ನವದೆಹಲಿ: IC 814: ದಿ ಕಂದಹಾರ್ ಹೈಜಾಕ್ (IC 814: The Kandahar Hijack) ವೆಬ್‌ಸೀರೀಸ್ ಸಂಬಂಧ ಕೇಂದ್ರ ಸರ್ಕಾರದ ಸಮನ್ಸ್ ಬಿಸಿ ನೆಟ್‌ಫ್ಲಿಕ್ಸ್ (Netflix) ಸಂಸ್ಥೆಗೆ ತಾಕಿದೆ. ಅಪಹರಣಕಾರರ ನಿಜವಾದ ಹೆಸರನ್ನು ನಮೂದಿಸಲು ನೆಟ್‌ಫ್ಲಿಕ್ಸ್ ಒಪ್ಪಿಕೊಂಡಿದೆ.
ಇಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಧಿಕಾರಿಗಳ ಮುಂದೆ ಹಾಜರಾದ ನೆಟ್‌ಫ್ಲಿಕ್ಸ್ ಕಂಟೆಂಟ್ ವಿಭಾಗದ ಮುಖ್ಯಸ್ಥೆ ಮೋನಿಗಾ ಶರ‍್ಗಿಲ್ (Monika Shergill) ವಿಚಾರಣೆ ಎದುರಿಸಿದ್ದರು. ಹೈಜಾಕರ್‌ಗಳ ಹೆಸರುಗಳು ಸ್ಪಷ್ಟವಾಗಿ ಕಾಣಿಸುವ ರೀತಿಯಲ್ಲಿ ಸ್ಕ್ರೀನ್ ಮೇಲೆ ಹಾಕಿಲ್ಲ ಯಾಕೆ? ಅಪಹರಣಕಾರರಿಗೆ ಮಾನವೀಯತೆ ಇದೆ ಎಂಬರ್ಥದಲ್ಲಿ ಏಕೆ ಚಿತ್ರಿಸಿದ್ದೀರಿ? ಸಂಧಾನಕ್ಕೆ ಮುಂದಾದವರನ್ನು ದುರ್ಬಲರಂತೆ ಏಕೆ ಚಿತ್ರಿಸಿದ್ದೀರಿ? ಸರಣಿಯನ್ನು ಪ್ರಸಾರ ಮಾಡುವ ಮೊದಲು ಸತ್ಯ ಪರಿಶೀಲನೆಯನ್ನು ಮಾಡಲಿಲ್ಲ ಯಾಕೆ ಎಂದು ಪ್ರಶ್ನಿಸಿ ಎಂದು ಕ್ಲಾಸ್ ತೆಗೆದುಕೊಂಡಿದೆ.
- Advertisement -
- Advertisement -
ಈ ಹಂತದಲ್ಲಿ ಕಂಟೆಂಟ್ ವಿಚಾರದಲ್ಲಿ ಮರುಸಮೀಕ್ಷೆ ಮಾಡುತ್ತೇವೆ ಎಂಬ ಭರವಸೆಯನ್ನು ಮೋನಿಕಾ ಶರ‍್ಗಿಲ್ ನೀಡಿದ್ದಾರೆ. ಭವಿಷ್ಯದಲ್ಲಿ ದೇಶದ ಪ್ರಜೆಗಳ ಭಾವನೆಗಳಿಗೆ ಧಕ್ಕೆಯಾಗದ ರೀತಿಯಲ್ಲಿ ಕಂಟೆಂಟ್ ನೀಡುತ್ತೇವೆ. ಮಕ್ಕಳ ವಿಚಾರದಲ್ಲೂ ಜಾಗ್ರತೆ ವಹಿಸುತ್ತೇವೆ ಎಂಬ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಬೆಂಗಳೂರು ಡೇಸ್ ಹೀರೋ ನಿವಿನ್ ಪೌಲಿ ವಿರುದ್ಧ ಲೈಂಗಿಕ ದೌರ್ಜನ್ಯ ದೂರು ದಾಖಲು
- Advertisement -
ಸೂಕ್ಷ್ಮ ಮತ್ತು ಆಕ್ಷೇಪಾರ್ಹ ಭಾಗಗಳನ್ನು ಪರಿಶೀಲಿಸುವುದಾಗಿ ಮತ್ತು ಬಹುಶಃ ಅವುಗಳನ್ನು ತೆಗೆದುಹಾಕುವುದಾಗಿ ನೆಟ್‌ಫ್ಲಿಕ್ಸ್ ಸಚಿವಾಲಯಕ್ಕೆ ಭರವಸೆ ನೀಡಿದೆ ಎಂದು ಮೂಲಗಳು ತಿಳಿಸಿವೆ.
