ಈ ವರ್ಷದ ಅಂತ್ಯಕ್ಕಿಲ್ಲ ಯೆಲ್ಲೋ ಲೈನ್ ಮೆಟ್ರೋ – 14 ದಿನಗಳ ಕಾಲ ಟೆಕ್ನಿಕಲ್ ಟೆಸ್ಟ್

Public TV
2 Min Read
yellow line metro tchnical test

ಬೆಂಗಳೂರು: ಬೆಂಗಳೂರು ನಮ್ಮ ಮೆಟ್ರೋ ಯೆಲ್ಲೋ ಲೈನ್ (Bengaluru Namma Metro Yellow Line) ನಿರ್ಮಾಣ ಕಾರ್ಯಗಳು ಪೂರ್ಣಗೊಂಡಿದ್ದು, ಇಂದಿನಿಂದ 14 ದಿನಗಳ ಕಾಲ ಆರ್‌ಡಿಎಸ್‌ಓ (RDSO) ರೈಲ್ವೆ ಅಧಿಕಾರಗಳಿಂದ ಟೆಕ್ನಿಕಲ್ ಟೆಸ್ಟ್ (Technical Test) ಆರಂಭಿಸಿದ್ದಾರೆ.

ಇದಕ್ಕೂ ಮುನ್ನ ಈ ವರ್ಷದ ಅಂತ್ಯದಲ್ಲಿ ಯೆಲ್ಲೋ ಲೈನ್ ಕಾರ್ಯಾರಂಭಿಸುವ ಕುರಿತು ಮಾಹಿತಿ ನೀಡಿದ್ದ ಬಿಎಂಆರ್‌ಸಿಎಲ್ (BMRCL), ನಿರೀಕ್ಷೆ ಇಟ್ಟಿದ್ದ ಜನರಲ್ಲಿ ನಿರಾಸೆಯನ್ನುಂಟು ಮಾಡಿದೆ.ಇದನ್ನೂ ಓದಿ: ‘ಫೈರ್‌ ಫ್ಲೈ’ ಟೀಸರ್ ರಿಲೀಸ್- ವಿಕ್ಕಿಯಾಗಿ ವಂಶಿಯನ್ನು ಪರಿಚಯಿಸಿದ ಚಿತ್ರತಂಡ

ಆರ್‌ವಿ ರಸ್ತೆಯಿಂದ (RV Road) ಬೊಮ್ಮಸಂದ್ರವರೆಗೆ (Bommasandra) ಹಳದಿ ಮಾರ್ಗದ ನಿರ್ಮಾಣ ಕಾರ್ಯಗಳು ಈಗಾಗಲೇ ಪೂರ್ಣಗೊಂಡಿವೆ. ಆದರೆ ಹಲವಾರು ಟೆಕ್ನಿಕಲ್ ಕೆಲಸಗಳು ಬಾಕಿ ಇರುವ ಕಾರಣ ಇಂದಿನಿಂದ ಸುಮಾರು 14 ದಿನಗಳ ಕಾಲ ಪ್ರಾಯೋಗಿಕ ಟೆಸ್ಟ್ ನಡೆಯಲಿದೆ. ಈಗಾಗಲೇ ಆರ್‌ಡಿಎಸ್‌ಓ ರೈಲ್ವೆ ಆರ್ಗನೈಸೇಷನ್ ಅಧಿಕಾರಿಗಳು ಟೆಕ್ನಿಕಲ್ ಟೆಸ್ಟ್ ಆರಂಭಿಸಿದ್ದಾರೆ.

ಇದಾದ ಬಳಿಕ ರೈಲ್ವೆ ಮಂಡಳಿಗೆ ಟೆಕ್ನಿಕಲ್ ರಿಪೋರ್ಟ್ ಸಲ್ಲಿಸಬೇಕು. ರಿಪೋರ್ಟ್‌ನ ಪರಿಶೀಲನೆ ನಡೆಸಿ, ಮಂಡಳಿಯು ತಾಂತ್ರಿಕ ಮಂಜೂರಾತಿಯನ್ನು ನೀಡುತ್ತದೆ. ಆ ಮೂಲಕ ಯೆಲ್ಲೋ ಲೈನ್ ಮೆಟ್ರೋ ಆರಂಭದ ಕುರಿತು ಬಿಎಂಆರ್‌ಸಿಎಲ್ ತಿಳಿಸುತ್ತದೆ. ಟೆಕ್ನಿಕಲ್ ಕೆಲಸಗಳು ಇರುವ ಕಾರಣ ಮುಂದಿನ ವರ್ಷ 2025 ಜನವರಿ ಅಥವಾ ಫೆಬ್ರವರಿಗೆ ಆರಂಭ ಆಗುವ ಸಾಧ್ಯತೆ ಇದೆ.ಇದನ್ನೂ ಓದಿ: ದೀಪಾವಳಿಯೊಳಗೆ ಕಾಂಗ್ರೆಸ್‌ ಸರ್ಕಾರ ಢಮಾರ್‌: ಸಿಟಿ ರವಿ

yellow line metro technical test

ಯಾವೆಲ್ಲಾ ಟೆಸ್ಟ್‌ಗಳು ನಡೆಯಲಿವೆ?
ಸ್ಪೀಡ್ ಟೆಸ್ಟ್, ಬ್ರೇಕ್ ಟೆಸ್ಟ್, ಮರಳಿನ ಮೂಟೆಗಳನ್ನು ಹಾಕಿ ತೂಕದ ಟೆಸ್ಟ್, ಹೆಚ್ಚು ತೂಕ ಇದ್ದಾಗ ಸ್ಪೀಡ್ ಟೆಸ್ಟ್, ಕಡಿಮೆ ತೂಕ ಇದ್ದಾಗ ಸ್ಪೀಡ್ ಟೆಸ್ಟ್, ಟೆಕ್ನಿಕಲ್ ತಾಂತ್ರಿಕ ಪ್ರಯೋಗ ಪರೀಕ್ಷೆ , ಮೆಟ್ರೋ ಸ್ಟೇಷನ್ ಬಳಿ ಸ್ಟಾಪ್ ಪ್ರಮಾಣ ಟೆಸ್ಟ್ ನಡೆಯಲಿದೆ

Share This Article