ಸಿದ್ದರಾಮಯ್ಯ ಕಂಡರೆ ಬಿಜೆಪಿಯವರಿಗೆ ಭಯ, ನಮ್ಮನ್ನು ಏನು ಮಾಡಲು ಸಾಧ್ಯವಿಲ್ಲ: ಪ್ರದೀಪ್ ಈಶ್ವರ್ ಕಿಡಿ

Public TV
1 Min Read
Pradeep Eshwar 1 1

ಚಿಕ್ಕಬಳ್ಳಾಪುರ: ಮುಡಾ ಹಗರಣದಲ್ಲಿ (Muda Scam) ಸಿದ್ದರಾಮಯ್ಯರನ್ನು ಬಿಜೆಪಿಗರು ಏನೂ ಮಾಡಲು ಸಾಧ್ಯವಿಲ್ಲ. ಆಪರೇಷನ್ ಕಮಲ ಮಾಡಲು ನಮ್ಮಲ್ಲಿ ಕೆ.ಸುಧಾಕರ್ ಥರ ಎಂಎಲ್‌ಎ ಇಲ್ಲ ಎಂದು ವಿರೋಧ ಪಕ್ಷದ ವಿರುದ್ಧ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಮಾತನಾಡಿದ್ದಾರೆ. ಇದನ್ನೂ ಓದಿ:ಹ್ಯಾಪಿ ಆ್ಯನಿವರ್ಸರಿ ಚಿನ್ನ- ಅಗಲಿದ ಪತ್ನಿಗೆ ವಿಜಯ್ ರಾಘವೇಂದ್ರ ವಿಶ್

Pradeep Eshwar 1 2

ಮುಡಾ ಹಗರಣದಲ್ಲಿ ಸಿಎಂ ಅವರನ್ನು ಬಿಜೆಪಿಯವರು ಏನೂ ಮಾಡೋಕೆ ಆಗಲ್ಲ. ಸಿದ್ದರಾಮಯ್ಯನವರೇ ನಮ್ಮ ಮುಖ್ಯಮಂತ್ರಿಗಳು ಎಂದು ಶಾಸಕ ಪ್ರದೀಪ್ ಈಶ್ವರ್ ಮಾತನಾಡಿದ್ದಾರೆ. ಸಿದ್ದರಾಮಯ್ಯ ಕಂಡರೆ ಬಿಜೆಪಿಯವರಿಗೆ ಭಯ. ಸಿದ್ದರಾಮಯ್ಯರನ್ನು ಸಹಿಸಿಕೊಳ್ಳುವ ಶಕ್ತಿ ಕುಮಾರಸ್ವಾಮಿ ಮತ್ತು ವಿಜಯೇಂದ್ರಗೆ ಇಲ್ಲ. ಸಿದ್ದರಾಮಯ್ಯರನ್ನು ಸಿಎಂ ಆಗಿ ನಾವು ಉಳಿಸಿಕೊಳ್ಳುತ್ತೇವೆ. ಸಿಎಂಗೆ ಬಿಜೆಪಿಯವರು ಏನೂ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.

ಈ ವೇಳೆ, ಆಪರೇಷನ್ ಕಮಲದ ಮೂಲಕ ಸರ್ಕಾರ ಬೀಳಿಸಲು ಪ್ರಯತ್ನ ವಿಚಾರವಾಗಿ ಕೆಲ ಕಾಂಗ್ರೆಸ್ ಶಾಸಕರಿಗೆ 100 ಕೋಟಿ ಆಫರ್ ವಿಚಾರಕ್ಕೆ ಶಾಸಕ ಪ್ರದೀಪ್ ಈಶ್ವರ್ ಪ್ರತಿಕ್ರಿಯಿಸಿ, ಆಪರೇಷನ್ ಕಮಲ ಮಾಡಲು ನಮ್ಮ ಪಕ್ಷದಲ್ಲಿ ಕೆ.ಸುಧಾಕರ್ ಅಂತಹ ಎಂಎಲ್‌ಎ ಇಲ್ಲ. ಅದು ಹೇಗೆ ಅಪರೇಷನ್ ಕಮಲ ಮಾಡ್ತಾರೆ? ನಮ್ಮ ಶಾಸಕರು ಯಾರೂ ಅಂತವರಲ್ಲ. 135 ಜನ ಎಂಎಲ್‌ಎಗಳು ಇದ್ದೀವಿ, ಬಿಜೆಪಿಯವರಿಗೆ ನಮ್ಮನ್ನು ಖರೀದಿಸುವ ಶಕ್ತಿ ಇದ್ಯಾ ಎಂದು ಪ್ರಶ್ನೆ ಮಾಡಿದ್ದಾರೆ.

ವಿಜಯೇಂದ್ರ ಅವರು ಅವರ ಅಪ್ಪನ ಹೆಸರಲ್ಲಿ ರಾಜಕಾರಣಕ್ಕೆ ಬಂದಿದ್ದಾರೆ. ಕುಮಾರಸ್ವಾಮಿ ಅವರು ಪ್ರಧಾನಿ ಮಗ ಸಿಎಂ ಆಗೋದು ಗ್ರೇಟ್ ಅಲ್ಲ. ಕನಕಪುರದ ರೈತನ ಮಗ ಡಿಸಿಎಂ ಆಗೋದು ಗ್ರೇಟ್ ಎಂದು ಡಿ.ಕೆ ಶಿವಕುಮಾರ್ ಪರ ಬ್ಯಾಟಿಂಗ್ ಮಾಡಿದ್ದಾರೆ. ಕುಮಾರಸ್ವಾಮಿ ತಮ್ಮದೇ ಸಮುದಾಯದ ನಾಯಕನನ್ನು ಸಹಿಸುತ್ತಿಲ್ಲ. ಜೊತೆಗೆ ಸಿದ್ದರಾಮಯ್ಯ ಅವರ ಬೆಳವಣಿಗೆಯನ್ನು ಸಹಿಸುತ್ತಿಲ್ಲ. ಕೊನೆಗೆ ನಿಮ್ಮ ಬ್ರದರ್ ಅಣ್ಣನ ಮಕ್ಕಳನ್ನ ಬೆಳವಣಿಗೆಯನ್ನು ಕೂಡ ಸಹಿಸುತ್ತಿಲ್ಲ ಎಂದು ಪ್ರದೀಪ್ ಈಶ್ವರ್ ವಾಗ್ದಾಳಿ ನಡೆಸಿದ್ದಾರೆ.

Share This Article