– ರತ್ನಗಿರಿಯಲ್ಲಿ ನ್ಯಾಯಕ್ಕಾಗಿ ಪ್ರತಿಭಟನೆ
ಮುಂಬೈ: ಕಾಲೇಜಿನಿಂದ ಮನೆಗೆ ಹಿಂತಿರುಗುತ್ತಿದ್ದ ನರ್ಸಿಂಗ್ ವಿದ್ಯಾರ್ಥಿನಿಯ (Student) ಪ್ರಜ್ಞೆ ತಪ್ಪಿಸಿ ರಿಕ್ಷಾ ಚಾಲಕ ಆಕೆಯ ಮೇಲೆ ಅತ್ಯಾಚಾರವೆಸಗಿರುವ ಘಟನೆ ಮಹಾರಾಷ್ಟ್ರದ (Maharashtra) ರತ್ನಗಿರಿಯಲ್ಲಿ ನಡೆದಿದೆ.
19 ವರ್ಷದ ನರ್ಸಿಂಗ್ ವಿದ್ಯಾರ್ಥಿನಿ ಕಾಲೇಜಿನಿಂದ ಮನೆಗೆ ತೆರಳುವ ಸಲುವಾಗಿ ರಿಕ್ಷಾ ಹತ್ತಿದ್ದಳು. ದಾರಿ ಮಧ್ಯೆ ಆಟೋ ಚಾಲಕ ನೀರಿನಲ್ಲಿ ಅಮಲು ಪದಾರ್ಥ ಸೇರಿಸಿ ಆಕೆಗೆ ಕುಡಿಯಲು ನೀಡಿದ್ದಾನೆ. ಇದನ್ನು ಅರಿಯದೆ ನೀರನ್ನು ಕುಡಿದ ವಿದ್ಯಾರ್ಥಿನಿ ಕೆಲವೇ ಕ್ಷಣಗಳಲ್ಲಿ ಪ್ರಜ್ಞೆ ತಪ್ಪಿದ್ದಾಳೆ. ಬಳಿಕ ಆಕೆಯನ್ನು ಯಾರೂ ಇಲ್ಲದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಚಾಲಕ ಅತ್ಯಾಚಾರ ವೆಸಗಿದ್ದಾನೆ. ಇದನ್ನೂ ಓದಿ: ಅಬಕಾರಿ ನೀತಿ ಹಗರಣ; ಬಿಆರ್‌ಎಸ್ ನಾಯಕಿ ಕವಿತಾಗೆ ‘ಸುಪ್ರೀಂ’ ಜಾಮೀನು
19-year-old nursing student raped in Maharashtra’s Ratnagiri.
The incident happened while she boarded an auto rickshaw to reach home. She was offered water laced with sedatives, by the auto driver. He thereafter took her to a secluded place, raped her, and fled the scene.… pic.twitter.com/VHKMxlVIcn
— Vani Mehrotra (@vani_mehrotra) August 27, 2024
ಎಚ್ಚರಗೊಂಡ ಬಳಿಕ ಸಂತ್ರಸ್ತೆ ಮನೆಯವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ. ಅಲ್ಲದೇ ಘಟನೆಯ ಕುರಿತು ಆ.26 ರಂದು ಮನೆಯವರೊಂದಿಗೆ ತೆರಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯ ಪತ್ತೆಗಾಗಿ ತನಿಖೆ ಕೈಗೊಂಡಿದ್ದಾರೆ. ಘಟನೆ ನಡೆದ ಪ್ರದೇಶದಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನೂ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಖರ್ಗೆ ಕುಟುಂಬಕ್ಕೆ ಸಿಎ ಸೈಟ್ ಹಂಚಿಕೆ ಮತ್ತೊಂದು ಮುಡಾ ಹಗರಣ- ಛಲವಾದಿ ನಾರಾಯಣಸ್ವಾಮಿ
ಇನ್ನು ಈ ಘಟನೆಯನ್ನು ಖಂಡಿಸಿ ರತ್ನಗಿರಿಯಲ್ಲಿ ರಸ್ತೆಗಳನ್ನು ತಡೆದು ನ್ಯಾಯಕ್ಕಾಗಿ ಪ್ರತಿಭಟಿಸುತ್ತಿದ್ದಾರೆ. ಅಲ್ಲದೇ ರತ್ನಗಿರಿಯ ನರ್ಸಿಂಗ್ ಸಿಬ್ಬಂದಿ ಆಸ್ಪತ್ರೆಯ ಎದುರು ಪ್ರತಿಭಟನೆ ನಡೆಸುತ್ತಿದ್ದು, ಕೃತ್ಯವೆಸಗಿದ ವ್ಯಕಿಯನ್ನು ಬಂಧಿಸಿ ಗಲ್ಲಿಗೇರಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೋಲ್ಕತ್ತಾದಲ್ಲಿ (Kolkata) ಟ್ರೈನಿ ವೈದ್ಯೆಯ ಮೇಲೆ ಅತ್ಯಾಚಾರ ಹಾಗೂ ಹತ್ಯೆಯನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿರುವ ಬೆನ್ನಲ್ಲೇ ಮಹಾರಾಷ್ಟ್ರದಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದೆ. ಇದನ್ನೂ ಓದಿ: Exclusive | ಪರಪ್ಪನ ಅಗ್ರಹಾರ ಸೆಲ್ ಒಳಗಡೆ ಜಾಲಿ ಟ್ರಿಪ್‌ಗೆ ಹೋದಂತೆ ಕೈದಿಗಳ ಫೋಟೋ ಶೂಟ್!