ಕೀಬೋರ್ಡ್‌ನಲ್ಲಿ ಡಾಲರ್ ಬದಲು ರುಪಿ ಚಿಹ್ನೆ ಯಾಕಿಲ್ಲ – ಓಲಾ ಸಿಇಒ ಪ್ರಶ್ನೆ

Public TV
1 Min Read
Bhavish Aggarwal ola ceo

ನವದೆಹಲಿ: ಭಾರತದಲ್ಲಿ ಮಾರಾಟವಾಗುವ ಕಂಪ್ಯೂಟರ್ (Computer) ಮತ್ತು ಲ್ಯಾಪ್‌ಟಾಪ್‌ (Lap Top) ಕೀಬೋರ್ಡ್‌ನಲ್ಲಿರುವ (Key Board) ಡಾಲರ್ ಬದಲಿಗೆ ರುಪಿ ಚಿಹ್ನೆಯನ್ನು ಅಳವಡಿಸಬೇಕು ಎಂದು ಎಲೆಕ್ಟ್ರಿಕ್‌ ಸ್ಕೂಟರ್‌ ತಯಾರಾಕ ಓಲಾ (Ola) ಕಂಪನಿಯ ಸಿಇಒ ಭವಿಶ್ ಅಗರ್ವಾಲ್ (Bhavish Aggarwal)  ಸಲಹೆ ನೀಡಿದ್ದಾರೆ.

ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಬೇರೆ ದೇಶಗಳಲ್ಲಿ ಮಾರಾಟವಾಗುವ ಕೀಬೋರ್ಡ್‌ನಲ್ಲಿ ಆ ದೇಶಗಳ ಕರೆನ್ಸಿಗಳ ಚಿಹ್ನೆ ಇರುತ್ತದೆ. ಆದರೆ ಭಾರತದಲ್ಲಿ ಮಾರಾಟವಾಗುವ ಕಂಪ್ಯೂಟರ್ ಮತ್ತು ಲ್ಯಾಪ್‌ಟಾಪ್‌ನ ಕೀಬೋರ್ಡ್‌ನಲ್ಲಿ ಡಾಲರ್ ಚಿಹ್ನೆ ಇರುವುದು ಆಶ್ಚರ್ಯ. ಅದನ್ನು ರುಪಿ ಚಿಹ್ನೆಯಾಗಿ ಬದಲಾವಣೆ ಮಾಡಬೇಕು ಎಂದು ಕೀಬೋರ್ಡ್‌ ಫೋಟೋ ಸಹಿತ ಹಂಚಿಕೊಂಡು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ: ಶೀಘ್ರವೇ ದರ್ಶನ್ ಬೇರೆ ಜೈಲಿಗೆ ಶಿಫ್ಟ್?

ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಪರ ವಿರೋಧದ ಚರ್ಚೆಗೆ ಗ್ರಾಸವಾಗಿದೆ.

ಕೆಲವರು ಡಾಲರ್ ಚಿಹ್ನೆಯನ್ನು ಬರೀ ಡಾಲರ್‌ಗಷ್ಟೇ ಸಿಮಿತವಾಗಿ ಬಳಸುವುದಿಲ್ಲ. ಇನ್ನು ಹಲವು ರೀತಿಯ ಚಿಹ್ನೆಯಾಗಿ ಅದನ್ನು ಬಳಸುತ್ತಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

 

Share This Article