ಬಹುಭಾಷಾ ನಟಿ ದೀಪಿಕಾ ಪಡುಕೋಣೆ (Deepika Padukone) ಹಾಗೂ ರಣವೀರ್ ಸಿಂಗ್ (Ranveer Singh) ಇದೇ ವರ್ಷ ಫೆಬ್ರವರಿಯಲ್ಲಿ ಮೊದಲ ಪ್ರೆಗ್ನೆನ್ಸಿ ಬಗ್ಗೆ ಜಗಜ್ಜಾಹೀರ್ ಮಾಡುವ ಮೂಲಕ ಖುಷಿಯನ್ನ ಹಂಚಿಕೊಂಡಿದ್ದರು ಈ ತಾರಾ ದಂಪತಿ. ಕೊನೆಯದಾಗಿ ದೀಪಿಕಾ ಕಲ್ಕಿ 2898 ಎಡಿ ಸಿನಿಮಾದಲ್ಲಿ ನಟಿಸಿ, ಸಿನಿಮಾ ರಂಗದಿಂದ ಬ್ರೇಕ್ ತೆಗೆದುಕೊಂಡಿದ್ದರು. ಇದೀಗ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಮೊದಲ ಮಗುವಿನ ನಿರೀಕ್ಷಯಲ್ಲಿದ್ದಾರೆ.
ಮೊದಲ ಮಗುವಿನ ನಿರೀಕ್ಷಯಲ್ಲಿರುವ ದೀಪಿಕಾ ಹೆರಿಗೆ ಬಗ್ಗೆ ಗಾಳಿಸುದ್ದಿ ಹರಿದಾಡುತ್ತಿದೆ. ಹೌದು, ದೀಪಿಕಾ ಡಿಲೆವರಿಗಾಗಿ ಲಂಡನ್‌ಗೆ (London) ಹೋಗ್ತಾರೆ ಅಂತಾ ಸುದ್ದಿ ಹರಿದಾಡ್ತಿತ್ತು. ಆದ್ರೆ, ಈ ಸುದ್ದಿ ಸುಳ್ಳು, ಸೌತ್ ಬಾಂಬೆಯಲ್ಲೇ ಹೆರಿಗೆ ಮಾಡಿಕೊಳ್ಳುತ್ತಿದ್ದಾರಂತೆ ದೀಪಿಕಾ. ಜೊತೆಗೆ ತಾಯಿತನದ ಕ್ಷಣವನ್ನ ಅನುಭವಿಸಲು ಈಗಿನಿಂದಲೇ ಕಾತುರದಿಂದ ಕಾಯ್ತಿದ್ದು, ಹೆರಿಗೆಗಾಗಿ ಲಂಡನ್‌ಗೆ ಹೋಗ್ತಿರುವ ಸುದ್ದಿ ಸುಳ್ಳುಂತೆ. ಇದೇ ಸೆಪ್ಟಂಬರ್‌ನಲ್ಲಿ ಮೊದಲ ಮಗುವಿನ ನಿರೀಕ್ಷಯಲ್ಲಿದೆ ರಣ್ವೀರ್ ಹಾಗೂ ದೀಪಿಕಾ ಜೋಡಿ.
ದೀಪಿಕಾ ಪಡುಕೋಣೆ 2025ರಲ್ಲಿ ಸಿನಿಮಾಗಳಲ್ಲಿ ತೊಡಗಿಸಿಕೊಳ್ಳಲಿದ್ದಾರಂತೆ. ಸದ್ಯ ದೀಪಿಕಾಗಾಗಿ ಕಲ್ಕಿ 2898 ಎಡಿ ಸಿನಿಮಾದ ಸೀಕ್ವೆಲ್ ಪ್ರಾಜೆಕ್ಟ್ ವೇಟ್ ಮಾಡ್ತಿದೆ. ಮೆಟರ್ನಿಟಿ ರಜೆ ಮುಗಿತಿದ್ದಂತೆ ಪ್ರಭಾಸ್, ಅಮಿತಾಬ್ ಬಚ್ಚನ್ ನಟನೆಯ ಸಿನಿಮಾದಲ್ಲಿ ದೀಪಿಕಾ ತೊಡಗಿಸಿಕೊಳ್ಳಲಿದ್ದಾರಂತೆ.