ನಮಗೆ ಯಾರ ತುಷ್ಟೀಕರಣ ಅಗತ್ಯ ಇಲ್ಲ, ಮಾಡುವುದೂ ಇಲ್ಲ: ದಿನೇಶ್ ಗುಂಡೂರಾವ್

Public TV
1 Min Read
DINESH GUNDURAO

– ಬೆಂಕಿ ಹಚ್ಚೋದ್ರಲ್ಲಿ ಶೋಭಾ ಕರಂದ್ಲಾಜೆ ಯಾವಾಗ್ಲೂ ಮುಂಚೂಣಿಯಲ್ಲಿರ್ತಾರೆ: ಸಚಿವ ವಾಗ್ದಾಳಿ

ಬೆಂಗಳೂರು: ಯಾರ ತುಷ್ಟೀಕರಣ ಮಾಡುವ ಅವಶ್ಯಕತೆ ನಮಗಿಲ್ಲ. ನಾವು ಯಾರ ತುಷ್ಟೀಕರಣವೂ ಮಾಡಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಯಾರೇ ಈ ಥರ ಘಟನೆಗೆ ಕಾರಣವಾದ್ದರೂ ಶಿಕ್ಷೆ ಆಗಬೇಕು. ಇಂಥ ಘಟನೆ ಆಗಲು ಬಿಡಬಾರದು. ಘರ್ಷಣೆ ಹಿಂಸೆಗಳಿಂದ ಯಾರಿಗೂ ಲಾಭವಿಲ್ಲ. ಯಾರ ತುಷ್ಟೀಕರಣವೂ‌ ಇಲ್ಲ. ಯಾರೇ ತಪ್ಪು ಮಾಡಿದರೂ ಕೂಡ ಕ್ರಮ ಆಗಬೇಕು. ಕಾಂಪ್ರಮೈಸ್ ಆಗಬಾರದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮಂಡ್ಯ ಜಿಲ್ಲೆಗೆ ಕಾಲಿಟ್ಟ ಬಳಿಕ ಬಿಜೆಪಿಯಿಂದ ಕೋಮು ಗಲಭೆ ಸೃಷ್ಟಿ: ಹರಿಪ್ರಸಾದ್

Stone pelting lathi charge during Ganesha procession in Nagamangala 4

ಪೊಲೀಸರೂ ಕೂಡ ಸ್ಪಷ್ಟವಾಗಿ ನೋಡಬೇಕಾಗುತ್ತದೆ. ಎಲ್ಲವನ್ನೂ ಕೂಡ ತನಿಖೆ ಮಾಡಬೇಕಾಗುತ್ತದೆ. ಪ್ರಚೋದನಕಾರಿ ಮಾತುಗಳು ಬೇಡ. ಲಕ್ಷಾಂತರ ಗಣಪತಿ ಕೂರಿಸ್ತಾರೆ. ಶೋಭಾ ಕರಂದ್ಲಾಜೆಯದ್ದೂ ಯಾವಾಗಲೂ ಇದೇ ಕಥೆ. ಬೆಂಕಿ ಹಚ್ಚುವುದರಲ್ಲಿ ಅವರೇ ಮುಂಚೂಣಿಯಲ್ಲಿರ್ತಾರೆ ಅಲ್ವ ಎಂದು ಕುಟುಕಿದ್ದಾರೆ.

ಕೋಮು ವೈಷಮ್ಯ ಹೆಚ್ಚು ಮಾಡುವುದಕ್ಕೇ ಬಿಜೆಪಿ ಇರುವುದು. ಬೇರೆ ಪ್ರಕರಣ ಆದರೆ ಬಿಜೆಪಿ ತಲೆ ಕೆಡಿಸಿಕೊಳ್ಳಲ್ಲ. ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಬಿಜೆಪಿ ಮಾಡುತ್ತದೆ. ಎಲ್ಲ ಕಾಲದಲ್ಲಿ ಕೂಡ ಘಟನೆಗಳಾಗಿವೆ. ಸುಮ್ಮನೆ ಸುಳ್ಳು ಹೇಳುವ ಕೆಲಸ ಬಿಜೆಪಿ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಆಕಸ್ಮಿಕ ಪದ ಬಳಸಿ ಅನ್ಯಕೋಮಿನವರಿಗೆ ಬೆಂಬಲ – ಬೇಹುಗಾರಿಕೆ ಇಲಾಖೆಯನ್ನು ಮುಚ್ಚಿಬಿಡಿ ಎಂದ ಯತ್ನಾಳ್

ನಾವಂತೂ ತುಷ್ಟೀಕರಣ ಮಾಡಲು ಹೋಗುವುದಿಲ್ಲ, ಮಾಡಲೂಬಾರದು. ಇದೊಂದು ಸಣ್ಣ ಪ್ರಕರಣವೇ? ಆದರೆ ಇದರ ರಾಜಕೀಯ ಲಾಭ ಪಡೆಯಲು ಯಾರೂ ಮುಂದಾಗಬಾರದು. ಹಿಂದೆ ಕೆರೆಗೋಡು ಧ್ವಜದ ವಿಚಾರದಲ್ಲಿ ಬಿಜೆಪಿ ಏನು ಮಾಡಿತು? ಹನುಮ ಧ್ವಜ ಪ್ರಕರಣದಲ್ಲಿ ಅವರ ನಡವಳಿಕೆ ಸರಿ ಇತ್ತಾ? ಇದಕ್ಕೆ ನಾವು ಪ್ರೋತ್ಸಾಹ ಕೊಡುವುದಿಲ್ಲ ಕೊಡಲೂಬಾರದು ಎಂದಿದ್ದಾರೆ.

Share This Article