Nagamangala Violence | ಹಿಂದೂಗಳ ಮೇಲೆ ಹಾಕಿರೋ ಕೇಸ್ ವಾಪಸ್ ಪಡೆಯದೇ ಹೋದ್ರೆ ಹಳ್ಳಿ ಹಳ್ಳಿಗಳಲ್ಲಿ ಪ್ರತಿಭಟನೆ- ತೇಜಸ್ವಿಸೂರ್ಯ

Public TV
2 Min Read
nagamangala violence tejasvi surya

ಬೆಂಗಳೂರು : ನಾಗಮಂಗಲ ಗಲಭೆ ಕೇಸ್‌ನಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ದಾಖಲಾಗಿರೋ ಕೇಸ್ ಸರ್ಕಾರ ಕೈ ಬಿಡಬೇಕು. ಇಲ್ಲದೆ ಹೋದರೆ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಹಳ್ಳಿ ಹಳ್ಳಿಗಳಲ್ಲಿ ಬಿಜೆಪಿ ಯುವ ಮೋರ್ಚಾ ಹೋರಾಟ ಮಾಡುತ್ತದೆ ಎಂದು ಸಂಸದ, ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿಸೂರ್ಯ (Tejasvi Surya) ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಬಿಜೆಪಿ (BJP) ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾಗಮಂಗಲದಲ್ಲಿ ನಿನ್ನೆ ಕೋಮುಗಲಭೆ ನಡೆದಿದೆ. ಕಾಂಗ್ರೆಸ್ (Congress) ಸರ್ಕಾರ ಬಂದಾಗ ರಾಜ್ಯದಲ್ಲಿ ಟಿಪ್ಪು, ಔರಂಗಜೇಬನ ಸಂತತಿ ಹುಟ್ಟುತ್ತೆ. ಎಲ್ಲಿಲ್ಲದವರು ಹೊರಗೆ ಬರ್ತಾರೆ. ನಿನ್ನೆ ಗೃಹ ಸಚಿವರು ಇದೊಂದು ಸಣ್ಣ ಘಟನೆ ಎಂದು ಹೇಳಿದ್ದಾರೆ. ಪರಮೇಶ್ವರ್ ಅವರಿಗೆ ಕೇಳುತ್ತೇನೆ ನಿಮ್ಮ ಮನೆ ರಸ್ತೆಯಲ್ಲಿ ಯಾರಾದರು ಗಣೇಶ ಕೂರಿಸಿ ಅಲ್ಲಿ ಕಲ್ಲು ಹೊಡೆದರೆ, ಬೆಂಕಿ ಹಚ್ಚಿದರೆ, ನಿಮ್ಮ ಮನೆಗೆ ಕಲ್ಲು ತೂರಾಟ ಮಾಡಿದರೆ. ಅದನ್ನ ಸಣ್ಣ ಘಟನೆ ಅಂತೀರಾ ಎಂದು ಪ್ರಶ್ನಿಸಿದರು. ನಿಮ್ಮ ಮನೆಗೆ ಬೆಂಕಿ ಬೀಳೋವರೆಗೂ ಘಟನೆ ಬಗ್ಗೆ ಗೊತ್ತಾಗಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಸಿಬಿಐ ಪಂಜರದ ಗಿಳಿಯಾಗಬಾರದು, ಜಾಮೀನು ಸಿಕ್ಕರೂ ಸಿಎಂ ಕಚೇರಿ ಪ್ರವೇಶಿಸುವಂತಿಲ್ಲ: ಸುಪ್ರೀಂ ಹೇಳಿದ್ದೇನು?

ಸಂಪೂರ್ಣ ಘಟನೆಯಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ಕೇಸ್ ಹಾಕಿದ್ದಾರೆ. ಕರ್ನಾಟಕದಲ್ಲಿ ಸಂವಿಧಾನದ ಪ್ರಕಾರ ಕಾನೂನು ನಡೆಯುತ್ತಿದೆಯಾ? ಅಥವಾ ಷರಿಯಾ ಪ್ರಕಾರ ಕಾನೂನು ನಡೆಯುತ್ತಿಯಾ? ಗಣೇಶ ಕೂರಿಸೋಕು ಕರ್ನಾಟಕದಲ್ಲಿ ಸಾಧ್ಯವಿಲ್ಲವಾ? ಎಂದು ಸರ್ಕಾರದ ವಿರುದ್ಧ ಪ್ರಶ್ನೆ ಎತ್ತಿದ್ದಾರೆ.

