ಬಾಲಿವುಡ್ ನಟ ಅಕ್ಷಯ್ ಕುಮಾರ್ (Akshay Kumar) ಇಂದು (ಸೆ.9) 57ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ದಿನ ಫ್ಯಾನ್ಸ್‌ಗೆ ನಟ ಸಿಹಿಸುದ್ದಿ ಕೊಟ್ಟಿದ್ದಾರೆ. ‘ಭೂತ್ ಬಂಗ್ಲಾ’ (Bhooth Bangla) ಕಥೆ ಹೇಳಲು ನಟ ರೆಡಿಯಾಗಿದ್ದಾರೆ. ಇದನ್ನೂ ಓದಿ:ಹೊಸ ರಿಯಾಲಿಟಿ ಶೋಗೆ ‘ಬಿಗ್ ಬಾಸ್’ ವಿನ್ನರ್ ಕಾರ್ತಿಕ್ ಹೋಸ್ಟ್
ಅಕ್ಷಯ್ ನಟನೆಯ ‘ಭೂತ್ ಬಂಗ್ಲಾ’ ಇಂದು ಸಿನಿಮಾದ ಫಸ್ಟ್ ಲುಕ್ ರಿವೀಲ್ ಆಗಿದೆ. ಕೈಯಲ್ಲಿ ಹಾಲಿನ ಬೌಲ್ ಹಿಡಿದು, ನಟನ ಬೆನ್ನ ಮೇಲೆ ಕಪ್ಪು ಬಣ್ಣದ ಬೆಕ್ಕೊಂದು ಉಗ್ರವಾಗಿ ಪೋಸ್ ಕೊಟ್ಟಿದೆ. ನಟ ಹಾಲನ್ನು ಬೆಕ್ಕಿನಂತೆ ಕುಡಿಯುತ್ತಿದ್ದಾರೆ. ಅವರ ಹಿಂದೆ ಭಯಾನಕವಾಗಿರುವ ಅರಮನೆಯೊಂದು ಇದೆ. ಸದ್ಯ ಈ ಪೋಸ್ಟರ್‌ಗೆ ಅಭಿಮಾನಿಗಳಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ.
View this post on Instagram
ನಟ ಅಕ್ಷಯ್ ಕುಮಾರ್ ಪೋಸ್ಟರ್ ಅನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ, ನನ್ನ ಜನ್ಮದಿನದಂದು ಶುಭ ಹಾರೈಸಿದ ಎಲ್ಲರಿಗೂ, ನಿಮ್ಮ ಪ್ರೀತಿಗೂ ಧನ್ಯವಾದಗಳು. ‘ಭೂತ್ ಬಂಗ್ಲಾ’ದ ಮೊದಲ ಲುಕ್ ಈಗ ರಿಲೀಸ್ ಆಗಿದೆ. 14 ವರ್ಷಗಳ ನಂತರ ಮತ್ತೆ ಪ್ರಿಯದರ್ಶನ್ ಜೊತೆ ಕೆಲಸ ಮಾಡುತ್ತಿರೋದು ತುಂಬಾ ಖುಷಿ ತಂದಿದೆ. ಈ ಅದ್ಭುತ ಪ್ರಯಾಣವನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ನಾನು ಕಾಯುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಈ ಹಿಂದೆ ಇಬ್ಬರ ಕಾಂಬಿನೇಷನ್‌ನಲ್ಲಿ ‘ಹೇರಾ ಫೇರಿ’, ‘ಭೂಲ್ ಭುಲೈಯಾ’ ಸೂಪರ್ ಸಕ್ಸಸ್ ಕಂಡಿದೆ. ಹಾಗಾಗಿ 14 ವರ್ಷಗಳ ನಂತರ ಅಕ್ಷಯ್ ಮತ್ತು ಪ್ರಿಯದರ್ಶನ್ ಕೈಜೋಡಿಸುತ್ತಿದ್ದಾರೆ. ಸಾಲು ಸಾಲು ಸಿನಿಮಾಗಳ ಸೋಲಿನ ಸುಳಿಯಲ್ಲಿರುವ ಅಕ್ಷಯ್‌ಗೆ ಈ ಸಿನಿಮಾ ಕೈಹಿಡಿಯುತ್ತಾ ಕಾದುನೋಡಬೇಕಿದೆ.