ಶುಕ್ರವಾರ ಎತ್ತಿನಹೊಳೆ ಯೋಜನೆ ಉದ್ಘಾಟನೆ – ಸಕಲೇಶಪುರದ ಕೆಲವೆಡೆ ವಾಹನ ಸಂಚಾರಕ್ಕೆ ನಿರ್ಬಂಧ

Public TV
1 Min Read
Yettinahole Project

ಹಾಸನ: ಸಕಲೇಶಪುರ (Sakleshpur) ತಾಲೂಕಿನ ದೊಡ್ಡನಾಗರ ಮತ್ತು ಹೆಬ್ಬನಹಳ್ಳಿ ಗ್ರಾಮಗಳಲ್ಲಿ ಎತ್ತಿನಹೊಳೆ ಯೋಜನೆ (Eettinahole Project) ಲೋಕಾರ್ಪಣೆಗೆ ಮುಖ್ಯಮಂತ್ರಿಗಳು, ಇತರೇ ಸಚಿವರು ಹಾಗೂ ಶಾಸಕರು ಆಗಮಿಸುತ್ತಿರುವುದರಿಂದ ಕೆಲವು ಕಡೆಗಳಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.

ಹಾಸನದ (Hassana) ಕಡೆಯಿಂದ ಬರುವ ಸಾರ್ವಜನಿಕರು ಈಶ್ವರಹಳ್ಳಿ ಕೂಡಿಗೆಯಿಂದ ಬೆಳಗೋಡು ರಸ್ತೆ ಮುಖಾಂತರ ಹೆಬ್ಬನಹಳ್ಳಿ ಸಮಾರಂಭ ಸ್ಥಳಕ್ಕೆ ಆಗಮಿಸಬೇಕಾಗುತ್ತದೆ. ಹೆಚ್ಚುವರಿಯಾಗಿ ಹಾಸನದ ಕಡೆಯಿಂದ ಮತ್ತು ಸಕಲೇಶಪುರದ ಕಡೆಯಿಂದ ಬರುವ ಸಾರ್ವಜನಿಕರಿಗೆ ಬಾಗೆ-ಬೆಳಗೋಡು ರಸ್ತೆ ಮುಖಾಂತರ ಹೆಬ್ಬನಹಳ್ಳಿ ಗ್ರಾಮದ ಸಮಾರಂಭ ಸ್ಥಳಕ್ಕೆ ತೆರಳಲು ವ್ಯವಸ್ಥೆ ಮಾಡಲಾಗಿದೆ.

DK Shivakumar Ettinahole Project 3

ಎತ್ತಿನಹೊಳೆ ಯೋಜನೆ ಕಾಮಗಾರಿ ಲೋಕಾರ್ಪಣಾ ಕಾರ್ಯಕ್ರಮಕ್ಕೆ ಆಗಮಿಸುವ ಅತಿಥಿ ಗಣ್ಯವ್ಯಕ್ತಿಗಳ ಸಂಚಾರಕ್ಕಾಗಿ ಗುಲಗಳಲೆ ಚಿಕ್ಕಿ ಫ್ಯಾಕ್ಟರಿ ಮುಖಾಂತರ ಹೆಬ್ಬನಹಳ್ಳಿ ಗ್ರಾಮದ ಕಾರ್ಯಕ್ರಮ ಸ್ಥಳಕ್ಕೆ ತೆರಳಲು ರಸ್ತೆ ಕಾಯ್ದಿರಿಸಲಾಗಿದೆ.

ಈ ರಸ್ತೆಯಲ್ಲಿ ಯಾವುದೇ ಸಾರ್ವಜನಿಕ ವಾಹನಗಳಿಗೆ ಸಂಚಾರಕ್ಕೆ ಅವಕಾಶ ಇರುವುದಿಲ್ಲ. ಗಣ್ಯ ವ್ಯಕ್ತಿಗಳು ಎತ್ತಿನಹೊಳೆ ಯೋಜನೆ ಕಾಮಗಾರಿ ಲೋಕಾರ್ಪಣಾ ಕಾರ್ಯಕ್ರಮಕ್ಕೆ ಹೆಬ್ಬನಹಳ್ಳಿ ಗ್ರಾಮದ ಸಮಾರಂಭ ಸ್ಥಳಕ್ಕೆ ತೆರಳಲು ಮಠಸಾಗರ ಜಂಕ್ಷನ್ ಮುಖಾಂತರ ಕಾರ್ಯಕ್ರಮ ಸ್ಥಳಕ್ಕೆ ತೆರಳಲು ವ್ಯವಸ್ಥೆ ಮಾಡಲಾಗಿದೆ. ಇದನ್ನೂ ಓದಿ: ವರ್ಷ ವರ್ಷ ಹಬ್ಬ ಬರುತ್ತೆ ಆದ್ರೆ ನಾಳೆಯ ಹಬ್ಬ ಮತ್ತೆ ಬರಲ್ಲ: ಡಿಕೆಶಿ

ಬೇಲೂರು-ಅರೇಹಳ್ಳಿ ಕಡೆಯಿಂದ ಬರುವ ಸಾರ್ವಜನಿಕರಿಗೆ ಸುಂಡೇಕೆರೆ ಸರ್ಕಲ್-ಹೆಬ್ಬನಹಳ್ಳಿ ಮುಖಾಂತರ ಸಮಾರಂಭ ಸ್ಥಳಕ್ಕೆ ತೆರಳಲು ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮದ್ ಸುಜೀತಾ ಮನವಿ ಮಾಡಿದ್ದಾರೆ.

 

Share This Article