ಪತಂಜಲಿ ಸಸ್ಯಾಹಾರಿ ಹರ್ಬಲ್ ಟೂತ್ ಪೌಡರ್‌ನಲ್ಲಿ ಮಾಂಸಾಹಾರಿ ಅಂಶ – ದೆಹಲಿ ಹೈಕೋರ್ಟ್‌ಗೆ ಅರ್ಜಿ

Public TV
2 Min Read
Patanjali Baba Ramdev

ನವದೆಹಲಿ: ಸಸ್ಯಾಹಾರಿ ಎಂದು ಮಾರಾಟವಾಗುವ ಪತಂಜಲಿ (Patanjali) ಬ್ರ‍್ಯಾಂಡ್‌ನ ಹರ್ಬಲ್ ಟೂತ್ ಪೌಡರ್ ‘ದಿವ್ಯ ಮಂಜನ್’ನಲ್ಲಿ ಮಾಂಸಾಹಾರಿ ಅಂಶಗಳಿವೆ ಎಂದು ಆರೋಪಿಸಿ ದೆಹಲಿ ಹೈಕೋರ್ಟ್‌ಗೆ (Delhi High Courtt) ಅರ್ಜಿ ಸಲ್ಲಿಸಲಾಗಿದೆ. ಪ್ರಕರಣದ ವಿಚಾರಣೆ ನಡೆಸಿರುವ ಹೈಕೋರ್ಟ್ ಪತಂಜಲಿ ಕಂಪನಿ ಮತ್ತು ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

ವಕೀಲ ಯತಿನ್ ಶರ್ಮಾ ಅವರು ಅರ್ಜಿ ಸಲ್ಲಿಸಿದ್ದು, ಪತಂಜಲಿಯ ದಿವ್ಯ ಮಂಜನ್ (Divya Manjan) ಪ್ಯಾಕೇಜಿಂಗ್ ಸಸ್ಯಾಹಾರಿ ಉತ್ಪನ್ನಗಳನ್ನು ಸೂಚಿಸುವ ಹಸಿರು ಚುಕ್ಕೆಯನ್ನು ಹೊಂದಿದೆ. ಹೀಗಾಗಿ ನಾನು ದೀರ್ಘಕಾಲದಿಂದ ಬಳಸುತ್ತಿದ್ದೇನೆ. ಆದರೆ ಈ ಹಲ್ಲಿನ ಪುಡಿಯಲ್ಲಿ ಸೆಪಿಯಾ ಅಫಿಷಿನಾಲಿಸ್ ಅಥವಾ ಮೀನಿನ ಸಾರ ಇದೆ ಎಂದು ಸಂಶೋಧನೆಯೊಂದು ಹೇಳಿದೆ. ಇದನ್ನೂ ಓದಿ: BMTC ನಿರ್ವಾಹಕ ಹುದ್ದೆಗೆ ಪರೀಕ್ಷೆ, ಕಟ್ಟುನಿಟ್ಟಿನ ನಿಗಾವಹಿಸುವಂತೆ ಕ್ರಮ – ಕೆಇಎ

‘ದಿವ್ಯ ಮಂಜನ್’ನಲ್ಲಿ ಸಮುದ್ರಫೆನ್ ಪ್ರಾಣಿ ಆಧಾರಿತ ಉತ್ಪನ್ನವಾಗಿದೆ ಎಂದು ರಾಮ್‌ದೇವ್ ಸ್ವತಃ ಯೂಟ್ಯೂಬ್ ವೀಡಿಯೊದಲ್ಲಿ ಒಪ್ಪಿಕೊಂಡಿದ್ದಾರೆ. ಇದು ಮಿಸ್ ಬ್ರ‍್ಯಾಂಡಿಂಗ್ ಮತ್ತು ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ಕಾಯ್ದೆಯ ಉಲ್ಲಂಘನೆಯಾಗಿದೆ. ಗ್ರಾಹಕರ ಧಾರ್ಮಿಕ ನಂಬಿಕೆಗಳು ಹಾನಿಯಾಗಿದೆ. ಈ ಸಂಶೋಧನೆಯು ತನಗೆ ಮತ್ತು ಕುಟುಂಬಕ್ಕೆ ವಿಶೇಷವಾಗಿ ದುಃಖಕರವಾಗಿದೆ ಎಂದು ಶರ್ಮಾ ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳಲ್ಲಿ ತ್ವರಿತ ತೀರ್ಪಿನ ಅಗತ್ಯವಿದೆ: ಮೋದಿ

