10 ವರ್ಷಗಳಿಂದ ಲಿವ್‌ ಇನ್‌ ರಿಲೇಷನ್‌ಶಿಪ್‌ – ಮನೆ ಖರೀದಿಗೆ ಪವಿತ್ರಾಗೆ 1.75 ಕೋಟಿ ಕೊಟ್ಟಿದ್ದ ದರ್ಶನ್‌

Public TV
1 Min Read
pavithra gowda

ಬೆಂಗಳೂರು: ಪವಿತ್ರಾ ಗೌಡ (Pavithra Gowda) ಜೊತೆ ನಾನು 10 ವರ್ಷಗಳಿಂದ ಲಿವ್‌ ಇನ್‌ ರಿಲೇಷನ್‌ ಶಿಪ್‌ನಲ್ಲಿ (Live In Relationship) ಇದ್ದೇನೆ ಎಂದು ನಟ ದರ್ಶನ್‌ (Darshan) ಹೇಳಿದ್ದಾರೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣ (Renukaswamy Murder Case) ಸಂಬಂಧ ಕೋರ್ಟ್‌ಗೆ ಸಲ್ಲಿಕೆಯಾಗಿರುವ ಚಾರ್ಜ್‌ಶೀಟ್‌ (Chargesheet) ಕಾಪಿ ಪಬ್ಲಿಕ್‌ ಟಿವಿಗೆ ಲಭ್ಯವಾಗಿದೆ. ಈ ಚಾರ್ಜ್‌ಶೀಟ್‌ನಲ್ಲಿ ದರ್ಶನ್‌ ಅವರು ಪವಿತ್ರಾ ಗೌಡ ಜೊತೆಗಿನ ಸಂಬಂಧದ ಬಗ್ಗೆ ಸ್ವಇಚ್ಛಾ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ‘ಡಿ’ ಗ್ಯಾಂಗ್‌ಗೆ ಜೈಲೇ ಗತಿ – ಮತ್ತೆ 3 ದಿನ ನ್ಯಾಯಾಂಗ ಬಂಧನ ವಿಸ್ತರಣೆ

Pavithra Gowda DOG

ದರ್ಶನ್‌ ಹೇಳಿದ್ದೇನು?
ಪವಿತ್ರಾಗೌಡ ಜೊತೆ ಸುಮಾರು 10 ವರ್ಷಗಳಿಂದ ನಾನು ಲೀವ್ ಇನ್ ರಿಲೇಷನ್‌ಷಿಪ್‌ನಲ್ಲಿದ್ದೇನೆ. ಪವಿತ್ರಾ ಗೌಡ ಆರ್‌ಆರ್‌ನಗರದಲ್ಲಿನ ನನ್ನ ಮೇಲಿನ ವಿಳಾಸದ ಮನೆಯಿಂದ ಸುಮಾರು ಒಂದುವರೆ ಕಿಲೋ ಮೀಟರ್ ದೂರದಲ್ಲಿ ನೆಲೆಸಿದ್ದಾರೆ.

ನನಗೆ ಜೆಟ್‌ಲ್ಯಾಗ್ ಪಬ್‌ನ ಮಾಲೀಕರಾದ ದಿವಂಗತ ಸೌಂದರ್ಯ ಜಗದೀಶ್ ಅವರು ಸುಮಾರು 10 ವರ್ಷ ಗಳಿಂದ ಪರಿಚಯವಿದ್ದಾರೆ. 2018 ರಲ್ಲಿ ನಾನು ಪವಿತ್ರಾ ಗೌಡಗೆ ಮನೆಯನ್ನು ಖರೀದಿಸಲು ಸ್ನೇಹಿತರಾದ ಸೌಂದರ್ಯ ಜಗದೀಶ್‌ ಅವರಿಂದ 1.75 ಕೋಟಿ ರೂ. ಸಾಲವನ್ನು ಪಡೆದಿದ್ದೆ. ಈ ಹಣವನ್ನು ನಾನು ಪವಿತ್ರಾ ಅವರ ಬ್ಯಾಂಕ್‌ ಖಾತೆಗೆ ನೇರವಾಗಿ ವರ್ಗಾವಣೆ ಮಾಡಿದ್ದೆ. ಈ ಸಾಲದ ಹಣವನ್ನು 2 ವರ್ಷದ ಹಿಂದೆ ಸೌಂದರ್ಯ ಜಗದೀಶ್‌ ಅವರಿಗೆ ನನ್ನ ಬ್ಯಾಂಕ್‌ ಖಾತೆಯಿಂದ ವರ್ಗಾವಣೆ ಮಾಡಿರುತ್ತೇನೆ. ಈ ಹಣವ ಸಿನಿಮಾ ನಟನೆಗೆ ಪಡೆದ ಸಂಭಾವನೆಯಾಗಿರುತ್ತದೆ.

ವಿಜಯಲಕ್ಷ್ಮಿ ಬಗ್ಗೆ ಹೇಳಿದ್ದೇನು?
ನನ್ನ ಮೇಲೆ ನನ್ನ ಧರ್ಮ ಪತ್ನಿಯಾದ ವಿಜಯಲಕ್ಷ್ಮೀ (Vijayalakshmi) ಸೆ.9, 2011 ರಂದು ವಿಜಯನಗರ ಪೊಲೀಸ್ ಕಾಣೆಯಲ್ಲಿ ದೂರನ್ನು ನೀಡಿದ್ದರು. ಈ ದೂರಿನಂತೆ ಐಪಿಸಿ ಸೆಕ್ಷನ್‌ 498ಎ, 355, 307, 323, 506 ಆರ್ಮ್ಸ್ ಆಕ್ಟ್ ರೀತ್ಯ ಕೇಸು ದಾಖಲಾಗಿತ್ತು. ಈ ಪ್ರಕರಣಗಳು ಖುಲಾಸೆಯಾಗಿದೆ. ನನ್ನ ಮತ್ತು ವಿಜಯಲಕ್ಷ್ಮಿ ವಿವಾಹವಾಗಿ 22 ವರ್ಷವಾಗಿದ್ದು, ಮೇ 19ಕ್ಕೆ ವಿವಾಹ ವಾರ್ಷಿಕೋತ್ಸವದ ಪ್ರಯುಕ್ತ ದುಬೈಗೆ ಹೋಗಿ ಬಂದಿದ್ದೆವು.

 

Share This Article