ತಮಿಳು ನಟಿ ರೇಖಾ ನಾಯರ್ ಕಾರು ಅಪಘಾತ: ವ್ಯಕ್ತಿಯೋರ್ವ ಸಾವು

Public TV
1 Min Read
rekha nair 1

ಮಿಳು ನಟಿ ರೇಖಾ ನಾಯರ್ (Rekha Nair) ಕಾರು ಅಪಘಾತವಾಗಿದ್ದು, 55 ವಯಸ್ಸಿನ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ನಿನ್ನೆ (ಆ.28) ಚೆನ್ನೈನ ಜಾಫರ್‌ಖಾನ್‌ಪೇಟೆಯ ಅಣ್ಣಿ ಸತ್ಯನಗರದಲ್ಲಿ ತಡರಾತ್ರಿ ಈ ಘಟನೆ ನಡೆದಿದೆ. ಇದನ್ನೂ ಓದಿ:ಜೀವನ ಸಂಗಾತಿಯನ್ನು ಪರಿಚಯಿಸಿ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌ ಕೊಟ್ಟ ರಂಜನಿ ರಾಘವನ್

rekha nair

ಮೃತಪಟ್ಟ ವ್ಯಕ್ತಿಯನ್ನು ಮಂಜನ್ ಎಂದು ಗುರುತಿಸಲಾಗಿದ್ದು, ನಟಿ ರೇಖಾ ನಾಯರ್ ಅವರ ಡ್ರೈವರ್ ಕಾರನ್ನು ಅವರ ಎದೆಯ ಮೇಲೆ ಚಲಾಯಿಸಿದಕ್ಕೆ ರಸ್ತೆಯ ಮೇಲೆ ಬಿದ್ದಿದ್ದಾರೆ ಎಂದು ವರದಿಯಾಗಿದೆ. ಈ ವೇಳೆ, ಚಾಲಕ ಕಾರು ನಿಲ್ಲಿಸದೇ ಹಾಗೇ ಹೋಗಿದ್ದಾನೆ. ಸ್ಥಳಿಯರು ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ಇನ್ನೂ ನಟಿ ರೇಖಾ ನಾಯರ್ ಅವರ ಕಾರಿನ ಚಾಲಕನನ್ನು ಚೆನ್ನೈನ ಎಂಜಿಆರ್ ನಗರದ ಪೊಲೀಸರು ಬಂಧಿಸಿದ್ದಾರೆ. ಆದರೆ, ಘಟನೆಯ ವೇಳೆ ರೇಖಾ ನಾಯರ್ ವಾಹನದಲ್ಲಿದ್ದರೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇನ್ನೂ ಮಂಜನ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರಾಯಪೆಟ್ಟ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಅಪಘಾತದ ಕುರಿತು ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.

Share This Article