ವಾಷಿಂಗ್ಟನ್: ಅಮೆರಿಕದ (America) ನ್ಯೂಯಾರ್ಕ್ (New York) ನ್ಯೂಜೆರ್ಸಿ (New Jersey) ನಗರದಲ್ಲಿರುವ ಶ್ರೀ ಆದಿಚುಂಚನಗಿರಿ (Adichunchanagiri) ಮಹಾಸಂಸ್ಥಾನ ಮಠದ ಶಾಖೆಯಲ್ಲಿ ಸೋಮವಾರ ಕಾಲಭೈರವೇಶ್ವರ ಸ್ವಾಮಿಗೆ ಅಭಿಷೇಕ ಮಾಡುವ ಮೂಲಕ ಭಕ್ತಿ ಭಾವದಿಂದ ಶ್ರಾವಣ ಅಮಾವಾಸ್ಯೆ ಆಚರಿಸಲಾಯಿತು.
ಹಲವಾರು ಭಕ್ತರು ಕುಟುಂಬ ಸಮೇತ ಪೂಜೆಯಲ್ಲಿ ಭಾಗವಹಿಸಿ ಧನ್ಯರಾದರು. ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಡಾ.ನಿರ್ಮಲಾನಂದನಾಥ ಸ್ವಾಮೀಜಿಯವರ (Nirmalanandanatha Swamiji) ದಿವ್ಯ ಸಾನಿಧ್ಯದಲ್ಲಿ ಪೂಜಾ ಕಾರ್ಯಕ್ರಮ ನೆರವೇರಿತು. ಇದನ್ನೂ ಓದಿ: Paralympics | ಮನೀಶಾ ಕಂಚಿನ ಮಿಂಚು – ಬ್ಯಾಡ್ಮಿಂಟನ್‌ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ!
ಇದೇ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಕಾರ್ಯದರ್ಶಿಗಳಾದ ಪೂಜ್ಯ ಪ್ರಸನ್ನನಾಥ ಸ್ವಾಮೀಜಿಯವರು, ಮೈಸೂರು ಶಾಖೆಯ ಪೂಜ್ಯ ಸೋಮೇಶ್ವರನಾಥ ಸ್ವಾಮಿಜಿಯವರ ಉಪಸ್ಥಿತಿಯಲ್ಲಿ ಅಮಾವಾಸ್ಯೆ ಪೂಜೆಯನ್ನು ನೆರವೇರಿಸಲಾಯಿತು. ಇದನ್ನೂ ಓದಿ: ಬೈಕ್‌ನಲ್ಲಿ ಬಂದು ಪುಣೆ ಮಾಜಿ ಕಾರ್ಪೋರೇಟರ್ ಕೊಂದ್ರು – 10 ಆರೋಪಿಗಳ ಮೇಲೆ ಎಫ್‌ಐಆರ್