ಮುಂಬೈ: ಮಹಾರಾಷ್ಟ್ರದ (Maharashtra) ಥಾಣೆ ಜಿಲ್ಲೆಯ ಬಿಸ್ಕೆಟ್ ಕಾರ್ಖಾನೆಯೊಂದರಲ್ಲಿ (Biscuit Factory) ಯಂತ್ರದ ಬೆಲ್ಟ್‌ಗೆ ಸಿಲುಕಿ ಮೂರು ವರ್ಷದ ಗಂಡು ಮಗು ಸಾವನ್ನಪ್ಪಿರುವುದಾಗಿ ಪೊಲೀಸರು ಬುಧವಾರ ತಿಳಿಸಿದ್ದಾರೆ.
ಥಾಣೆ ಜಿಲ್ಲೆಯ ಅಂಬರನಾಥದಲ್ಲಿ (Ambarnath) ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಆಯುಷ್ ಚೌಹಾಣ್ ಮೃತಪಟ್ಟ ಮಗು. ಇದನ್ನೂ ಓದಿ: 1,788 ಕೊಠಡಿ, 257 ಸ್ನಾನಗೃಹ, ಅಮೃತಶಿಲೆಯಿಂದ ಮಾಡಿದ ಮೆಟ್ಟಿಲು – ವಿಶ್ವದ ಅತಿದೊಡ್ಡ ಐಷಾರಾಮಿ ಅರಮನೆಯಲ್ಲಿ ಮೋದಿಗೆ ಆತಿಥ್ಯ
ಅಷ್ಟಕ್ಕೂ ಅಲ್ಲಿ ಆಗಿದ್ದೇನು?
ಮಗು ಆಯುಷ್ ಚೌಹಾಣ್ ತನ್ನ ತಾಯಿಯೊಂದಿಗೆ ಬಿಸ್ಕೆಟ್ ಫ್ಯಾಕ್ಟರಿಗೆ ಹೋಗಿದ್ದನು. ಈ ವೇಳೆ ಮಗುವನ್ನು ಒಂದು ಕಡೆ ಕೂರಿಸಿ, ಮಗುವಿನ ತಾಯಿ ತನ್ನ ಪತಿಗೆ ಉಪಾಹಾರ ಕೊಟ್ಟುಬರಲು ತೆರಳಿದ್ದರು. ಈ ವೇಳೆ ಯಂತ್ರದಲ್ಲಿದ್ದ ರಾಶಿ ರಾಶಿ ಬಿಸ್ಕೆಟ್ ನೋಡಿದೆ. ಒಂದೇ ಒಂದು ಬಿಸ್ಕೆಟ್ ತೆಗೆದುಕೊಳ್ಳಲು ಕೈಹಾಕಿದೆ. ಆದ್ರೆ ಬೆಲ್ಟ್‌ಗೆ ಕೈ ಸಿಕ್ಕಿಕೊಂಡಿದೆ. ಕೂಡಲೇ ಕಾರ್ಖಾನೆ ಸಿಬ್ಬಂದಿ ಮಗುವನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ. ಅಷ್ಟರಲ್ಲಾಗಲೇ ಮಗು ಸಾವನ್ನಪ್ಪಿತ್ತು. ಎಂದು ಅಂಬರನಾಥ್ ಪೊಲೀಸ್
(Ambarnath Police) ಠಾಣೆಯ ಅಧಿಕಾರಿ ತಿಳಿಸಿದ್ದಾರೆ.
ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇದನ್ನೂ ಓದಿ: Breaking | ರೇಣುಕಾಸ್ವಾಮಿ ಕೊಲೆ ಕೇಸ್ – ದರ್ಶನ್ & ಗ್ಯಾಂಗ್ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