ಭೋಪಾಲ್: ನದಿಗೆ ಕಿಡಿಗೇಡಿಗಳು 50 ಹಸುಗಳನ್ನು ಎಸೆದಿದ್ದು, ಅದರಲ್ಲಿ 20 ಹಸುಗಳು ಮೃತಪಟ್ಟ ಘಟನೆ ಸಾತ್ನಾ ಜಿಲ್ಲೆಯ ನಾಗೋಡು (Nagod) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಹಸುಗಳು ನೀರಿನಲ್ಲಿ ತೇಲಿಕೊಂಡು ಹೋಗುತ್ತಿರುವ ಹೃದಯವಿದ್ರಾವಕ ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತನಿಖೆ ವೇಳೆ 15 ರಿಂದ 20 ಆಕಳು ಮೃತಪಟ್ಟಿದ್ದು ಖಚಿತವಾಗಿದೆ.ಇದನ್ನೂ ಓದಿ:ಗುಜರಾತ್‌ನಲ್ಲಿ ಮಳೆ ಅವಾಂತರ – 15 ಸಾವು, 20 ಸಾವಿರ ಮಂದಿ ಸ್ಥಳಾಂತರ
ಬಾಮ್ಹೋರ್ (Baumer) ಹತ್ತಿರದ ರೈಲ್ವೆ ಸೇತುವೆ ಬಳಿ ಆಕಳು ನದಿಯಲ್ಲಿ ತೇಲಿ ಹೋಗುತ್ತಿರುವ ದೃಶ್ಯ ವೀಡಿಯೋದಲ್ಲಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ನಾಗೋಡು ಪೊಲೀಸ್ ಅಧಿಕಾರಿ ಅಶೋಕ್ ಪಾಂಡ್ಯ ತಿಳಿಸಿದ್ದಾರೆ.
ನಾಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಆರೋಪಿಯನ್ನು ಬಂಧಿಸಲು ಶೋಧಕಾರ್ಯ ನಡೆದಿದೆ ಎಂದು ತಿಳಿದು ಬಂದಿದೆ.ಇದನ್ನೂ ಓದಿ: ಪಾಕ್ ಸೇರಿ ಇತರ ವಿದೇಶಿ ಏಜೆಂಟರಿಗೆ ನೌಕಾದಳದ ರಹಸ್ಯ ಫೋಟೋ ಹಂಚಿಕೆ – NIAಯಿಂದ ಮೂವರು ವಶಕ್ಕೆ