂಡಿದ್ದಾನೆ. ಬಳಿಕ ಆಕೆಯ ಮೇಲೆ ಇಬ್ಬರು 2 ಗಂಟೆಗಳ ಕಾಲ ಅತ್ಯಾಚಾರ ಎಸಗಿದ್ದಾರೆ. ಈ ವೇಳೆ ಬಾಲಕಿಯ ಕಿರುಚಾಟ ಕೇಳಿಸದಂತೆ ಹಾಡನ್ನು ಹೆಚ್ಚಿನ ಸೌಂಡ್‍ನಲ್ಲಿ ಹಾಕಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಹೆಚ್ಚಾದ ರೋಡ್ ರೇಜ್ – ಶಾಲಾ ಬಸ್ ಮೇಲೆ ಪುಂಡರ ಅಟ್ಟಹಾಸ
ಮನೆಗೆ ಬಂದ ಬಳಿಕ ವಿಷಯವನ್ನು ಬಾಲಕಿ ಪೋಷಕರಿಗೆ ತಿಳಿಸಿದ್ದಾಳೆ. ಬಳಿಕ ಪ್ರಕರಣ ಮುಚ್ಚಿ ಹಾಕಲು ಆರೋಪಿಗಳ ಕುಟುಂಬದವರು ತಮಗೆ ಹಣ ನೀಡುವುದಾಗಿ ಆಮಿಷ ಒಡ್ಡಿದ್ದರು ಎಂದು ಬಾಲಕಿಯ ಚಿಕ್ಕಮ್ಮ ತಿಳಿಸಿದ್ದಾರೆ.
ಆರೋಪಿಗಳು ಎಷ್ಟು ಹಣ ನೀಡುತ್ತಾರೆ? ನನಗೆ ಅದು ಬೇಡ, ನನಗೆ ನ್ಯಾಯ ಬೇಕು ಎಂದು ಬಾಲಕಿಯ ತಂದೆ ಮಾಧ್ಯಮಗಳ ಮುಂದೆ ಹೇಳಿದ್ದಾರೆ.
ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡು ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದಾರೆ. ದೌರ್ಜನ್ಯ ಎಸಗಿರುವ ಆರೋಪಿಗಳನ್ನು ಬಿಟ್ಟು ಮತ್ತು ಅಂಕುಶ್ ಎಂದು ಗುರುತಿಸಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಕೊಲೆ ಆರೋಪಿ ದರ್ಶನ್ ಸೆಲ್‌ಗೆ ಬರಲಿದೆ 32 ಇಂಚಿನ ಟಿವಿ