- Advertisement -
1999ರಲ್ಲಿ ತಾಲಿಬಾನ್ ಉಗ್ರರು ನಡೆಸಿದ್ದ ಇಂಡಿಯನ್ ಏರ್‌ಲೈನ್ಸ್ ವಿಮಾನದ ಅಪಹರಣದ ಕಥೆಯನ್ನು ಆಧರಿಸಿ ನಿರ್ಮಾಣವಾಗಿದ್ದ ಸೀರಿಸ್ ಆ.29 ರಂದು ನೆಟ್‌ಫ್ಲಿಕ್ಸ್‌ನಲ್ಲಿ ತೆರೆಕಂಡಿತ್ತು. ದಿ ಕಂದಹಾರ್ ಹೈಜಾಕ್’ ಐಸಿ 814 (The Kandahar Hijack IC 814) ಸರಣಿಯಲ್ಲಿ ಅಪಹರಣಕಾರರ ಹೆಸರನ್ನು ಹಿಂದೂ ಹೆಸರುಗಳಿಗೆ ಬದಲಾಯಿಸಿದ ಆರೋಪದ ಹಿನ್ನೆಲೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು.
ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಹರ್ಕತ್-ಉಲ್-ಮುಜಾಹಿದ್ದೀನ್‌ನಿಂದ 1999ರಲ್ಲಿ ನಡೆದ ಏರ್ ಇಂಡಿಯಾ ವಿಮಾನದ ಅಪಹರಣದಲ್ಲಿ ಮುಸ್ಲಿಂ ಉಗ್ರರ ಹೆಸರನ್ನು ಬದಲಿಸಿ ಹಿಂದೂ ಹೆಸರನ್ನು ಬಳಸಿದ್ದಕ್ಕೆ ಟೀಕೆ ವ್ಯಕ್ತವಾಗಿತ್ತು. ಅಷ್ಟೇ ಅಲ್ಲದೇ ಕೃತ್ಯದಲ್ಲಿ ಪಾಕಿಸ್ತಾನದ ಪಾತ್ರ ಇಲ್ಲ ಎಂಬಂತೆ ತೋರಿಸಲಾಗಿತ್ತು. ಇದನ್ನೂ ಓದಿ: ಬಳ್ಳಾರಿ ಜೈಲಲ್ಲಿ ಟಿವಿಗಾಗಿ ದರ್ಶನ್ ಮೊರೆ
ವಿಮಾನ ಅಪಹರಣದಲ್ಲಿ ಇಬ್ರಾಹಿಂ ಅಖ್ತರ್, ಶಾಹಿದ್ ಅಖ್ತರ್‌ಸೈದ್, ಸನ್ನಿ ಸಹ್ಮದ್ ಖಾಜಿ, ಜಹೂರ್ ಮಿಸ್ತ್ರೀ ಮತ್ತು ಶಾಖೀರ್ ಭಾಗಿಯಾಗಿದ್ದರು. ಈ ಉಗ್ರರ ಹೆಸರನ್ನು ಬದಲಿಸಿ ಡಾಕ್ಟರ್, ಬರ್ಗರ್, ಭೋಲಾ ಮತ್ತು ಶಂಕರ್ ಎಂದು ಬದಲಾಯಿಸಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಟೀಕೆ ವ್ಯಕ್ತವಾಗಿತ್ತು.