ಬಾಗಲಕೋಟೆ: ಜಿಲ್ಲೆಯಲ್ಲಿ (Bagalkote) ಕಳೆದ ಎರಡು ತಿಂಗಳ ಹಿಂದೆ ನಡೆದಿದ್ದ ಭ್ರೂಣಹತ್ಯೆ ಕೇಸ್ (Foeticide case) ಮಾಸುವ ಮುನ್ನವೇ ಮತ್ತೊಂದು ಪ್ರಕರಣ ನಡೆದಿದೆ. ಜಿಲ್ಲೆಯ ಮಹಾಲಿಂಗಪುರ ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಭ್ರೂಣಹತ್ಯೆ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ.
ಮುಧೋಳ್‍ನ ರನ್ನಬೆಳಗಲಿ ಗ್ರಾಮದ 24 ವರ್ಷದ ಮಹಿಳೆಯ ಗರ್ಭದಲ್ಲಿ ಹೆಣ್ಣು ಮಗು ಇದೆ ಎಂದು ವೈದ್ಯರು ತಿಳಿಸಿದ್ದರು. ಇದರಿಂದ ಮಹಿಳೆಯ 14 ವಾರಗಳ ಭ್ರೂಣವನ್ನು ತೆಗೆಸಲು ಕುಟುಂಬದವರು ಮತ್ತು ವೈದ್ಯರು ನಿರ್ಧರಿಸಿದ್ದರು. ಬಳಿಕ ಗರ್ಭಪಾತದ ವೇಳೆ ಪೋಷಕರಿಗೆ ಅದು ಗಂಡು ಮಗು ಎಂದು ಗೊತ್ತಾಗಿದೆ. ಇದರಿಂದ ಈ ಪ್ರಕರಣ ಹೊರಬಂದಿದೆ.
ಸ್ಥಳಕ್ಕೆ ಬಾಗಲಕೋಟೆ ಡಿಹೆಚ್‍ಓ ಸುವರ್ಣ ಕುಲಕರ್ಣಿ, ಮುಧೋಳ್ ಟಿಹೆಚ್‍ಓ ಮಲಘಾಣ್ ಭೇಟಿ ಪರಿಶೀಲನೆ ನಡೆಸಿದ್ದಾರೆ.
ಆಸ್ಪತ್ರೆಯ ಡೆಲಿವರಿ ಥಿಯೇಟರ್, ಸ್ಕ್ಯಾನಿಂಗ್ ಸೆಂಟರ್, ಎಂಆರ್‍ಡಿ ರೂಮ್ ಸೀಜ್ ಮಾಡಲಾಗಿದೆ. ವೈದ್ಯರ ವಿರುದ್ಧ ಪ್ರಕರಣ ದಾಖಲಿಸಲು ಅಧಿಕಾರಿಗಳು ತಯಾರಿ ನಡೆಸಿದ್ದಾರೆ.
ಇತ್ತೀಚೆಗೆ ಇದೇ ಮಹಾಲಿಂಗಪುರ ಪಟ್ಟಣದಲ್ಲಿ ಗರ್ಭಪಾತದಿಂದ ಮಹಾರಾಷ್ಟ್ರ ಮಹಿಳೆ ಮೃತಪಟ್ಟಿದ್ದಳು.