ಜೀವನ ಮಾಡಲು ಏನೂ ಉಳಿದಿಲ್ಲ: 50 ಲಕ್ಷದ ಆಡಿ ಕಾರು ಮಳೆ ನೀರಿನಲ್ಲಿ ಮುಳುಗಿದ ಬಳಿಕ ಮಾಲೀಕನ ಪ್ರತಿಕ್ರಿಯೆ

Public TV
1 Min Read
Audi car Vadodara man

ಗುಜರಾತ್: ಭಾರೀ ಮಳೆಯು ಗುಜರಾತ್‌ನಲ್ಲಿ (Gujarat Rain) ಅನಾಹುತವನ್ನು ಸೃಷ್ಟಿಸಿದ್ದು, ರಾಜ್ಯದಾದ್ಯಂತ ತೀವ್ರ ಜಲಾವೃತ ಮತ್ತು ಪ್ರವಾಹದಂತಹ ಪರಿಸ್ಥಿತಿಗಳನ್ನು ಸೃಷ್ಟಿಸಿದೆ. ವಡೋದರಾದಲ್ಲಿ (Vadodara), ಪರಿಸ್ಥಿತಿಯು ನಿವಾಸಿಗಳಿಗೆ ಭೀಕರವಾಗಿದೆ.

ಸ್ಥಳೀಯರೊಬ್ಬರು ತಮ್ಮ ಸಂಕಟದ ಅನುಭವವನ್ನು ಹಂಚಿಕೊಂಡಿದ್ದಾರೆ. ಎಡೆಬಿಡದೇ ಸುರಿಯುತ್ತಿರುವ ಮಳೆಯು ತನ್ನ ಬಂಗಲೆಯ ಡ್ರೈವಾಲ್‌ನಲ್ಲಿ ನಿಲ್ಲಿಸಿದ್ದ ತನ್ನ ಮೂರು ಕಾರುಗಳನ್ನು ಮುಳುಗಿಸಿ ತೀವ್ರವಾಗಿ ಹಾನಿಗೊಳಿಸಿದೆ ಎಂದು ಬಹಿರಂಗಪಡಿಸಿದ್ದಾರೆ. ಇದನ್ನೂ ಓದಿ: ಗ್ರಾಹಕರಿಗೆ ಉಚಿತವಾಗಿ 100 ಜಿಬಿ ಕ್ಲೌಡ್ ಸಂಗ್ರಹ ನೀಡಲಿದೆ ರಿಲಯನ್ಸ್ ಜಿಯೋ

GUJARATH FLOODS

ವಡೋದರಾ ನಿವಾಸಿಯು ತನ್ನ ವಾಹನಗಳ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. ಆಡಿ A6 (Audi Car), ಫೋರ್ಡ್ ಇಕೋಸ್ಪೋರ್ಟ್ ಮತ್ತು ಮಾರುತಿ ಸುಜುಕಿ ಸಿಯಾಜ್ ಕಾರುಗಳು ಭಾಗಶಃ ನೀರಿನಲ್ಲಿ ಹಲವಾರು ಇಂಚುಗಳಷ್ಟು ಮುಳುಗಿದೆ. ಈ ಬಗ್ಗೆ ಹತಾಶೆಯನ್ನು ವ್ಯಕ್ತಪಡಿಸುತ್ತಾ, ಮೂರು ಕಾರುಗಳನ್ನು ಕಳೆದುಕೊಂಡ ನಂತರ ಜೀವನ ಮಾಡಲು ಏನೂ ಉಳಿದಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ.

ರಸ್ತೆಯಲ್ಲಿ ಕಾರುಗಳನ್ನು ನಿಲ್ಲಿಸಿದ್ದರಿಂದ ಹಾನಿಯಾಗಿದೆ ಎಂದು ಅವರು ತಿಳಿಸಿದ್ದಾರೆ. ವಾಹನಗಳನ್ನು ಬಂಗಲೆಯೊಳಗೆ ಸುಸಜ್ಜಿತವಾದ ಸ್ಥಳದಲ್ಲಿ ಸುರಕ್ಷಿತವಾಗಿ ನಿಲ್ಲಿಸಲಾಗಿತ್ತು. ಏಳು ಇಂಚುಗಳಷ್ಟು ನೀರು ನನ್ನ ಮನೆಗೆ ನುಗ್ಗಿದೆ. ಹೊರಗೆ ಸುಮಾರು ನಾಲ್ಕು ಅಡಿಗಳಷ್ಟು ಏರಿಕೆಯಾಗಿದ್ದು, ಇಡೀ ನೆರೆಹೊರೆಯ ಮೇಲೆ ಪರಿಣಾಮ ಬೀರಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಜಗನ್‌ ರೆಡ್ಡಿಗೆ ಭಾರಿ ಹಿನ್ನಡೆ – ಪಕ್ಷದ ಇಬ್ಬರು ರಾಜ್ಯಸಭಾ ಸಂಸದರು ರಾಜೀನಾಮೆ; ಟಿಡಿಪಿ ಸೇರ್ಪಡೆಗೆ ಸಜ್ಜು

ಮೂರನೇ ಬಾರಿಗೆ ಈ ಸಮಸ್ಯೆಯನ್ನು ಎದುರಿಸುತ್ತಿದ್ದೇನೆ. ಹಿಂದೆ ನಾನಿದ್ದ ಸ್ಥಳದಲ್ಲಿ ಎರಡು ಬಾರಿ ಸಮಸ್ಯೆಯಾಗಿತ್ತು. ಈ ಸ್ಥಳದಲ್ಲಿ ನಾಲ್ಕು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಪ್ರವಾಹ ಪರಿಸ್ಥಿತಿ ಎದುರಿಸುವಂತಾಗಿದೆ ಎಂದು ಹೇಳಿದ್ದಾರೆ.

Share This Article