ಅಮೆರಿಕದ ಶಾಲೆಯಲ್ಲಿ ವಿದ್ಯಾರ್ಥಿಯಿಂದ ಗುಂಡಿನ ದಾಳಿ – ಇಬ್ಬರು ಶಿಕ್ಷಕರು ಸೇರಿ ನಾಲ್ವರು ಸಾವು

Public TV
1 Min Read
US shoot

ವಾಷಿಂಗ್ಟನ್‌: ಅಮೆರಿಕದ (America) ಜಾರ್ಜಿಯಾ ರಾಜ್ಯದ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ವಿದ್ಯಾರ್ಥಿಗಳು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ. ಒಂಬತ್ತು ಮಂದಿ ಗಾಯಗೊಂಡಿದ್ದಾರೆ.

ಶಂಕಿತ ಬಂದೂಕುಧಾರಿ ಬಂಧನದಲ್ಲಿದ್ದಾನೆ. ಜಾರ್ಜಿಯಾದ ವಿಂಡರ್‌ನಲ್ಲಿರುವ ಅಪಾಲಾಚಿ ಹೈಸ್ಕೂಲ್‌ನ ಕೋಲ್ಟ್ ಕ್ರೇ (14) ಎಂದು ವಿದ್ಯಾರ್ಥಿ ಗುಂಡಿನ ದಾಳಿ ನಡೆಸಿದಾತ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಪ್ರವಾಹ ತಡೆಯಲು ವಿಫಲ – ಉತ್ತರ ಕೊರಿಯಾದಲ್ಲಿ 30 ಅಧಿಕಾರಿಗಳಿಗೆ ಗಲ್ಲು ಶಿಕ್ಷೆ

america flag

ಇಬ್ಬರು ವಿದ್ಯಾರ್ಥಿಗಳು ಮತ್ತು ಇಬ್ಬರು ಶಿಕ್ಷಕರು ಮೃತಪಟ್ಟಿದ್ದಾರೆ. ಕಾನೂನು ಜಾರಿ ಸಂಸ್ಥೆಗಳು ಗುಂಡಿನ ದಾಳಿ ಮತ್ತು ಅದರ ಹಿಂದಿನ ಉದ್ದೇಶದ ಬಗ್ಗೆ ತನಿಖೆ ನಡೆಸುತ್ತಿವೆ.

ಈ ವರ್ಷ ಇಲ್ಲಿಯವರೆಗೆ US ಕನಿಷ್ಠ 385 ಸಾಮೂಹಿಕ ಗುಂಡಿನ ದಾಳಿಗಳಿಗೆ ಒಳಗಾಗಿದ್ದಾರೆ. ಅಂದರೆ ಪ್ರತಿದಿನ ಸರಾಸರಿ 1.5 ಕ್ಕೂ ಹೆಚ್ಚು ಸಾಮೂಹಿಕ ಗುಂಡಿನ ದಾಳಿಗಳು ನಡೆಯುತ್ತಿವೆ. ಇದನ್ನೂ ಓದಿ: 19ನೇ ವಯಸ್ಸಿಗೆ ಬ್ರೆಜಿಲಿಯನ್ ಬಾಡಿಬಿಲ್ಡರ್ ಹೃದಯಾಘಾತದಿಂದ ಸಾವು

Share This Article