ವಾಧ್ವಾನ್ ಪೋರ್ಟ್ ಪ್ರಾಜೆಕ್ಟ್ ಉದ್ಘಾಟನೆ, ಗ್ಲೋಬಲ್ ಫಿನ್‌ಟೆಕ್ ಫೆಸ್ಟ್‌ನಲ್ಲಿ ಭಾಗಿಯಾದ ಪ್ರಧಾನಿ ಮೋದಿ

Public TV
2 Min Read
Narendra Modi in Fintech Fest 2024

ಮುಂಬೈ: ಫಿನ್‌ಟೆಕ್ (FinTech) ಸೆಕ್ಟರ್ ಭಾರತದ ಆರ್ಥಿಕ ಮಾರುಕಟ್ಟೆಯಲ್ಲಿ ಹೊಸತನ್ನು ಸೃಷ್ಟಿಸಿದೆ. ಅದರ ಕ್ರಾಂತಿ ದೇಶದೆಲ್ಲೆಡೆ ಹಬ್ಬಿದೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು ಮುಂಬೈನಲ್ಲಿ (Mumbai) ನಡೆದ 2024ರ ಜಾಗತಿಕ ಫಿನ್‌ಟೇಕ್ ಫೆಸ್ಟಿವಲ್‌ನಲ್ಲಿ (Global FinTech Festival 2024) ಹೇಳಿದರು.

ಸಮಾರಂಭದಲ್ಲಿ ಮಾತನಾಡಿದ ಅವರು, ಒಂದು ಕಾಲದಲ್ಲಿ ಜನರು ಸಾಂಸ್ಕೃತಿಕ ವೈವಿಧ್ಯತೆಯದಿಂದಲೇ ಬೆರಗಾಗುತ್ತಿದ್ದರು. ಆದರೆ ಇದೀಗ ಫಿನ್‌ಟೆಕ್ ಭಾರತಕ್ಕೆ ಬಂದ ಮೇಲೆ ಜನರು ಇನ್ನಷ್ಟು ಅಚ್ಚರಿಗೊಂಡಿದ್ದಾರೆ ಎಂದರು.ಇದನ್ನೂ ಓದಿ: Paris Paralympics 2024 | ಭಾರತಕ್ಕೆ ಒಂದೇ ದಿನ 4 ಪದಕ – ಬೆಳ್ಳಿಗೆ ಮನೀಷ್ ನರ್ವಾಲ್‌ ಶೂಟ್‌

ದೇಶದಲ್ಲಿ ಫಿನ್‌ಟೆಕ್ ಶಾಖೆಗಳಿಲ್ಲ, ಹಳ್ಳಿಗಳಲ್ಲಿ ಬ್ಯಾಂಕ್‌ಗಳಿಲ್ಲ, ಇಂಟರ್ನೆಟ್ ಸೇವೆ ಕೂಡ ಸರಿಯಾಗಿ ಲಭ್ಯವಿಲ್ಲ. ಹೀಗಿರುವಾಗ ಫಿನ್‌ಟೆಕ್ ಕ್ರಾಂತಿ ದೇಶದೆಲ್ಲೆಡೆ ಹಬ್ಬಿದೆ ಎಂದರೆ ಹೇಗೆಂದು ಪಾರ್ಲಿಮೆಂಟ್‌ನಲ್ಲಿ ಪ್ರಶ್ನಿಸುತ್ತಿದ್ದರು. ಆದರೆ ಕೇವಲ ಒಂದು ದಶಕದಲ್ಲಿಯೇ ಬ್ರಾಡ್‌ಬ್ಯಾಂಡ್ (Broadband) ಬಳಕೆದಾರರು 6 ಕೋಟಿಯಿಂದ 94 ಕೋಟಿಗೆ ಹೆಚ್ಚಾಗಿದ್ದಾರೆ ಎಂದು ಪ್ರಧಾನಿ ತಿಳಿಸಿದರು.

ಕೋವಿಡ್‌ನಂತಹ ದೊಡ್ಡ ಸಾಂಕ್ರಾಮಿಕ ರೋಗ ಬಂದಾಗಲೂ ಭಾರತದಲ್ಲಿ ಬ್ಯಾಂಕಿಂಗ್ ಸೇವೆಗಳಲ್ಲಿ ಯಾವುದೇ ಸಮಸ್ಯೆಯಾಗಿರಲಿಲ್ಲ. ಜೊತೆಗೆ ಜನ್-ಧನ್ ಯೋಜನೆ ತನ್ನ 10 ವರ್ಷಗಳನ್ನು ಪೂರೈಸಿದ್ದು, ಈ ಯೋಜನೆಯಡಿಯಲ್ಲಿ ಮಹಿಳೆಯರಿಗಾಗಿ 29 ಕೋಟಿ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ. ಇದು ಮಹಿಳಾ ಸಬಲೀಕರಣದ ಉತ್ತಮ ಮಾಧ್ಯಮವಾಗಿ ಹೊರಹೊಮ್ಮಿದೆ ಎಂದು ಹೇಳಿದರು.

