ಪ್ರಜ್ವಲ್ ವಿರುದ್ಧ 3ನೇ ಕೇಸ್- ಎಸ್‌ಐಟಿಯಿಂದ 1,691 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆ

Public TV
1 Min Read
Prajwal Revanna 4

ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ವಿರುದ್ಧ ಅತ್ಯಾಚಾರ ಆರೋಪದ ಮೂರನೇ ಪ್ರಕರಣದಲ್ಲಿ ಎಸ್‌ಐಟಿ ಇಂದು ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಿದೆ.

ಜಿಲ್ಲಾ ಪಂಚಾಯಿತಿ ಸದಸ್ಯೆ ನೀಡಿದ್ದ ದೂರಿನ ಮೇರೆಗೆ ಸಂತ್ರಸ್ತೆಯ ಸೀರೆಯನ್ನು ಪ್ರಮುಖ ಸಾಕ್ಷ್ಯ ಮಾಡಿಕೊಂಡು, 120 ಸಾಕ್ಷಿಗಳು, 1,691 ಪುಟಗಳ ಸುದೀರ್ಘ ದೋಷಾರೋಪ ಪಟ್ಟಿಯನ್ನು ಎಸ್‌ಐಟಿ, ನ್ಯಾಯಾಲಯಕ್ಕೆ ಸಲ್ಲಿಸಿದೆ. ಇದನ್ನೂ ಓದಿ: ದೆಹಲಿಯಲ್ಲಿ ಮುಂದುವರಿದ ಮಳೆ – ಹಲವು ಪ್ರದೇಶಗಳು ಜಲಾವೃತ

ಚಾರ್ಜ್‌ಶೀಟ್‌ನಲ್ಲಿ ಏನಿದೆ?
ಗನ್ ಪಾಯಿಂಟ್‌ನಲ್ಲಿ ಬೆದರಿಸಿ ಮಹಿಳೆ ಮೇಲೆ ಅತ್ಯಾಚಾರ ಎಸಗಲಾಗಿದೆ. ವೀಡಿಯೋ ಮಾಡಿಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಿ ಪದೇ ಪದೇ ಅತ್ಯಾಚಾರ ವೆಸಗಿ ದೌರ್ಜನ್ಯ ನಡೆಸಲಾಗಿದೆ. ಸಂಸದ ಅನ್ನೋ ಭಯದಿಂದ ದೂರು ಕೊಡದೆ ಸುಮ್ಮನಿರೋದಾಗಿ ಸಂತ್ರಸ್ತೆ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ರೈತರಿಗೆ ಅನುಕೂಲ ಮಾಡದೇ ಮಣ್ಣಿನ ಮಕ್ಕಳು ಅಂತಾರೆ: ಹೆಚ್‌ಡಿಕೆ ವಿರುದ್ಧ ಸಿಎಂ ವಾಗ್ದಾಳಿ

Share This Article