ಶ್ರೀಮಂತರ ಪಟ್ಟಿ: ಅಂಬಾನಿ ಹಿಂದಿಕ್ಕಿ ಅಗ್ರ ಸ್ಥಾನಕ್ಕೇರಿದ ಗೌತಮ್ ಅದಾನಿ

Public TV
2 Min Read
Gautham Adani

ನವದೆಹಲಿ: ಹುರನ್ ಇಂಡಿಯಾ ಶ್ರೀಮಂತರ ಪಟ್ಟಿಯಲ್ಲಿ ಗೌತಮ್ ಅದಾನಿ (Gautam Adani), ಮುಕೇಶ್ ಅಂಬಾನಿ (Mukesh Ambani) ಯವರನ್ನು ಹಿಂದಿಕ್ಕುವ ಮೂಲಕ ಅಗ್ರ ಸ್ಥಾನಕ್ಕೇರಿದ್ದಾರೆ.

11.2 ಲಕ್ಷ ಕೋಟಿ ರೂ. ಸಂಪತ್ತನ್ನು ಹೊಂದಿರುವ ಗೌತಮ್ ಅದಾನಿ ಹಾಗೂ ಹುರುನ್ ಇಂಡಿಯಾ 2024 ಶ್ರೀಮಂತರ ಪಟ್ಟಿಯಲ್ಲಿ (Hurun India Rich List 2024) ಮುಕೇಶ್ ಅಂಬಾನಿಯವರನ್ನು ಹಿಂದಿಕ್ಕುವ ಮೂಲಕ ಮೊದಲ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಈ ವರ್ಷದ ಜು.31 ರವರೆಗಿನ ಉದ್ಯಮಿಗಳ ಸಂಪತ್ತಿನ ಲೆಕ್ಕಾಚಾರವನ್ನು ಆಧರಿಸಿ 10.14 ಲಕ್ಷ ಕೋಟಿ ರೂ. ಸಂಪತ್ತನ್ನು ಹೊಂದಿರುವ ಮುಕೇಶ್ ಅಂಬಾನಿ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.ಇದನ್ನೂ ಓದಿ: ಲವ್ ಈಸ್ ಲೈಫ್: ಭರತ್ ಕುಮಾರ್ ನಟನೆಯ ಚಿತ್ರಕ್ಕೆ ಮುಹೂರ್ತ

ದೇಶವು ಏಷ್ಯಾದ ಸಂಪತ್ತನ್ನು ಸೃಷ್ಟಿಸುವ ಒಂದು ಎಂಜಿನ್ ಆಗಿ ಹೊರಹೊಮ್ಮುತ್ತಿದೆ. ಜೊತೆಗೆ ಚೀನಾ ಶೇ.25 ರಷ್ಟು ಕುಸಿತ ಕಂಡಾಗಲೂ ಭಾರತ ಶೇ.29 ರಷ್ಟು ಏರಿಕೆಯನ್ನು ಕಂಡಿದೆ ಎಂದು ಹುರುನ್ ಸಂಸ್ಥಾಪಕ ಹಾಗೂ ಮುಖ್ಯ ಸಂಶೋಧಕ ಅನಸ್ ರೆಹಮಾನ್  (Anas Rahman) ತಿಳಿಸಿದ್ದಾರೆ.

ಅದಾನಿ ಮತ್ತು ಅಂಬಾನಿ ನಂತರ ಮೂರನೇ ಸ್ಥಾನದಲ್ಲಿ 3.14 ಲಕ್ಷ ಕೋಟಿ ರೂ. ಸಂಪತ್ತನ್ನು ಹೊಂದಿರುವ ಹೆಚ್‌ಸಿಎಲ್ ಟೆಕ್ನಾಲಾಜಿಸ್‌ನ ಶಿವ ನಡಾರ್ ಹಾಗೂ ಅವರ ಕುಟುಂಬ ಪಡೆದುಕೊಂಡಿದೆ. ನಾಲ್ಕು ಮತ್ತು ಐದನೇ ಸ್ಥಾನಗಳಲ್ಲಿ ಕ್ರಮವಾಗಿ 2.89 ಲಕ್ಷ ಕೋಟಿ ರೂ. ಸಂಪತ್ತು ಹೊಂದಿರುವ ಸೈರಸ್ ಎಸ್ ಪೂನಾವಾಲಾ ಹಾಗೂ ಅವರ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (Serum Institute Of India) ಕುಟುಂಬ ಮತ್ತು 2.49 ಲಕ್ಷ ಕೋಟಿ ರೂ. ಸಂಪತ್ತು ಹೊಂದಿರುವ ಸನ್ ಫಾರ್ಮಾಸ್ಯುಟಿಕಲ್ ಇಂಡಸ್ಟ್ರೀಸ್‌ನ ದಿಲೀಪ್ ಶಾಂಘ್ವಿ ಪಡೆದುಕೊಂಡಿದ್ದಾರೆ.ಇದನ್ನೂ ಓದಿ: ವಿತ್ತೀಯ ಹಂಚಿಕೆ ವಿಷಯಗಳಲ್ಲಿ 16ನೇ ಹಣಕಾಸು ಆಯೋಗಕ್ಕೆ ಪ್ರಮುಖ ಶಿಫಾರಸು ಮಾಡಿದ ರಾಜ್ಯ ಸರ್ಕಾರ

ದೇಶಾದ್ಯಂತ ಬಿಲಿಯನೇರ್ (ನೂರು ಕೋಟಿ) ಸಂಖ್ಯೆ ಹೆಚ್ಚಾಗಿದ್ದು, 334ಕ್ಕೆ ತಲುಪಿ ದಾಖಲೆ ನಿರ್ಮಿಸಿದೆ ಎಂದು ವರದಿಯೊಂದು ತಿಳಿಸಿದೆ. ಜೊತೆಗೆ ಕಳೆದ ವರ್ಷ ಭಾರತವು ಪ್ರತಿ ಐದು ದಿನಗಳಿಗೆ ಒಬ್ಬ ಬಿಲಿಯನೇರ್‌ನ್ನು ಉತ್ಪಾದಿಸುವ ಮೂಲಕ 259 ಬಿಲಿಯನೇರ್‌ಗಳನ್ನು ಹೊಂದಿತ್ತು ಎಂದು ತಿಳಿಸಿದೆ. 7 ವರ್ಷ ಹಿಂದಿನ ಬೆಳವಣಿಗೆಯನ್ನು ತುಲನೆ ಮಾಡಿದಾಗ ಹುರುನ್ ಇಂಡಿಯಾ ಶ್ರೀಮಂತರ ಪಟ್ಟಿಯು ಶೇ.1520ರಷ್ಟು ಗಣನೀಯವಾಗಿ ವಿಸ್ತರಿಸಿದೆ. 1500 ವ್ಯಕ್ತಿಗಳು 1 ಸಾವಿರ ಕೋಟಿ ರೂ.ಗಿಂತಲೂ ಹೆಚ್ಚಿನ ಸಂಪತ್ತಿನ ಮೌಲ್ಯ ಹೊಂದಿದ್ದಾರೆ ಎಂದು ವರದಿಯೊಂದು ತಿಳಿದು ಬಂದಿದೆ.

Share This Article