ಸೈಬರ್ ವಂಚನೆಗಳನ್ನು ತಡೆಯಲು, ಡಿಜಿಟಲ್ ಸಾಕ್ಷರತೆಯನ್ನು ಹೆಚ್ಚಿಸಲು ನಾವು ಹೆಚ್ಚಿನ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಆ ಕಾರಣದಿಂದ ಸರ್ಕಾರವು ಏಂಜೆಲ್ ತೆರಿಗೆಯನ್ನು ರದ್ದುಗೊಳಿಸಿದೆ ಮತ್ತು ಫಿನ್‌ಟೆಕ್ ವಲಯಕ್ಕೆ ಸಹಾಯ ಮಾಡಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದರು.

ಸರ್ಕಾರದ ನೂರಾರು ಯೋಜನೆಗಳ ಲಾಭವನ್ನು ಫಲಾನುಭವಿಗಳು ನೇರವಾಗಿ ಪಡೆದುಕೊಳ್ಳುತ್ತಿದ್ದಾರೆ. ಏಕೆಂದರೆ ಭಾರತವು ಡಿಜಿಟಲ್ ತಂತ್ರಜ್ಞಾನದ ಮೂಲಕ ಪಾರದರ್ಶಕತೆಯನ್ನು ತಂದಿದೆ. ಫಿನ್‌ಟೆಕ್‌ನಿಂದಾಗಿ ಭಾರತದಲ್ಲಿ ಆಗಿರುವ ಪರಿವರ್ತನೆಯು ಕೇವಲ ತಂತ್ರಜ್ಞಾನಕ್ಕೆ ಸೀಮಿತವಾಗಿಲ್ಲ, ಇದು ಹಳ್ಳಿಗಳು ಮತ್ತು ನಗರಗಳ ನಡುವಿನ ಅಂತರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ತಿಳಿಸಿದರು.ಇದನ್ನೂ ಓದಿ: ಛತ್ರಪತಿ ಶಿವಾಜಿ ಪ್ರತಿಮೆ ಕುಸಿತ – ಕ್ಷಮೆಯಾಚಿಸಿದ ಪ್ರಧಾನಿ ಮೋದಿ

ಕಳೆದ 10 ವರ್ಷಗಳಲ್ಲಿ 31 ಶತಕೋಟಿ ಡಾಲರ್‌ಗಿಂತ ಹೆಚ್ಚು ಹೂಡಿಕೆಯಾಗಿದೆ. ಫಿನ್‌ಟೆಕ್ ಸ್ಟಾರ್ಟ್ಅಪ್‌ಗಳಲ್ಲಿ ಶೇ. 500ರಷ್ಟು ಹೆಚ್ಚಳವಾಗಿದೆ. ಅಗ್ಗದ ಮೊಬೈಲ್‌ಗಳು, ಡೇಟಾ ಮತ್ತು ಶೂನ್ಯ ಬ್ಯಾಲೆನ್ಸ್ ಖಾತೆ, ಜನ್-ಧನ್ ಯೋಜನೆ (PMJDY) ರಾಷ್ಟ್ರದಲ್ಲಿ ಅದ್ಭುತವನ್ನು ಸೃಷ್ಟಿ ಮಾಡಿದೆ ಎಂದು ಬಣ್ಣಿಸಿದರು.

ಇದಕ್ಕೂ ಮುನ್ನ ಪ್ರಧಾನಿ ಮೋದಿ ಅವರು ‘ವಧ್ವನ್ ಪೋರ್ಟ್ ಪ್ರಾಜೆಕ್ಟ್’ (Vadhavan Port Project) ಉದ್ಘಾಟಿಸಿದರು. ಇದು ವಿಶೇಷವಾದ ಯೋಜನೆಯಾಗಿದ್ದು, ಭಾರತದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಮೋದಿ ಭರವಸೆ ವ್ಯಕ್ತಪಡಿಸಿದರು.ಇದನ್ನೂ ಓದಿ: ವಿದ್ಯಾರ್ಥಿ ಭವನ ಹೋಟೆಲ್‌ನಲ್ಲಿ ಮಸಾಲೆ ದೋಸೆ ಸವಿದ ಬ್ಯಾಡ್ಮಿಂಟನ್ ದಂತಕಥೆ ಪ್ರಕಾಶ್ ಪಡುಕೋಣೆ

Share This Article