ಮಹಾರಾಷ್ಟ್ರ ಸಿಎಂ ಮನೆಯಲ್ಲಿ ಗಣೇಶ ಹಬ್ಬ ಸಂಭ್ರಮ – ಪೂಜೆಯಲ್ಲಿ ಸಲ್ಮಾನ್‌ ಖಾನ್‌ ಭಾಗಿ

Public TV
1 Min Read
salman khan Ganpati puja

ಮುಂಬೈ: ಸಹೋದರಿ ಜೊತೆಗೂಡಿ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ (Salman Khan), ಮಹಾರಾಷ್ಟ್ರ ಸಿಎಂ ಏಕನಾಥ್‌ ಶಿಂಧೆ ಅವರ ನಿವಾಸದಲ್ಲಿ ಗಣೇಶ ಪೂಜೆಯಲ್ಲಿ ಪಾಲ್ಗೊಂಡಿದ್ದರು.

ಏಕನಾಥ್‌ ಶಿಂಧೆ (Eknath Shinde) ಅವರು ತಮ್ಮ ಇನ್‌ಸ್ಟಾ ಖಾತೆಯಲ್ಲಿ, ಗಣೇಶ ಚತುರ್ಥಿ (Ganapati Puja) ಆಚರಣೆಯ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಸಲ್ಮಾನ್ ಖಾನ್ ಮತ್ತು ಅವರ ಸಹೋದರಿ ಅರ್ಪಿತಾ ಖಾನ್ ಗಣಪತಿ ಪೂಜೆಯಲ್ಲಿ ಪಾಲ್ಗೊಂಡಿದ್ದ ಫೋಟೊ ಕೂಡ ಅದರಲ್ಲಿದೆ. ಇದನ್ನೂ ಓದಿ: ಓಣಂ ಹಬ್ಬದಂದು ‌’ವೆಟ್ಟೈಯಾನ್’ ಚಿತ್ರದ ಹಾಡಿಗೆ ಹೆಜ್ಜೆ ಹಾಕಿದ ತಲೈವಾ

ಸಲ್ಮಾನ್ ತಮ್ಮ ಕ್ಯಾಶುಯಲ್ ಲುಕ್ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಏಕನಾಥ್ ಶಿಂಧೆ ಅವರು ಸಲ್ಮಾನ್‌ಗೆ ಪುಷ್ಪಗುಚ್ಛ ನೀಡಿ, ವರ್ಣರಂಜಿತ ಶಾಲು ಹೊದಿಸಿ ಸ್ವಾಗತ ಕೋರಿದ್ದಾರೆ. ಶಿಂಧೆ ಅವರ ಪುತ್ರ ಹಾಗೂ ಸಂಸದ ಡಾ.ಶ್ರೀಕಾಂತ್ ಶಿಂಧೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪ್ರತಿ ವರ್ಷದಂತೆ ಈ ವರ್ಷವೂ ಸಲ್ಮಾನ್‌ ಖಾನ್‌ ತಮ್ಮ ಮನೆಯಲ್ಲೂ ಗಣೇಶ ಚುತುರ್ಥಿ ಆಚರಿಸಿದ್ದಾರೆ. ಗಣೇಶ ಮೂರ್ತಿ ವಿಸರ್ಜನೆ ಸಂದರ್ಭದ ಫೋಟೊಗಳನ್ನು ಸ್ಟಾರ್‌ ನಟ ಹಂಚಿಕೊಂಡಿದ್ದರು. ಸಲ್ಮಾನ್ ಸಹೋದರಿ ಅರ್ಪಿತಾ ಖಾನ್ ಶರ್ಮಾ ಮತ್ತು ಅವರ ಪತಿ ಆಯುಷ್ ಶರ್ಮಾ ಕೂಡ ತಮ್ಮ ಮಕ್ಕಳೊಂದಿಗೆ ಸೇರಿ ನೃತ್ಯ ಮಾಡಿದ್ದರು. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಪೆಟ್ಟಾ’ ಚಿತ್ರದ ನಟಿ ಮೇಘಾ

Share This Article