‘ಹೌಸ್‌ಫುಲ್-5’ ಸಿನಿಮಾಗೆ ಐದು ಜನ ನಾಯಕಿಯರು

Public TV
1 Min Read
Housefull 5 4

ಬಾಲಿವುಡ್‌ನಲ್ಲಿ ಹೌಸ್‌ಫುಲ್ ಸಿರೀಸ್ ಕಾಮಿಡಿ ಹಾಗೂ ಫ್ಯಾಮಿಲಿ ಎಂಟರ್‌ಟೈನ್ ಮೂಲಕವೇ ಧೂಳೆಬ್ಬಿಸಿವೆ. ಈಗಾಗಲೇ ನಾಲ್ಕು ಪಾರ್ಟ್ನಲ್ಲಿ ಮಾಡಿದ ಮೋಡಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಬಾಲಿವುಡ್ ಆ್ಯಕ್ಷನ್‌ಕಿಂಗ್ ಅಕ್ಷಯ್‌ಕುಮಾರ್ ಹಾಗೂ ನಿರ್ಮಾಪಕ ಸಾಜಿದ್ ನಡಿಯಾವಾಲಾ ಲೆಗೆಸ್ಸಿ ಮತ್ತೆ ಕಂಟಿನ್ಯೂ ಆಗಿದೆ. ಇದೇ ಸೆಪ್ಟಂಬರ್ 15ರಿಂದ ಸಿನಿಮಾ ಶೂಟಿಂಗ್‌ಗೂ ಪ್ಲಾನ್ ಮಾಡಲಾಗಿದೆಯಂತೆ. ಹೌಸ್‌ಫುಲ್-5 (Housefull 5) ಚಿತ್ರದ ಮೊದಲ ಹಂತದ ಶೂಟಿಂಗ್‌ನ್ನ ಲಂಡನ್‌ನಲ್ಲಿ ಮಾಡುವ ಯೋಜನೆಯನ್ನ ಹಮ್ಮಿಕೊಂಡಿದೆಯಂತೆ ಚಿತ್ರತಂಡ.

Housefull 5 3

ಹೌಸ್‌ಫುಲ್ ಪಾರ್ಟ್-5 ಸಿನಿಮಾ ಹೆಸರಿಗೆ ತಕ್ಕಂತೆ ಕಲಾವಿದರಿಂದ ತುಂಬಿ ತುಳುಕುತ್ತಿದೆ. ಅಕ್ಷಯ್‌ಕುಮಾರ್ ಜೊತೆ ರಿತೇಶ್ ದೇಶ್‌ಮುಖ್, ಸಂಜಯ್ ದತ್, ಜಾಕಿ ಶ್ರಾಫ್, ಫರ್ದೀನ್ ಖಾನ್, ನಾನಾ ಪಾಟೇಕರ್ ಸೇರಿದಂತೆ ಅನೇಕರು ಪಾತ್ರವರ್ಗದಲ್ಲಿದ್ದಾರೆ. ಇದ್ರ ಜೊತೆಗೆ ಫೀಮೇಲ್ ಲೀಡ್‌ನಲ್ಲಿ ಐದು ಜನ ನಾಯಕಿಯರು ಈ ಸಿನಿಮಾದ ಸೆಂಟ್ರಾಫ್ ಅಟ್ರಾö್ಯಕ್ಷನ್. ಜಾಕ್ವೇಲಿನ್ ಫರ್ನಾಂಡಿಸ್, ನರ್ಗಿಸ್ ಫಕ್ರಿ, ಸೋನಮ್ ಬಾಜ್ವಾ, ಚಿತ್ರಾಂಗದಾ ಸಿಂಗ್ ಹಾಗೂ ಸೌಂದರ್ಯ ಶರ್ಮಾ ಫೀಮೇಲ್ ಲೀಡ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Housefull 5 2

ಅಂದಹಾಗೆ ಕಲಾವಿದರಿಂದ ತುಂಬಿ ತುಳುಕುತ್ತಿರುವ ಹೌಸ್‌ಫುಲ್-5 ಸಿನಿಮಾಗೆ ತರುಣ್ ಮಾನ್ಸುಖನಿ ನಿರ್ದೇಶನ ಮಾಡ್ತಿದ್ದಾರೆ. ಈಗಾಗಲೇ ನಾಲ್ಕು ಸಿರೀಸ್ ಮೂಲಕ ನಗಿಸಿ ನಗಿಸಿ ಹೊಟ್ಟೆ ಹುಣ್ಣು ಮಾಡಿಯಾಗಿದೆ. ಇನ್ನು ಹೌಸ್‌ಫುಲ್-5 ರಸದೌತಣ ಹೇಗಿರುತ್ತೆ ಅನ್ನೋ ಕುತೂಹಲ ಇನ್ನು ಜಾಸ್ತಿ ಆಗ್ತಿದೆ. ಸದ್ಯ ಸಿನಿಮಾ ಹಾಗೂ ಪಾತ್ರಗಳ ಬಗ್ಗೆ ಮಾಹಿತಿ ಹಂಚಿಕೊಂಡಿದೆ ಚಿತ್ರತಂಡ.

Housefull 5 1

ಸುಮಾರು 45 ದಿನಗಳ ಶೆಡ್ಯೂಲ್ ಹಾಕಿಕೊಂಡಿರುವ ಚಿತ್ರತಂಡ, ಮೊದಲು ಲಂಡನ್‌ನ ಸುಂದರ ತಾಣಗಳಲ್ಲಿ ಸಿನಿಮಾದ ಶೂಟಿಂಗ್ ಮಾಡಲು ಯೋಜನೆ ಹಾಕಿಕೊಳ್ಳಲಾಗಿದೆ. ಕಾಮಿಡಿ ಜೊತೆಗೆ ಬ್ಯೂಟಿಫುಲ್ ಹಾಡುಗಳು ಸಿನಿಮಾದಲ್ಲಿ ಇರಲಿದ್ದು, ಫ್ಯಾಮಿಲಿ ಆಡಿಯೆನ್ಸ್ ಅಟ್ರ್ಯಾಕ್ಟ್ ಮಾಡುವ ನಿಟ್ಟಿನಲ್ಲಿ ಕಥೆಯನ್ನ ಈ ಬಾರಿ ವಿಭಿನ್ನವಾಗಿ ನರೇಟ್ ಮಾಡಿಕೊಂಡಿದ್ದಾರೆ ನಿರ್ದೇಶಕರು.

ಒಟ್ಟಿನಲ್ಲಿ ಹೌಸ್‌ಫುಲ್ ನಾಲ್ಕೂ ಸಿರೀಸ್ ಮನಸೂರೆ ಮಾಡಿದಂತೆ, ಹೌಸ್‌ಫುಲ್-5 ಸಿನಿಮಾ ಕೂಡಾ ಪ್ರೇಕ್ಷಕರಿಗೆ ಎಂಟರ್‌ಟೈನ್ ನೀಡಲು ಭರ್ಜರಿ ತಯಾರಿ ಮಾಡಿಕೊಂಡಿದೆಯಂತೆ. ಇನ್ನು ಈ ತಂಡಕ್ಕೆ ಯಾರೆಲ್ಲ ಸೇರಿಕೊಳ್ಳಲಿದ್ದಾರೆ. ಸಿನಿಮಾದ ಕಂಟೆಂಟ್ ಹೇಗಿರಲಿದೆ ಅನ್ನೋದನ್ನ ತಿಳ್ಕೋಬೇಕಂದ್ರೆ ಕೆಲ ದಿನಗಳವರೆಗೆ ಕಾಯಲೇಬೇಕು.

Share This Article