– 350 ಇದ್ದ ಟ್ರಾಫಿಕ್ ಸಿಗ್ನಲ್ 400 ಕ್ಕೆ ಏರಿಕೆ
– ಸಿಗ್ನಲ್‌ಗಳಲ್ಲಿ ಕಾಯುವ ವೇಟಿಂಗ್ ಟೈಂ ಕೂಡ ಹೆಚ್ಚಳ
ಬೆಂಗಳೂರು: ನಗರದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗುತ್ತಿದ್ದು, ಟ್ರಾಫಿಕ್ ಸಿಗ್ನಲ್‌ಗಳ (Traffic Signal) ಸಂಖ್ಯೆಯೂ ಹೆಚ್ಚಾಗಿದೆ. ಜೊತೆಗೆ ಸಿಗ್ನಲ್‌ಗಳಲ್ಲಿ ಕಾಯುವ ವೇಟಿಂಗ್ ಟೈಮ್ ಕೂಡ ಹೆಚ್ಚಾಗಿದೆ. ಬೆಂಗಳೂರಿನ ಯಾವ್ಯಾವ ವಲಯದಲ್ಲಿ ಟ್ರಾಫಿಕ್ ಸಿಗ್ನಲ್ ಹೆಚ್ಚಾಗಿವೆ.
ಬೆಂಗಳೂರು (Bengaluru) ನಗರ ಬೆಳೆದಂತೆ ಸಂಚಾರ ದಟ್ಟಣೆ ಹೆಚ್ಚಾಗ್ತಿದೆ. ಟ್ರಾಫಿಕ್ ಸಮಸ್ಯೆ ಬಿಗಡಾಯಿಸುತ್ತಾ ಇದೆ. ಟ್ರಾಫಿಕ್ ಸಮಸ್ಯೆ ಆಗ್ತಾ ಇದ್ದು, ಟ್ರಾಫಿಕ್ ಸಿಗ್ನಲ್‌ಗಳ ಸಂಖ್ಯೆ ಹೆಚ್ಚಳ ಆಗಿದೆ. 2019 ರವರೆಗೂ 300 ಟ್ರಾಫಿಕ್ ಸಿಗ್ನಲ್‌ಗಳು ಇದ್ದವು. ಬಳಿಕವೂ 50 ಟ್ರಾಫಿಕ್ ಸಿಗ್ನಲ್‌ಗಳು ನಿರ್ಮಾಣ ಆದವು. ಈಗ ಹೊಸದಾಗಿ ಮತ್ತೆ 52 ಟ್ರಾಫಿಕ್ ಸಿಗ್ನಲ್‌ಗಳು ಉದ್ಭವ ಆಗಲಿವೆ. ಅಲ್ಲಿಗೆ ನಗರದಲ್ಲಿ ಟ್ರಾಫಿಕ್ ಸಿಗ್ನಲ್‌ಗಳ ಸಂಖ್ಯೆ 402ಕ್ಕೆ ಏರಿಕೆ ಆಗುತ್ತಿದೆ. ಇದನ್ನೂ ಓದಿ: ಜಾತ್ರೆಯಲ್ಲಿ ರಥದ ಚಕ್ರಕ್ಕೆ ಸಿಲುಕಿ ಯುವಕ ದುರ್ಮರಣ
ಎಲ್ಲೆಲ್ಲಿ ಟ್ರಾಫಿಕ್ ಸಿಗ್ನಲ್ ಹೆಚ್ಚಳ?
* ಬೆಂಗಳೂರು ಸೆಂಟ್ರಲ್ ಡಿವಿಷನ್ – 65 ಟ್ರಾಫಿಕ್ ಸಿಗ್ನಲ್
* ಬೆಂಗಳೂರು ಪೂರ್ವ – 56
* ಬೆಂಗಳೂರು ಉತ್ತರ – 38
* ಬೆಂಗಳೂರು ದಕ್ಷಿಣ – 86
* ಈಶಾನ್ಯ ವಿಭಾಗ – 86
* ಆಗ್ನೇಯ ವಿಭಾಗ – 36
* ಬೆಂಗಳೂರು ಪಶ್ಚಿಮ ವಿಭಾಗ – 35
ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಕಾಯುವ ಸಮಯ ಕೂಡ ಈಗಾಗಲೇ ಜಾಸ್ತಿ ಮಾಡಲಾಗಿದೆ. ನಗರದ ಗೊರಗುಂಟೆಪಾಳ್ಯ, ಶಂಕರ ಮಠ ಸಿಗ್ನಲ್, ಕೆ.ಆರ್. ಸರ್ಕಲ್ ಸೇರಿದಂತೆ ಅನೇಕ ಕಡೆ 200 ಸೆಕೆಂಡ್ ನೀಡಲಾಗಿದೆ. ಗೊರುಗುಂಟೆ ಪಾಳ್ಯ ಮಾರ್ಗದಲ್ಲಿ ಮೂರರಿಂದ ಎಂಟು ನಿಮಿಷ ಕೂಡ ಆಗ್ತಿವೆ. ಸಿಗ್ನಲ್‌ಗಳಲ್ಲಿ ಹೆಚ್ಚು ವಾಹನಗಳು ಇರುವುದರಿಂದ ಹೆಚ್ಚು ಸಮಯದ ಬಿಡಲಾಗ್ತಿದೆ. ಇದನ್ನೂ ಓದಿ: ಎನ್‌ಆರ್‌ಸಿಗೆ ಅರ್ಜಿ ಸಲ್ಲಿಸದಿದ್ರೆ ಆಧಾರ್ ಕಾರ್ಡ್ ಇಲ್ಲ: ಅಸ್ಸಾಂ ಸಿಎಂ ಘೋಷಣೆ