Delhi Highcourt

ದೆಹಲಿ ಪೊಲೀಸ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ, ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಷನ್ ಮತ್ತು ಆಯುಷ್ ಸಚಿವಾಲಯ ಸೇರಿದಂತೆ ವಿವಿಧ ಸರ್ಕಾರಿ ಏಜೆನ್ಸಿಗಳಿಗೆ ದೂರು ಸಲ್ಲಿಸಿದ್ದರೂ ಸಹ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದನ್ನೂ ಓದಿ: ಶಂಭು ಗಡಿಯಲ್ಲಿ ರೈತರ ಪ್ರತಿಭಟನೆಗೆ 200ನೇ ದಿನ – ಅನ್ನದಾತರ ಹೋರಾಟದಲ್ಲಿ ಭಾಗಿಯಾಗಿ ಬೆಂಬಲ ಸೂಚಿಸಿದ ವಿನೇಶ್ ಫೋಗಟ್

ಉತ್ಪನ್ನದ ತಪ್ಪು ಲೇಬಲ್ ಅನ್ನು ಪರಿಹರಿಸಲು ಮತ್ತು ಪ್ರತಿವಾದಿಗಳನ್ನು ಹೊಣೆಗಾರರನ್ನಾಗಿ ಮಾಡಲು ನ್ಯಾಯಾಂಗದ ಮಧ್ಯಸ್ಥಿಕೆಯನ್ನು ಮನವಿ ಬಯಸುತ್ತಿದ್ದು ಜೊತೆಗೆ ಮಾಂಸಾಹಾರಿ ಉತ್ಪನ್ನವನ್ನು ಸೇವಿಸುವುದರಿಂದ ಉಂಟಾಗುವ ತೊಂದರೆಗೆ ಪರಿಹಾರವನ್ನು ಸಹ ಅರ್ಜಿದಾರರು ಕೋರಿದ್ದಾರೆ. ಇದನ್ನೂ ಓದಿ: ಮದುವೆ ಮಾಡಿಕೊಳ್ಳುವುದಾಗಿ ಹೇಳಿ ಪುರುಷರಿಗೆ ವಂಚಿಸುತ್ತಿದ್ದ ಮಹಿಳೆ ಅರೆಸ್ಟ್

ಅರ್ಜಿಯನ್ನು ಕೈಗೆತ್ತಿಕೊಂಡ ನಂತರ ದೆಹಲಿ ಹೈಕೋರ್ಟ್ ಪತಂಜಲಿ ಆಯುರ್ವೇದ, ಬಾಬಾ ರಾಮ್‌ದೇವ್, ಕೇಂದ್ರ ಸರ್ಕಾರ ಮತ್ತು ಉತ್ಪನ್ನವನ್ನು ತಯಾರಿಸುವ ಪತಂಜಲಿಯ ದಿವ್ಯ ಫಾರ್ಮಸಿಗೆ ನೋಟಿಸ್ ಜಾರಿ ಮಾಡಿದೆ. ಮುಂದಿನ ವಿಚಾರಣೆಯನ್ನು ನವೆಂಬರ್ 28ರಂದು ನಿಗದಿಪಡಿಸಲಾಗಿದೆ. ಇದನ್ನೂ ಓದಿ: ಬೆಂಗ್ಳೂರು ಏರ್‌ಪೋರ್ಟ್‌ನಲ್ಲಿ ಶಂಕಿತ ಉಗ್ರ ಅರೆಸ್ಟ್‌

ಪತಂಜಲಿ ಮತ್ತು ಅದರ ಸಹ-ಸಂಸ್ಥಾಪಕರಾದ ಬಾಬಾ ರಾಮ್‌ದೇವ್ ಮತ್ತು ಆಚಾರ್ಯ ಬಾಲಕೃಷ್ಣ ಅವರನ್ನು ಈ ಹಿಂದೆ ಮೋಸಗೊಳಿಸುವ ಜಾಹೀರಾತು ಅಭ್ಯಾಸಗಳಲ್ಲಿ ತೊಡಗಿದ್ದಕ್ಕಾಗಿ ಸುಪ್ರೀಂ ಕೋರ್ಟ್‌ನಿಂದ ತರಾಟೆಗೆ ತೆಗೆದುಕೊಳ್ಳಲಾಗಿತ್ತು. ಕೋರ್ಟ್ ಎಚ್ಚರಿಕೆ ಬಳಿಕ ಬಾಬಾ ರಾಮ್‌ದೇವ್ ಮತ್ತು ಆಚಾರ್ಯ ಬಾಲಕೃಷ್ಣ ಬಹಿರಂಗ ಕ್ಷಮೆಯಾಚಿಸಿದ್ದರು. ಇದನ್ನೂ ಓದಿ: ಸರ್ಕಾರಗಳು ತರ್ಲೆ ಮಾಡೋದು ಕಡಿಮೆ ಮಾಡಿದ್ರೆ ನಮ್ಮ ಶಿಕ್ಷಣ ವ್ಯವಸ್ಥೆ ಇನ್ನೂ ಚೆನ್ನಾಗಿರುತ್ತೆ: ರಂಗನಾಥ್‌

Share This Article