ಮತ್ತೆ ಕನ್ನಡ ಸಿನಿಮಾ ಮಾಡೋದಾಗಿ ಸುಳಿವು ಕೊಟ್ಟ ‘ಮಂಗಾರು ಮಳೆ 2’ ನಟಿ ನೇಹಾ ಶೆಟ್ಟಿ

Public TV
2 Min Read
neha shetty

ರಾವಳಿ ಬೆಡಗಿ ನೇಹಾ ಶೆಟ್ಟಿ (Neha Shetty) ಸದ್ಯ ಟಾಲಿವುಡ್‌ನಲ್ಲಿ (Tollywood) ಸದ್ದು ಮಾಡುತ್ತಿದ್ದಾರೆ. ಇತ್ತೀಚೆಗೆ ಕಾರ್ಯಕ್ರಮವೊಂದಕ್ಕಾಗಿ ಬೆಂಗಳೂರಿಗೆ ಬಂದ‌ ನೇಹಾ ಶೆಟ್ಟಿ, ಕನ್ನಡ ಸಿನಿಮಾದಲ್ಲಿ ನಟಿಸುವ ಬಗ್ಗೆ ಸುಳಿವು ನೀಡಿದ್ದಾರೆ. ಮತ್ತೆ ಕನ್ನಡ ಸಿನಿಮಾ ಮಾಡೋದಾಗಿ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಇದನ್ನೂ ಓದಿ:ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ: ಶೀಘ್ರವೇ ದರ್ಶನ್ ಬೇರೆ ಜೈಲಿಗೆ ಶಿಫ್ಟ್?

Neha shetty 2ನೇಹಾ ಶೆಟ್ಟಿ ಮಾತನಾಡಿ, ಕನ್ನಡದಲ್ಲಿ ಎಷ್ಟು ಒಳ್ಳೆಯ ಸಿನಿಮಾ ಬರುತ್ತಿದೆ. ‘ಕಾಂತಾರ’ ಚಿತ್ರಕ್ಕೆ ನ್ಯಾಷನಲ್ ಅವಾರ್ಡ್ ಬಂದಿದೆ ಇದರ ಬಗ್ಗೆ ಖುಷಿ ಇದೆ ಎಂದಿದ್ದಾರೆ. ಬಳಿಕ ನೇಹಾ ಶೆಟ್ಟಿ ಕನ್ನಡಕ್ಕೆ ಬರುವ ಬಗ್ಗೆ ಪ್ಲ್ಯಾನ್ ಮಾಡಿದ್ದಾರೆ. ಕನ್ನಡದ ಸ್ಕ್ರಿಪ್ಟ್‌ಗಳನ್ನು ಕೇಳ್ತಿರೋ ನೇಹಾ ಶೆಟ್ಟಿ, ಒಂದು ಒಳ್ಳೆಯ ಕಥೆಗಾಗಿ ಕಾಯುತ್ತಿದ್ದಾರೆ. ಅದು ಕಂಪ್ಲೀಟ್ ಹೊಸ ರೀತಿಯ ಪಾತ್ರವೇ ಆಗಿರಬೇಕು ಅನ್ನೋದು ಆಸೆ ಎಂದು ತಿಳಿಸಿದ್ದಾರೆ.

neha shetty

ನಾನು ಎಲ್ಲೂ ಹೋಗಿಲ್ಲ. ಇಲ್ಲಿಯೇ ಇದ್ದೇನೆ. ಅಪ್ಪ-ಅಮ್ಮ ಬೆಂಗಳೂರಲ್ಲಿಯೇ ಇದ್ದಾರೆ. ಆಗಾಗ ಇಲ್ಲಿಗೆ ಬರುತ್ತಲೇ ಇರುತ್ತೇನೆ. ಹಾಗೆ ಕನ್ನಡದಲ್ಲಿ ಆಫರ್ಸ್ ಸಿಗ್ತಿಲ್ಲ ಅಂತ ಬೇರೆ ಕಡೆಗೆ ಹೋಗಿಲ್ಲ. ತಮಿಳು, ಮಲೆಯಾಳಂ, ತೆಲುಗು ಭಾಷೆಯಿಂದಲೂ ಆಫರ್ಸ್ ಬಂದಿವೆ. ಆದರೆ, ನಾನು ತೆಲುಗು ಆಯ್ಕೆ ಮಾಡಿಕೊಂಡೆ ನೇಹಾ ಶೆಟ್ಟಿ ಮಾಧ್ಯಮಕ್ಕೆ ಮಾತನಾಡಿದ್ದಾರೆ.

neha shetty

ಎರಡ್ಮೂರು ತಿಂಗಳು ಕಾಯಿರಿ, ಕನ್ನಡ ಸಿನಿಮಾ ಬಗ್ಗೆ ನಿಮಗೆ ಸರ್ಪ್ರೈಸ್ ಸಿಗುತ್ತದೆ ಎಂದು ನಟಿ ಖುಷಿಯಿಂದ ಹೇಳಿಕೊಂಡಿದ್ದಾರೆ. ಕಥೆಯಲ್ಲಿ ಹೊಸತನ, ನಟನೆಗೆ ಸ್ಕೋಪ್ ಇರಬೇಕು ಖಂಡಿತಾ‌ ಕನ್ನಡದಲ್ಲಿ  ನಟಿಸುತ್ತೇನೆ ಎಂದು ನಟಿ ಖುಷಿಯಿಂದ ಮಾತನಾಡಿದ್ದಾರೆ. ನಟಿಯ ಕನ್ನಡದ ಮುಂದಿನ ಪ್ರಾಜೆಕ್ಟ್‌ ಯಾವುದಿರಬಹುದು ಎಂದು ಫ್ಯಾನ್ಸ್‌ ಕ್ಯೂರಿಯಸ್‌ ಆಗಿದ್ದಾರೆ. ಸಿನಿಮಾಗಾಗಿ ಎದುರು ನೋಡ್ತಿದ್ದಾರೆ.

ಅಂದಹಾಗೆ, ಮೂಲತಃ ಮಂಗಳೂರಿನವರಾದ ನೇಹಾ ಶೆಟ್ಟಿ ಅವರು 2016ರಲ್ಲಿ ‘ಮುಂಗಾರು ಮಳೆ 2’ (Mungaru Male 2) ಚಿತ್ರದಲ್ಲಿ ಗೋಲ್ಡನ್‌ ಸ್ಟಾರ್‌ ಗಣೇಶ್‌ಗೆ ನಾಯಕಿಯಾಗಿ ನಟಿಸಿದರು. ಬಳಿಕ ತೆಲುಗಿನತ್ತ ಮುಖ ಮಾಡಿದರು.  ಅಲ್ಲಿ ಗಲ್ಲಿ ರೌಡಿ, ಮೋಸ್ಟ್‌ ಎಲಿಜಿಬಲ್‌ ಬ್ಯಾಚುಲರ್‌, ಡಿಜೆ ಟಿಲ್ಲು, ರೂಲ್ಸ್‌ ರಂಜನ್‌, ಗ್ಯಾಂಗ್ಸ್‌ ಆಫ್‌ ಗೋದಾವರಿ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಟಾಲಿವುಡ್‌ನಲ್ಲಿ ನಟಿಗೆ ಭಾರೀ ಬೇಡಿಕೆ ಇದೆ.

Share This Article