ಹೆಬ್ಬಾವಿನ ಮರಿ ಎಂದು ಬರಿಗೈಯಲ್ಲಿ ಹಾವು ಹಿಡಿದ ವ್ಯಕ್ತಿ ಸಾವು

Public TV
1 Min Read
Mangaluru man dies from snakebite

ಮಂಗಳೂರು: ಹೆಬ್ಬಾವಿನ (Python) ಮರಿ ಎಂದು ವಿಷದ (Venom) ಹಾವಿನ ಮರಿಯನ್ನ ಬರಿಗೈಯಲ್ಲಿ ಹಿಡಿದ ವ್ಯಕ್ತಿಗೆ ಹಾವು ಕಡಿದು ಸಾವನ್ನಪ್ಪಿದ ಘಟನೆ ಮಂಗಳೂರು (Mangaluru) ಹೊರವಲಯದ ಮರವೂರು ಎಂಬಲ್ಲಿ ನಡೆದಿದೆ.

ಬಂಟ್ವಾಳ ನಿವಾಸಿ 58 ವರ್ಷದ ರಾಮಚಂದ್ರ ಪೂಜಾರಿ ಮೃತ ದುರ್ದೈವಿ. ಮೃತ ರಾಮಚಂದ್ರ ಪೂಜಾರಿ ಮರವೂರಿನ ಮನೆಯೊಂದರಲ್ಲಿ ಸೆಕ್ಯೂರಿಟಿ ಕೆಲಸ ಮಾಡಿಕೊಂಡಿದ್ದರು. ಇದನ್ನೂ ಓದಿ: ಅಸಭ್ಯ ವರ್ತನೆ, ಟಿವಿಗಾಗಿ ಕಿರಿಕಿರಿ – ದರ್ಶನ್‌ಗೆ ಜೈಲರ್ ವಾರ್ನಿಂಗ್

Mangaluru man dies from snakebite 1

ಸೆ.4 ರ ಮಧ್ಯಾಹ್ನ ಮನೆಯ ಮೆಟ್ಟಿಲು ಸಮೀಪ ಹಾವಿನ ಮರಿಯೊಂದು ಕಾಣಿಸಿಕೊಂಡಿದೆ. ವಿಷಪೂರಿತ ಕನ್ನಡಿ ಹಾವಿನ ಮರಿಯನ್ನು ಹೆಬ್ಬಾವಿನ ಮರಿ ಎಂದು ಭಾವಿಸಿ ಬರಿಗೈಯಲ್ಲಿ ರಾಮಚಂದ್ರ ಪೂಜಾರಿ ಹಿಡಿದಿದ್ದರು.  ಇದನ್ನೂ ಓದಿ:  ಹಾಸನ| ಅನಾರೋಗ್ಯದಿಂದ ಸಿಆರ್‌ಪಿಎಫ್‌ ಯೋಧ ಸಾವು – ವೈದ್ಯರ ನಿರ್ಲಕ್ಷ್ಯಕ್ಕೆ ಬಲಿ ಎಂದ ಕುಟುಂಬ

ಈ ವೇಳೆ ಹಾವಿನ‌ ಮರಿ ಕೈಗೆ ಕಚ್ಚಿದ್ದರೂ ಅದು ಹೆಬ್ಬಾವಿನ ಮರಿ ಎಂದು ನಿರ್ಲಕ್ಷಿಸಿದ್ದರು. ಬಳಿಕ‌ ರಾಮಚಂದ್ರ ಅಸ್ವಸ್ಥಗೊಂಡ ಹಿನ್ನಲೆಯಲ್ಲಿ ಆಸ್ಪತ್ರೆ ದಾಖಲು ಮಾಡಲಾಗಿದ್ದು,ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

 

Share This Article