ಮಂಗಳೂರು: ಪೊಲೀಸರ ಬಿಗಿ ಬಂದೋಬಸ್ತ್‌ನಲ್ಲಿ ಬಿ.ಸಿ ರೋಡ್ ಚಲೋ ಹಾಗೂ ಈದ್ ಮಿಲಾದ್ ಮೆರವಣಿಗೆ ಶಾಂತಿಯುತವಾಗಿ ನಡೆದಿದೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಎಸ್ಪಿ ಗಿರೀಶ್.ಎನ್ (Girish.N) ತಿಳಿಸಿದ್ದಾರೆ.
ಬಜರಂಗದಳ ಹಾಗೂ ವಿಹೆಚ್‌ಪಿಯಿಂದ ಬಿ.ಸಿ ರೋಡ್ (B C Road) ಚಲೋ ಕರೆ ಹಿನ್ನೆಲೆಯಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿ.ಸಿ ರೋಡ್‌ನಲ್ಲಿ ಜಮಾಯಿಸಿದ್ದರು. ಬಜರಂಗದಳ ಹಾಗೂ ವಿಹೆಚ್‌ಪಿಯ ಕಾರ್ಯಕರ್ತರ ನಡುವೆ ತಳ್ಳಾಟ ನೂಕಾಟ ನಡೆದಿತ್ತು. ಕೊನೆಗೆ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.ಇದನ್ನೂ ಓದಿ: ಈದ್ ಮೆರವಣಿಗೆಗೆ ಪ್ರತಿಯಾಗಿ ಬಜರಂಗದಳ-ವಿಹೆಚ್‌ಪಿಯಿಂದ ಬಿ.ಸಿ ರೋಡ್ ಚಲೋಗೆ ಕರೆ
ಪೊಲೀಸರ ಬಿಗಿ ಬಂದೋಬಸ್ತಿನಿಂದಾಗಿ ಬಿ.ಸಿ ರೋಡ್ ಮತ್ತೆ ಸಹಜ ಸ್ಥಿತಿಗೆ ಮರಳುತ್ತಿರುವ ಕುರಿತು ದ.ಕ ಎಸ್ಪಿ ಎನ್. ಯತೀಶ್ (N. Yatish) ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಎಸ್‌ಪಿ ಎನ್.ಯತೀಶ್ ಮಾತನಾಡಿ, ಬಂಟ್ವಾಳದ ಬಿ.ಸಿ ರೋಡ್ ಮತ್ತೆ ಸಹಜ ಸ್ಥಿತಿಗೆ ಮರಳುತ್ತಿದೆ. ದ.ಕ ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಕೈಕಂಬ ಮಸೀದಿಯ ಈದ್ ಮಿಲಾದ್ ಮೆರವಣಿಗೆ ರೂಟ್ ಬದಲಾವಣೆ ನಾವು ಮಾಡಿಲ್ಲ. ಹಿಂದೂ ಸಂಘಟನೆಯವರು ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತೇವೆ ಎಂದಿದ್ದರು. ಹಾಗಾಗಿ ಬಿ.ಸಿ ರೋಡ್ ಜಂಕ್ಷನ್‌ನಲ್ಲಿ ಅವಕಾಶ ನೀಡಿದ್ದೇವು. ಏನಾದರೂ ಸಮಸ್ಯೆಯಾದರೆ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದೇವೆ ಅಷ್ಟೇ ಎಂದು ತಿಳಿಸಿದರು.
ಪ್ರಚೋದನಾಕಾರಿ ಆಡಿಯೋ ಹರಿಬಿಟ್ಟ ಇಬ್ಬರ ಮೇಲೆಯೂ ಕ್ರಮವಾಗಿದೆ. ಶರೀಫ್ ಹಾಗೂ ಹಸೀನಾರ್ ಇಬ್ಬರನ್ನು ಬಂಧಿಸಿದ್ದೇವೆ. ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಮುನ್ನವೇ ಶಾಂತಿ ಸಭೆ ಮಾಡಿದ್ದೇವೆ. ಈವರೆಗೂ ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ. ಮುಂದೆಯೂ ಅಹಿತಕರ ಘಟನೆಗಳು ಜರುಗದಂತೆ ಕ್ರಮ ಕೈಗೊಳ್ಳುತ್ತೇವೆ. ಪರಿಸ್ಥಿತಿಗೆ ಅನುಗುಣವಾಗಿ ಬಿ.ಸಿ ರೋಡಿನಲ್ಲಿ ಬಂದೋಬಸ್ತ್ ಮುಂದುವರೆಸುತ್ತೇವೆ ಎಂದು ತಿಳಿಸಿದ್ದಾರೆ.
ಮತ್ತೋರ್ವ ಅಧಿಕಾರಿ ಗಿರೀಶ್.ಎನ್ ಮಾತನಾಡಿ, ಹಿಂದೂ ಸಂಘಟನೆಗಳು ಕರೆ ನೀಡಿದ್ದ ಬಿ.ಸಿ.ರೋಡ್ ಚಲೋ ಹಾಗೂ ಈದ್ ಮಿಲಾದ್ ಶಾಂತಿಯುತವಾಗಿ ನಡೆದಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಭಾರೀ ಪೊಲೀಸ್ ಬಂದೋಬಸ್ತ್ ನಡೆಸಲಾಗಿದೆ. ಘಟನೆಗೆ ಕಾರಣವಾದ ಆಡಿಯೋ ಹರಿಬಿಟ್ಟಿದ್ದ ಇಬ್ಬರನ್ನು ವಶಕ್ಕೆ ಪಡೆಯಲಾಗಿದ್ದು, ಅವರ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ ಎಂದಿದ್ದಾರೆ.ಇದನ್ನೂ ಓದಿ: ಹದಿಹರೆಯದ ಹುಡುಗಿಯರ ಮಿದುಳಿಗೆ ಬೇಗ ವಯಸ್ಸಾಗ್ತಿದೆಯಂತೆ; ಯಾಕೆ ಗೊತ್ತಾ? – ಅಧ್ಯಯನ ಹೇಳೋದೇನು?