– ಅಭಿಮಾನಿಗಳು ಈಗಲಾದ್ರೂ ದರ್ಶನ್ ಮನಸ್ಥಿತಿ ಅರ್ಥಮಾಡಿಕೊಳ್ಳಿ ಅಂತ ಮನವಿ
ಬೆಂಗಳೂರು: ಕೊಲೆಯಾಗುವುದಕ್ಕೂ ಮುನ್ನ ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿ (Renukaswamy Murder Case) ದಯನೀಯ ಸ್ಥಿತಿಯಲ್ಲಿದ್ದ ಫೋಟೋ ರಿವೀಲ್ ಆಗಿದೆ. ನನ್ನನ್ನು ಬಿಟ್ಟುಬಿಡಿ ಅಂತ ಪ್ರಾಣಭಿಕ್ಷೆ ಬೇಡುತ್ತಿರುವ ಫೋಟೋ ʻಪಬ್ಲಿಕ್ ಟಿವಿʼಗೆ (Public TV) ಲಭ್ಯವಾಗಿದೆ.
ಬಡಕಲು ದೇಹದ ರೇಣುಕಾಸ್ವಾಮಿ ಕಣ್ಣೀರಿಡುತ್ತ, ಗೋಗರೆಯುತ್ತಿರುವ ಸ್ಥಿತಿಯ ಫೋಟೋ ರಿವೀಲ್ ಆಗಿದೆ. ಈ ಬೆನ್ನಲ್ಲೇ ಮಗನ ದಯನೀಯ ಸ್ಥಿತಿಯನ್ನು ಕಂಡು, ರೇಣುಕಾಸ್ವಾಮಿ ತಂದೆ ಕಾಶೀನಾಥ್ ಶಿವನಗೌಡ್ರು ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ: ರೇಣುಕಾಸ್ವಾಮಿ ಸಾವಿಗೂ ಮುನ್ನ ದಯನೀಯ ಸ್ಥಿತಿಯ ಫೋಟೊ ರಿವೀಲ್ – ಕಣ್ಣೀರಿಡುತ್ತ ಪ್ರಾಣಭಿಕ್ಷೆಗಾಗಿ ಅಂಗಲಾಚುತ್ತಿರುವ ಸ್ವಾಮಿ
ಈ ಸಂದರ್ಭದಲ್ಲಿ ʻಪಬ್ಲಿಕ್ ಟಿವಿʼ ಜೊತೆಗೆ ಮಾತನಾಡಿರುವ ಅವರು, ಮಗನನ್ನ ಕಳೆದುಕೊಂಡಿದ್ದೇವೆ, ಅವನ ಸುದ್ದಿ ಕೇಳಿ.. ಕೇಳಿ.. ನಾವೂ ಸಹ ಜೀವಂತ ಹೆಣ ಆಗಿಬಿಟ್ಟಿದ್ದೇವೆ. ಏನು ಹೇಳ್ಬೇಕು ಗೊತ್ತಾಗುತ್ತಿಲ್ಲ. ನನ್ನ ಮಗನಿಗೆ ಒಡೆಯುವಾಗ ಅಷ್ಟು ಜನರಲ್ಲಿ ಒಬ್ಬರಿಗೂ ಮಾನವೀಯತೆ ಇರಲಿಲ್ವಾ? ನನ್ನ ಮಗ ಕಿರುಚಾಡಿ, ಕೂಗಾಡಿದ್ರೂ ಅವರಿಗೆ ಕರುಳು ಚುರುಕ್ ಅನ್ನಲಿಲ್ವಾ? ಎಷ್ಟು ರಾಕ್ಷಸಿ ಮನೋಭಾವ ಇರಬೇಕು. ಇಡೀ ಪ್ರಪಂಚದಲ್ಲೇ ಇಂತಹ ಘಟನೆ ನಡೆದಿಲ್ಲ ಅನ್ನಿಸುತ್ತೆ ಎಂದು ಕಣ್ಣೀರಿಟ್ಟಿದ್ದಾರೆ.
ನನಗಂತೂ ಕರುಳು ಕಿತ್ತುಬರುತ್ತಿದೆ, ಆ ದೇವರೇ ಅವರಿಗೆ ತಕ್ಕ ಪಾಠ ಕಲಿಸಬೇಕು. ಅವರು ಎಂತಹ ವಾತಾವರಣದಲ್ಲಿ ಬೆಳೆದಿರಬಹುದು, ಎಷ್ಟು ಕೆಟ್ಟದ್ದಾಗಿ ವರ್ತಿಸಿದ್ದಾರೆ? ಏನ್ ಹೇಳಬೇಕು ಗೊತ್ತಾಗುತ್ತಿಲ್ಲ. ಮೊದಲೇ ನನಗೆ ಆರೋಗ್ಯ ಸರಿಯಿಲ್ಲ, ಕುಟುಂಬದಲ್ಲಿ ನೆಮ್ಮದಿಯಿಲ್ಲ. ಈಗ ನನ್ನ ಸೊಸೆಗೆ ಏನು ಹೇಳಲಿ? ಎಂದು ಭಾವುಕರಾಗಿದ್ದಾರೆ. ಇದನ್ನೂ ಓದಿ: ಹಿಜಬ್ ವಿವಾದ ಎಫೆಕ್ಟ್: ಕುಂದಾಪುರ ಕಾಲೇಜು ಪ್ರಾಂಶುಪಾಲರಿಗೆ ಶಿಕ್ಷಕ ಪ್ರಶಸ್ತಿ ತಡೆಹಿಡಿದ ಸರ್ಕಾರ
ಮಾಧ್ಯಗಳು ಈ ವಿಷಯವನ್ನು ಬಿತ್ತರ ಮಾಡಿ, ಸತ್ಯ ಬಯಲಿಗೆಳೆಯುತ್ತಿವೆ, ಅದಕ್ಕೆ ಧನ್ಯವಾದ ಹೇಳ್ತೀನಿ. ಆದ್ರೆ ಆ ಪಾಪಿಗಳಿಗೆ ಯಾವ ರೀತಿ ಶಿಕ್ಷೆ ಕೊಡಬೇಕು ಅನ್ನೋದನ್ನ ಸರ್ಕಾರ, ನ್ಯಾಯಾಂಗ ತೀರ್ಮಾನಿಸಬೇಕು. ಆ ನೋವು ಅವರಿಗೂ ಗೊತ್ತಾಗಬೇಕು. ದರ್ಶನ್ ಅಭಿಮಾನಿಗಳು ಅವರ ಮನಸ್ಥಿತಿ ಕಂಡು ಈಗಲಾದ್ರೂ ಎಚ್ಚೆತ್ತುಕೊಳ್ಳಬೇಕು ಅಂತ ಮನವಿ ಮಾಡಿದ್ದಾರೆ. ಇದನ್ನೂ ಓದಿ:ಅಮೆರಿಕದ ಶಾಲೆಯಲ್ಲಿ ವಿದ್ಯಾರ್ಥಿಯಿಂದ ಗುಂಡಿನ ದಾಳಿ – ಇಬ್ಬರು ಶಿಕ್ಷಕರು ಸೇರಿ ನಾಲ್ವರು ಸಾವು