ರೋಟಿ-ಸಬ್ಜಿಯಿಂದ ತೃಪ್ತಿಯಾಗ್ತಿಲ್ಲ, ಮೊಟ್ಟೆ ಊಟ ಕೊಡಿ; ಕೋಲ್ಕತ್ತಾ ವೈದ್ಯೆ ರೇಪ್‌ ಆರೋಪಿ ಡಿಮ್ಯಾಂಡ್‌

Public TV
2 Min Read
Sanjay Roy

ಕೋಲ್ಕತ್ತಾ: ಸದ್ಯ ಜೈಲು ವಾಸಿಯಾಗಿರುವ ಕೋಲ್ಕತ್ತಾ ಅತ್ಯಾಚಾರ ಪ್ರಕರಣದ (Kolkata Horror) ರೇಪ್‌ ಆರೋಪಿ ಜೈಲಿನಲ್ಲಿ ನೀಡುತ್ತಿರುವ ಊಟದ ಬಗ್ಗೆ ಅಸಮಾಧಾನ ಹೊರಹಾಕಿದ್ದಾನೆ. ಅಲ್ಲದೇ ರೋಟಿ-ಸಬ್ಜಿಯಿಂದ ನನಗೆ ತೃಪ್ತಿಯಾಗ್ತಿಲ್ಲ. ಮೊಟ್ಟೆ ಚೌಮೆನ್‌ (ಮೊಟ್ಟೆ ಮಿಶ್ರಿತ ನೂಡಲ್ಸ್‌) (Egg Chowmein) ತಿನ್ನಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾನೆ.

ಹೌದು. ಪ್ರೆಸಿಡೆನ್ಸಿ ಜೈಲಿನಲ್ಲಿರುವ ಅತ್ಯಾಚಾರ ಆರೋಪಿ ಸಂಜಯ್‌ ರಾಯ್‌ಗೆ (Sanjay Roy) ಸದ್ಯ ಸಾಮಾನ್ಯ ಕೈದಿಗಳಂತೆ ಜೈಲಿನಲ್ಲಿ ತಯಾರಿಸಿದ ಆಹಾರವನ್ನೇ ನೀಡಲಾಗುತ್ತಿದೆ. ಶನಿವಾರವೂ ಸಹ ಎಂದಿನಂತೆ ರೋಟಿ ಮತ್ತು ಸಬ್ಜಿಯನ್ನು ನೀಡಿದಾಗ ರಾಯ್‌ ಅಸಮಾಧಾನಗೊಂಡಿದ್ದಾನೆ. ಇದರಿಂದ ಜೈಲು ಸಿಬ್ಬಂದಿಯೇ ಆತನಿಗೆ ಬಿಸಿಮುಟ್ಟಿಸಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: Kolkata Horror | ಕಿರಿಯ ವೈದ್ಯರಿಗೆ ನಾನು ಎಂದಿಗೂ ಬೆದರಿಕೆ ಹಾಕಿಲ್ಲ: ಮಮತಾ ಬ್ಯಾನರ್ಜಿ

Hang Him Or Do. Mother In Law Of Kolkata Rape Murder Case Accused

ಆಗಾಗ್ಗೆ ಗೊಣಗುತ್ತಿದ್ದ:
ಈ ಮೊದಲು ಸಂಜಯ್‌ ರಾಜ್‌ನನ್ನು ಸಿಬಿಐ ಕಸ್ಟಡಿಯಿಂದ ಪ್ರೆಸಿಡೆನ್ಸಿ ಕರೆಕ್ಷನಲ್ ಹೋಮ್‌ಗೆ (ಜೈಲು) ಕರೆ ತಂದಾಗ ಮಲಗಲು ಸ್ವಲ್ಪ ಜಾಗ ಕೊಡುವಂತೆ ಕೇಳಿದ್ದ. ನಂತರ ಆಗಾಗ್ಗೆ ಗೊಣಗುವುದನ್ನು ಶುರು ಮಾಡಿದ್ದ. ಕೆಲ ದಿನಗಳ ನಂತರ ರಾಯ್‌ ಸಹಜ ಸ್ಥಿತಿಗೆ ಮರಳಿದ ಎಂದು ತಿಳಿದುಬಂದಿದೆ. ಇದನ್ನೂ ಓದಿ: ವೇಶ್ಯೆ ಗೃಹಕ್ಕೆ ಹೋಗಿದ್ದ, ಗರ್ಲ್‌ಫ್ರೆಂಡ್‌ಗೆ ಬೆತ್ತಲೆ ಫೋಟೋ ಕಳಿಸುವಂತೆ ಕೇಳಿದ್ದ – ರೇಪ್‌ ಆರೋಪಿಯ ಕರಾಳ ಮುಖ ಬಯಲು

kolkata doctor rape and murder case 1

ಸದ್ಯ ಆರ್‌.ಜಿ ಕರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಟ್ರೈನಿ ವೈದ್ಯೆ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಕೇಂದ್ರೀಯ ತನಿಖಾ ದಳ (CBI) ತನಿಖೆ ನಡೆಸುತ್ತಿದೆ. ಕಾಲೇಜಿನ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಅವರನ್ನ ಸಿಬಿಐ ತಂಡ ಮತ್ತೆ ವಿಚಾರಣೆಗೊಳಪಡಿಸಿದೆ. ಬಳಿಕ ಕೋರ್ಟ್‌ಗೆ ಒಪ್ಪಿಸಿ 14 ದಿನ ತನ್ನ ಕಸ್ಟಡಿಗೆ ತೆಗೆದುಕೊಂಡಿದೆ. ಈಗಾಗಲೇ 140 ಗಂಟೆಗಳಿಗೂ ಹೆಚ್ಚು ಕಾಲ ಅವರನ್ನ ವಿಚಾರಣೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Kolkata Protest

ಕೋಲ್ಕತ್ತಾ ಟ್ರೈನಿ ವೈದ್ಯೆ ರೇಪ್‌ & ಮರ್ಡರ್‌ ಪ್ರಕರಣವನ್ನು ಕಳೆದ ಆಗಸ್ಟ್‌ 13ರಂದು ಹೈಕೋರ್ಟ್ ಕೋಲ್ಕತ್ತಾ ಪೊಲೀಸರಿಂದ ಸಿಬಿಐಗೆ ವರ್ಗಾಯಿಸಲು ಆದೇಶಿಸಿತು. ಆಗಸ್ಟ್‌ 14 ರಿಂದ ಸಿಬಿಐ ತನಿಖೆ ಆರಂಭಿಸಿದೆ. ಇದನ್ನೂ ಓದಿ: Kolkata Horror | ಕ್ರಿಮಿನಲ್‌ ಮನಸ್ಥಿತಿ ಬರೋದು ಏಕೆ? ಮನೋವಿಜ್ಞಾನಿಗಳು ಏನ್‌ ಹೇಳ್ತಾರೆ?

Share This Article