– ದೇಹದಾರ್ಢ್ಯ ಉಳಿಸಿಕೊಳ್ಳದಿದ್ರೆ ಕಷ್ಟ ಎಂದು ಅಳಲು
– ದರ್ಶನ್ ಬೇಡಿಕೆ ನಿರಾಕರಿಸಿದ ಜೈಲಾಧಿಕಾರಿ
ಬಳ್ಳಾರಿ: ರೇಣುಕಾಸ್ವಾಮಿ ಹತ್ಯೆ ಕೇಸ್‍ನಲ್ಲಿ (Renukaswamy Murder case) ಜೈಲಲ್ಲಿರುವ ದರ್ಶನ್ (Darshan) ಜೈಲಾಧಿಕಾರಿಗಳ ಮುಂದೆ ಬಾಡಿ ಮೇಂಟೆನ್ಸ್ ಪೌಡರ್ ಹಾಗೂ ವಿಟಮಿನ್ ಪೌಡರ್‌ಗೆ ಬೇಡಿಕೆ ಇಟ್ಟಿದ್ದು, ಜೈಲಾಧಿಕಾರಿಗಳು ಸಾರಾಸಗಟಾಗಿ ಬೇಡಿಕೆ ತಿರಸ್ಕರಿಸಿದ್ದಾರೆ.
ಜೈಲಿಲ್ಲಿ (Bellary jail) ಫಿಟ್ನೆಸ್ ಬಗ್ಗೆಯೇ ದರ್ಶನ್ ಚಿಂತೆ ಮಾಡುತ್ತಿದ್ದಾರೆ. ದೇಹದಾರ್ಢ್ಯ ಸರಿಯಾಗಿ ಉಳಿಸಿಕೊಳ್ಳದಿದ್ದರೆ ನನಗೆ ಕಷ್ಟ ಆಗುತ್ತದೆ. ವಿಟಿಮಿನ್ ಪೌಡರ್‍ನ್ನು ಕುಟುಂಬಸ್ಥರ ಮೂಲಕ ತರಿಸಿಕೊಡಿ ಎಂದು ಜೈಲಿನ ಸಿಬ್ಬಂದಿ ಹಾಗೂ ವಾರ್ಡನ್ ಬಳಿ ಪದೇ ಪದೇ ಕೇಳಿಕೊಂಡಿದ್ದಾರೆ. ದರ್ಶನ್ ಮನವಿಯನ್ನು ಜೈಲಾಧಿಕಾರಿಗಳು ತಿರಸ್ಕರಿಸಿದ್ದಾರೆ.
ನೀವು ಏನ್ ಅಂದುಕೊಂಡಿದ್ದೀರಿ?
ಜೈಲಲ್ಲಿ ನೀವು ಕೇಳಿದ್ದನ್ನು ಕೊಡೋಕೆ ಅವಕಾಶ ಇಲ್ಲ. ನಿಯಮದ ಅನುಸಾರ ವಿಚಾರಣಾಧೀನ ಖೈದಿಗೆ ಯಾವ ಸೌಲಭ್ಯಗಳನ್ನು ಕೊಡಲು ಅವಕಾಶ ಇದೆಯೋ ಆ ಸೌಲಭ್ಯಗಳನ್ನು ಮಾತ್ರ ಕೊಡಲು ಸಾಧ್ಯ ಎಂದು ಹೇಳಿದ್ದಾರೆ.
ಈ ಹಿಂದೆ ದರ್ಶನ್ ಆರೋಗ್ಯದ ನೆಪ ಹೇಳಿ ಮನೆಯೂಟ ಕೇಳಿ ಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಹೈಕೋರ್ಟ್‍ನಲ್ಲಿ ವಿಚಾರಣೆ ಹಂತದಲ್ಲಿದೆ.