ಒಂದು ಸಮುದಾಯದ ಪರ ತುಷ್ಟೀಕರಣ ನೀತಿ ಮಾಡಿ ಗಣೇಶ ಕೂರಿಸಿದರೆ ನೀವು ಬೆಂಕಿ ಹಾಕಿಸಿ, ಕಲ್ಲು ಹೊಡೆಸುತ್ತಿದ್ದೀರಾ. ಇದು ಓಲೈಕೆ ರಾಜಕಾರಣ ಅಲ್ಲವಾ ಅಂತ ಪ್ರಶ್ನೆ ಮಾಡಿದರು. ಮೊನ್ನೆ ಉತ್ತಮ ಶಿಕ್ಷಕ ಪ್ರಶಸ್ತಿಯನ್ನ ಎಸ್‌ಡಿಪಿಐ ಅವರು ವಿರೋಧ ಮಾಡಿದ್ರು ಅಂತ ಉಡುಪಿಯಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿ ರದ್ದು ಮಾಡಿದೆ ಈ ಸರ್ಕಾರ.ಈ ಸರ್ಕಾರ ಎಸ್‌ಡಿಪಿಐ, ಪಿಎಫ್‌ಐ ಸಂಘಟನೆಗಳಿಗೆ ಶರಣಾಗಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: MUDA Scam |ಸಿಎಂ ಪತ್ನಿ ಕೇಳಿದ್ದು 13 ಸೈಟ್ – ಪ್ರಾಧಿಕಾರ ಕೊಟ್ಟಿದ್ದು 14 ಸೈಟ್!

ರಾಜ್ಯದ ಜನತೆ ಧೈರ್ಯವಾಗಿ ಗಣೇಶ ಹಬ್ಬ ಹಿಂದೂ ಹಬ್ಬ ಮಾಡಿ. ಬಿಜೆಪಿ ನಿಮ್ಮ ಜೊತೆ ಇರುತ್ತದೆ ಎಂದು ಕರೆ ನೀಡಿದರು. ಪರಮೇಶ್ವರ್ (G Parameshwar) ಮತ್ತು ಸಿಎಂಗೆ ಮನವಿ ಮಾಡುತ್ತೇನೆ. ನಿನ್ನೆ ನಾಗಮಂಗಲದಲ್ಲಿ ಯಾರು ಟೆರೆರಿಸ್ಟ್ಗಳು ಬೆಂಕಿ ಹಾಕಿದ್ರೋ ಅವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಹಿಂದೂ ಯುವಕರ ಮೇಲೆ ಹಾಕಿರೋ ಕೇಸ್ ವಾಪಸ್ ಪಡೆಯಬೇಕು. ಪಿಎಫ್‌ಐ ಕೈ ಬಿಡಬೇಕು. ಇದೇ ರೀತಿ ಅಮಾಯಕರ ಮೇಲೆ ಕ್ರಮಕ್ಕೆ ಮುಂದಾದ್ರೆ ನಾವು ಹಳ್ಳಿ ಹಳ್ಳಿಯಲ್ಲಿ ಹೋರಾಟ ಮಾಡುತ್ತೇವೆ. ಕೂಡಲೇ ಹಿಂದೂಗಳ ಮೇಲೆ ಹಾಕಿರೋ ಕೇಸ್ ವಾಪಸ್ ಪಡೆಯುವಂತೆ ಸರ್ಕಾರವನ್ನು ಆಗ್ರಹಿಸಿದರು. ಇದನ್ನೂ ಓದಿ: ಜಾಮೀನು ಅರ್ಜಿಯನ್ನು ಹಿಂದಕ್ಕೆ ಪಡೆದ ಪವಿತ್ರಾ ಗೌಡ

Share This Article